Kannada Tindi Tinisu ಖಾರ ತಿನಿಸುಗಳು

MASALA HIDUKIDA BELE ಮಸಾಲ ಹಿದುಕಿದ ಬೇಳೆ

ಸಂಜೆ ಕಾಫಿ ಅಥವಾ ಟೀ ಜೊತೆಗೆ ಖಾರಾ ಏನಾದರೂ ತಿನ್ನಬೇಕು ಅನ್ನಿಸಿದರೆ ಈ ಮಸಾಲ ಹಿದುಕಿದ ಬೇಳೆ ತುಂಬಾ ಚೆನ್ನಾಗಿರುತ್ತದೆ!

ಮಾಡುವ ವಿಧಾನ:-

ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿ, ಹತ್ತಿ ಬಟ್ಟೆಯ ಮೇಲೆ ಹರಡಿ, 1 ಗಂಟೆ ಒಣಗಿಸಿ.

1/2 ಗಿಟುಕು ಒಣ ಕೊಬ್ಬರಿ ಸಣ್ಣಗೆ, ತೆಳ್ಳಗೆ ಹೆಚ್ಚಿಡಿ.

ಬಾಣಲೆಯಲ್ಲಿ ಎಣ್ಣೆ ಹಾಕಿ, ಕಾದ ನಂತರ ಉರಿ ಕಡಿಮೆ ಮಾಡಿ ಸ್ವಲ್ಪ ಸ್ವಲ್ಪವೇ ಹಿದುಕಿದ ಬೇಳೆ ಗರಿ ಗರಿಯಾಗಿ ಆಗುವವರೆಗೆ ಕರಿದು ತೆಗೆದಿಡಿ.

2 ಹಿಡಿ ಕಡಲೇ ಬೀಜ ಕರಿದು ತೆಗೆದಿಡಿ.

ಗೋಡಂಬಿ ಬೇಕಾದರೆ ಚಿಕ್ಕ ಚಿಕ್ಕದಾಗಿ ಹೆಚ್ಚಿ ಕರಿದು ತೆಗೆದಿಡಿ.

ಕೊನೆಯಲ್ಲಿ ಒಣ ಕೊಬ್ಬರಿ ಕರಿದು ತೆಗೆದಿಡಿ.

ಒಲೆ ಆರಿಸಿ ಸ್ವಲ್ಪ ಕರಿಬೇವು ಹಾಕಿ ಕರಿದು ತೆಗೆದಿಡಿ.

ಒಂದು ಬಟ್ಟಲಿನಲ್ಲಿ ಉಪ್ಪು, ಖಾರ ಪುಡಿ, ಚಾಟ್ ಮಸಾಲ, ಆಮ್ ಚೂರ್ ಪುಡಿ, ಚಿಟಿಕೆ ಇಂಗು ಹಾಕಿ ಚೆನ್ನಾಗಿ ಕಲೆಸಿಡಿ.

ಕರಿದ ಬೇಳೆ ಬಿಸಿ ಇರುವಾಗಲೇ ಮಸಾಲ ಪುಡಿ ಉದುರಿಸಿ ಚೆನ್ನಾಗಿ ಕಲೆಸಿ. ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವಾರವಾದರೂ ಗರಿ ಗರಿಯಾಗಿರುತ್ತದೆ! (ತಿನ್ನದೆ ಉಳಿದಿದ್ದರೆ!)

ಹಿದುಕಿದ ಬೇಳೆ ಮಾಡುವ ವಿಧಾನ ವಿಡಿಯೋ ಹಾಕಿದ್ದೇನೆ ನೋಡಿ!

ಧನ್ಯವಾದಗಳು.

Leave a Reply

Your email address will not be published.