Showing 564 Result(s)
Kannada ಉಪಹಾರ ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MAKHANA KHEER & TEMPLE CHITRANNA ಮಖಾನಾ ಖೀರ್ ಮತ್ತು ಟೆಂಪಲ್ ಚಿತ್ರಾನ್

ಮಖಾನಾ ಖೀರ್ ಮಾಡುವ ವಿಧಾನ:-ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಮಖಾನಾ ಹಾಕಿ ನಾಲ್ಕೈದು ನಿಮಿಷ ಮಧ್ಯಮ ಉರಿಯಲ್ಲಿ ಹುರಿದಿಡಿ. ತಣ್ಣಗಾದ ಮೇಲೆ ಕೈಯಿಂದ ಸ್ವಲ್ಪ ಮಖಾನಾ ಪುಡಿ ಮಾಡಿ ಮಿಕ್ಕದ್ದೆಲ್ಲ ಹಾಗೇ ಇಡಿ. ದಪ್ಪ ತಳದ ಬಾಣಲೆಯಲ್ಲಿ 1/2 ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಉಕ್ಕಲು ಬಿಡದಂತೆ ತಿರುಗಿಸುತ್ತಾ ಇರಿ.    ಹಾಲು ಅರ್ಧದಷ್ಟು ಆದಾಗ 3 ಅಥವಾ 4 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ, ಹುರಿದ ಮಖಾನಾ, ಚಿಟಿಕೆ ಏಲಕ್ಕಿ ಪುಡಿ, ತುಪ್ಪದಲ್ಲಿ …

Kannada ಉಪಹಾರ ಸಾಂಬಾರು ಮತ್ತು ಪಲ್ಯಗಳು

CHIROTI RAVE ROTTI & TOMATO KAYI CHUTNEY ಚಿರೋಟಿ ರವೆ ರೊಟ್ಟಿ ಮತ್ತು ಟೋಮೇಟೋ ಕಾಯಿ ಚಟ್ನಿ

ಪ್ರತಿ ದಿನ ಬೆಳಿಗ್ಗೆ ತಿಂಡಿಗೆ ಏನು ಮಾಡುವುದು ಎಂಬುದು ಎಲ್ಲಾ ಗೃಹಿಣಿಯರನ್ನು ಕಾಡುವ ಪ್ರಶ್ನೆ!!! ಈ ರೊಟ್ಟಿ ಮಾಡಿ ನೋಡಿ! ಮೃದುವಾಗಿ, ರುಚಿಯಾಗಿ ಇರುತ್ತದೆ. ಮಾಡುವ ವಿಧಾನ:- 1 1/2 ಲೋಟ ನೀರಿಗೆ ಸ್ವಲ್ಪ ಉಪ್ಪು, 1 ಚಮಚ ಎಣ್ಣೆ ಹಾಕಿ ಕುದಿಯಲು ಇಡಿ. ನೀರು ಕುಡಿಯಲು ಆರಂಭವಾದಾಗ 1 ಲೋಟ ಚಿರೋಟಿ ರವೆ, 2 ಚಮಚ ಅಕ್ಕಿ ಹಿಟ್ಟು ಹಾಕಿ, ಬೇಗ ಬೇಗ ಗಂಟಿಲ್ಲದ ಹಾಗೆ ಚೆನ್ನಾಗಿ ಕಲೆಸಿ, ಉರಿ ಪೂರ್ತಿಯಾಗಿ ಕಡಿಮೆ ಮಾಡಿ, ತಟ್ಟೆ …

Kannada ಸಾಂಬಾರು ಮತ್ತು ಪಲ್ಯಗಳು

GROUND NUT CURRY ಗ್ರೌಂಡ್ ನಟ್ ಕರ್ರಿ

ರುಚಿಯಾದ, ಸುಲಭವಾಗಿ ಮಾಡಬಹುದಾದ, ಚಪಾತಿ, ಅನ್ನ, ರೊಟ್ಟಿ, ದೋಸೆ ಜೊತೆಗೆ ತುಂಬಾ ಚೆನ್ನಾಗಿರುವ ಕರ್ರಿ! ಮಾಡುವ ವಿಧಾನ:- 1/2 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ. 1 ಚಮಚ ಧನಿಯ, 2 ಚಮಚ ಗಸಗಸೆ, 1/2 ಇಂಚು ಚಕ್ಕೆ, 2 ಲವಂಗ, 6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿ ಹುರಿದಿಡಿ.      ಹುರಿದ ಸಾಮಗ್ರಿಗಳನ್ನು ಪುಡಿ ಮಾಡಿ 2 ಚಮಚ ಕಾಯಿ ತುರಿ ಹಾಕಿ ನುಣ್ಣಗೆ ರುಬ್ಬಿಡಿ. ಕಡಲೇ ಬೀಜ ತರಿ ತರಿಯಾಗಿ …

