BADAM POORI ಬಾದಾಮ್ ಪೂರಿ
ದೀಪಾವಳಿ ಹಬ್ಬದ ವಿಶೇಷ ಸುಲಭವಾಗಿ ಮಾಡಬಹುದಾದ ಸಿಹಿ! ಮಾಡುವ ವಿಧಾನ:- 2 ಲೋಟ ಸಕ್ಕರೆಗೆ 1 ಲೋಟ ನೀರು ಹಾಕಿ ಬಿಸಿಯಾಗಲು ಇಡಿ. 1 ಎಳೆ ಪಾಕ ಬಂದೊಡನೆ ಒಲೆಯಿಂದ ಇಳಿಸಿ, ಸ್ವಲ್ಪ ಏಲಕ್ಕಿ ಪುಡಿ ಹಾಕಿ. 1 ಲೋಟ ಮೈದಾ ಹಿಟ್ಟಿಗೆ, 2 ಚಮಚ ತುಪ್ಪ ಬಿಸಿ ಮಾಡಿ ಹಾಕಿ. ಚಿಟಿಕೆ ಉಪ್ಪು, ಚಿಟಿಕೆ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ. ಬಾದಾಮ್ ಪೂರಿ ಅಂದ ಮೇಲೆ ಬಾದಾಮಿ ಹಾಕದಿದ್ದರೆ ಹೇಗೇ?! 1/4 ಲೋಟ ಬಾದಾಮಿ ನುಣ್ಣಗೆ …