Kannada Oota ಉಪಹಾರ

AMLA RICE ಆಮ್ಲ ರೈಸ್ (ಬೆಟ್ಟದ ನೆಲ್ಲಿ ಕಾಯಿ ಅನ್ನ)

ಬೆಟ್ಟದ ನೆಲ್ಲಿ ಕಾಯಿಯಲ್ಲಿ ಸಾಕಷ್ಟು ಆರೋಗ್ಯಕ್ಕೆ ಪೂರಕವಾದ ಅಂಶಗಳಿವೆ! ಅದರ ರುಚಿಯಾದ ಚಿತ್ರಾನ್ನ ಮಾಡುವ ವಿಧಾನ ಇಲ್ಲಿದೆ ನೋಡಿ:- 1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ. 6 ರಿಂದ 8 ಬೆಟ್ಟದ ನೆಲ್ಲಿ ಕಾಯಿ ತೊಳೆದು, ತುರಿದಿಡಿ. 2 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1/2 ಚಮಚ ಜೀರಿಗೆ, 1/2 ಚಮಚ ಸಾಸಿವೆ, ಸ್ವಲ್ಪ ಮೆಂತ್ಯ ಎಣ್ಣೆ ಹಾಕದೆ ಹುರಿದಿಡಿ.      6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿ …

Kannada Tindi Tinisu ಸಿಹಿ ತಿನಿಸುಗಳು

HALUBAI ಹಾಲುಬಾಯಿ

ಸಾಮಾನ್ಯವಾಗಿ ಎಲ್ಲರೂ ಮಾಡುವ ರೆಸಿಪಿ! ಮಾಡುವ ವಿಧಾನ:- 1 ಲೋಟ ಅಕ್ಕಿ 2 ಗಂಟೆ ನೆನೆಸಿಡಿ. 1 ಲೋಟ ಕಾಯಿ ತುರಿದಿಡಿ. 1 ಲೋಟ ಬೆಲ್ಲ ಪುಡಿ ಮಾಡಿಡಿ. ನೆಂದ ಅಕ್ಕಿ ಮತ್ತು ಕಾಯಿ ತುರಿಯನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ. ದಪ್ಪ ತಳದ ಬಾಣಲೆಯಲ್ಲಿ 1 ಲೋಟ ಬೆಲ್ಲದ ಪುಡಿ 1/2 ಲೋಟ ನೀರು ಹಾಕಿ ಬಿಸಿಯಾಗಲು ಇಡಿ. ಬೆಲ್ಲ ಕರಗಿದ ನಂತರ ರುಬ್ಬಿದ ಅಕ್ಕಿ ಮಿಶ್ರಣವನ್ನು ಬೆಲ್ಲದ ಪಾಕಕ್ಕೆ …

Kannada ಸಾಂಬಾರು ಮತ್ತು ಪಲ್ಯಗಳು

CURD KURMA ಕರ್ಡ್ ಕುರ್ಮಾ

ಕುರ್ಮಾ ಸಾಮಾನ್ಯವಾಗಿ ದೋಸೆ, ಚಪಾತಿ, ಪೂರಿ ಜೊತೆಗೆ ತುಂಬಾ ಚೆನ್ನಾಗಿರುವ Side dish! ಅದನ್ನು ಮೊಸರು ಹಾಕಿ ಮಾಡುವುದೇ ಈ ರೆಸಿಪಿಯ ವಿಶೇಷತೆ! ಮಾಡುವ ವಿಧಾನ:- 2 ಚಮಚ ಗಸಗಸೆ, 10 ರಿಂದ 12 ಗೋಡಂಬಿ ಬಿಸಿ ನೀರಿನಲ್ಲಿ ನೆನೆಸಿಡಿ. 5 ಚಮಚ ಕಾಯಿ ತುರಿದಿಡಿ. ನೆಂದ ಗಸಗಸೆ, ಗೋಡಂಬಿ, ಕಾಯಿ ತುರಿ, ನಾಲ್ಕೈದು ಹಸಿ ಮೆಣಸಿನಕಾಯಿ ನುಣ್ಣಗೆ ರುಬ್ಬಿಡಿ. ಖಾರಾ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ.      1 ಲೋಟ ಯಾವುದಾದರೂ ಕಾಳು (ನಾನು …

Kannada Oota ಉಪಹಾರ

VEG PALAV ( RESTAURANT STYLE) ವೆಜ್ ಪಲಾವ್

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಹೋದಾಗ ತಿನ್ನುವ ಪಲಾವ್ ರೆಸಿಪಿ ಇಲ್ಲಿದೆ. ಮಾಡುವ ವಿಧಾನ:- ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ. 1 ಲೋಟ ಬಾಸುಮತಿ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ. 1 ಬೆಳ್ಳುಳ್ಳಿ, 1 ಇಂಚು ಶುಂಠಿ, 4 ಹಸಿ ಮೆಣಸಿನಕಾಯಿ ನೀರು ಹಾಕದೆ ಪೇಸ್ಟ್ ಮಾಡಿಡಿ. ಸ್ವಲ್ಪ ಪುದೀನಾ, ಕೊತ್ತಂಬರಿ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ.     ಕುಕ್ಕರಿನಲ್ಲಿ 4 ಚಮಚ ತುಪ್ಪ/ಎಣ್ಣೆ ಹಾಕಿ, ಕಾದ ನಂತರ 1 ಇಂಚು ಚಕ್ಕೆ, …

Kannada ಸಾಂಬಾರು ಮತ್ತು ಪಲ್ಯಗಳು

SHERVA/SHORBA GRAVY ಶೇರ್ವಾ/ಶೋರ್ಬಾ ಗ್ರೇವಿ

ಸಾಮಾನ್ಯವಾಗಿ ಹೋಟೆಲ್ ನಲ್ಲಿ ಬಿರಿಯಾನಿ, ಪಲಾವ್ ಜೊತೆ ಕೊಡುತ್ತಾರೆ. ಮಾಡುವ ವಿಧಾನ:- 1 ಈರುಳ್ಳಿ, 2 ಟೋಮೇಟೋ ಸಣ್ಣಗೆ ಹೆಚ್ಚಿ , ಎಣ್ಣೆ ಹಾಕಿ ಹುರಿದು, 6 ಗೋಡಂಬಿ, 2 ಚಮಚ ಕಾಯಿ ತುರಿ ಜೊತೆ ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, 1/2 ಚಮಚ Ginger garlic paste, ಚಿಟಿಕೆ ಅರಿಷಿಣ, 1/2 ಚಮಚ ಗರಂ ಮಸಾಲ, 1/2 ಚಮಚ ಧನಿಯಾ ಪುಡಿ, 1 ಚಮಚ ಖಾರಾ ಪುಡಿ, ರುಬ್ಬಿದ ಮಿಶ್ರಣ, ಉಪ್ಪು …

Kannada ಉಪಹಾರ

MYSORE MASALA DOSA ಮೈಸೂರು ಮಸಾಲ ದೋಸೆ

ಮಸಾಲ ದೋಸೆ ಯಾರಿಗೆ ಇಷ್ಟವಿಲ್ಲ ಹೇಳಿ! ನಾನಂತೂ ಹೋಟೆಲ್ ಗೆ ಹೋದರೆ ತಿಂಡಿಗೆ ಮಸಾಲ ದೋಸೆಯನ್ನೇ ತಿನ್ನುವುದು. ಮೈಸೂರು ಮಸಾಲ ದೋಸೆ ತುಂಬಾ ಗರಿ ಗರಿಯಾಗಿರುತ್ತದೆ. ಬಣ್ಣ ಕೂಡ ಕೆಂಪು! ಮಾಡುವ ವಿಧಾನ:- ದೋಸೆ ಅಕ್ಕಿ – 3 ಲೋಟ ಉದ್ದಿನ ಬೇಳೆ – 1ಲೋಟ ಗಟ್ಟಿ ಅವಲಕ್ಕಿ – 1/2 ಲೋಟ ಕಡಲೇ ಬೇಳೆ – 1 ಚಮಚ ತೊಗರಿ ಬೇಳೆ – 1 ಚಮಚ ಮೆಂತ್ಯ – 1/8 ಚಮಚ ಅಕ್ಕಿ ಮತ್ತು ಅವಲಕ್ಕಿಯನ್ನು …