Showing 564 Result(s)
ಸೂಪ್ ಇತ್ಯಾದಿ

PALAK SOUP ಪಾಲಾಕ್ ಸೂಪ್

PALAK SOUP ಪಾಲಾಕ್ ಸೂಪ್ ಸೂಪ್ ಬಹಳ ಆರೋಗ್ಯಕರ ಆಹಾರ! ದೇಹಕ್ಕೆ ಚೈತನ್ಯ ಕೊಡುತ್ತದೆ! ಅದರಲ್ಲೂ ಪಾಲಾಕ್ ಸೂಪ್ ಇನ್ನೂ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನ:- 2 ಕಟ್ಟು ಪಾಲಾಕ್ ಸೊಪ್ಪು ತೊಳೆದು, (ಕಡ್ಡಿ ಎಳೆಯದಾಗಿದ್ದರೆ ಅದನ್ನು ಸಹ ಹಾಕಿ) 1/2 ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, 1/2 ಈರುಳ್ಳಿ ಸಣ್ಣಗೆ ಹೆಚ್ಚಿ, ಒಂದು ಚಮಚ ಎಣ್ಣೆ ಹಾಕಿ ಹುರಿದು, ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿ ಕೊಳ್ಳಿ. ಬಾಣಲೆಯಲ್ಲಿ ಒಂದು ಪಲಾವ್ ಎಲೆ, ರುಬ್ಬಿದ ಮಿಶ್ರಣವನ್ನು, …

ಸಿಹಿ ತಿನಿಸುಗಳು

Chocolate Phirni ಚಾಕೊಲೇಟ್ ಫಿರ್ನಿ

#ಥೀಮ್ ಪಾಯಸ # ಉತ್ತರ ಭಾರತದ ಬಹು ಜನಪ್ರಿಯ ಪಾಯಸ( ಖೀರ್)! ಮಾಡುವುದು ತುಂಬಾ ಸುಲಭ! ಅವರು ಹಬ್ಬಗಳಲ್ಲಿ ತಪ್ಪದೆ ಮಾಡುತ್ತಾರೆ! ಹಾಗಾದರೆ ಸಿಹಿ ಪಾಯಸದ ರೆಸಿಪಿ ನೋಡೋಣವೇ? ಚಾಕೊಲೇಟ್ ಫಿರ್ನಿ ಮಾಡುವ ವಿಧಾನ:- 2 ಚಮಚ ಬಾಸುಮತಿ ಅಕ್ಕಿಯನ್ನು ತೊಳೆದು 1/2 ಗಂಟೆ ನೆನೆಸಿಡಿ. ನಂತರ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ. 2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕುಂಕುಮ ಕೇಸರಿ ನೆನೆಸಿಡಿ. ದಪ್ಪ ತಳದ ಬಾಣಲೆಯಲ್ಲಿ 1/2 ಲೀಟರ್ ಗಟ್ಟಿ ಹಾಲು ಕುದಿಯಲು …

ಚಾಟ್ಸ್

ಮಸಾಲ ಪೂರಿ Masale Puri

ಮಸಾಲ ಪೂರಿ ಮಸಾಲ ಪೂರಿ ಚಾಟ್ ಗಳ ರಾಜ ಎಂದರೆ ತಪ್ಪಾಗಲಾರದು. ಎಲ್ಲರೂ ಇಷ್ಟ ಪಟ್ಟು ತಿನ್ನುವ ಚಾಟ್! ಅದನ್ನು ಮನೆಯಲ್ಲಿಯೇ ರುಚಿಯಾಗಿ, ಶುಚಿಯಾಗಿ ಮಾಡಿ ತಿನ್ನಬಹುದಾದರೆ ಹೊರಗಡೆ ಏಕೆ ತಿನ್ನಬೇಕು? ಈಗ ಹೇಗಿದ್ದರೂ ಮನೆ ಮಂದಿಯೆಲ್ಲಾ ಮನೆಯಲ್ಲೇ ಬಂಧಿಗಳಾಗಿದ್ದಾರೆ. ಈಗ ಮಾಡಿದರೆ ಮನೆಯಲ್ಲಿರುವರೆಲ್ಲಾ ಸಂತೋಷವಾಗಿ ತಿನ್ನಬಹುದು. ಆದರೆ ಮರೆಯದೆ ಮನೆ ಮಂದಿಯ ಸಹಾಯ ಪಡೆಯುವುದು ಮರೆಯಬೇಡಿ! ಹಾಗಾದರೆ ಸರಿ ಬನ್ನಿ ಮೊದಲು ಪೂರಿ ಮಾಡಿ ಇಡೋಣ! ಪೂರಿ ಮಾಡುವ ವಿಧಾನ:- 1 ಲೋಟ ಚಿರೋಟಿ ರವೆ, …

ಸೂಪ್ ಇತ್ಯಾದಿ

LEMON CORIANDER SOUP ಲೆಮನ್ ಕೊರಿಯಂಡರ್ ಸೂಪ್

LEMON CORIANDER SOUP ಲೆಮನ್ ಕೊರಿಯಂಡರ್ ಸೂಪ್ ಆರೋಗ್ಯಕರವಾದ, ರುಚಿಕರವಾದ, ಸುಲಭವಾಗಿ ಮಾಡಬಹುದಾದ ಸೂಪ್ ರೆಸಿಪಿ ಇಲ್ಲಿದೆ:- ನಿಮ್ಮ ಇಷ್ಟದ ತರಕಾರಿ ಸ್ವಲ್ಪ ಸ್ವಲ್ಪ ಸಣ್ಣಗೆ ಹೆಚ್ಚಿಟ್ಟು ಕೊಳ್ಳಿ. ಒಂದು ಇಂಚು ಶುಂಠಿ, ನಾಲ್ಕು ಎಸಳು ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿಡಿ. ಕೊತ್ತಂಬರಿ ಸೊಪ್ಪು ಒಂದು ಚಿಕ್ಕ ಕಟ್ಟು ಸಣ್ಣಗೆ ಹೆಚ್ಚಿಡಿ. ಒಂದು ನಿಂಬೆಹಣ್ಣು ರಸ ತೆಗೆದಿಡಿ. ಬಾಣಲೆಯಲ್ಲಿ ಒಂದು ಚಿಕ್ಕ ಚಮಚ ಬೆಣ್ಣೆ / ಎಣ್ಣೆ ಹಾಕಿ ಬೆಳ್ಳುಳ್ಳಿ ಶುಂಠಿ ಹಾಕಿ ಬಾಡಿಸಿ, ನಂತರ ತರಕಾರಿಗಳನ್ನು ಹಾಕಿ …

ಉಪಹಾರ ಸಿಹಿ ತಿನಿಸುಗಳು

MOSARU AKKI THARI UPPITTU & SABUDANA KESARI BATH

MOSARU AKKI THARI UPPITTU & SABUDANA KESARI BATH ಮೊಸರು ಅಕ್ಕಿ ತರಿ ಉಪ್ಪಿಟ್ಟು ಮತ್ತು ಸಾಬೂದಾನ ಕೇಸರಿ ಬಾತ್:- ಉಪ್ಪಿಟ್ಟು ಎಲ್ಲರ ಮನೆಯಲ್ಲಿ ಮಾಡುತ್ತಾರೆ. ಮೊಸರು ಹಾಕಿ ಎಂದಾದರೂ ಉಪ್ಪಿಟ್ಟು ಮಾಡಿದ್ದೀರಾ? ಇಲ್ಲದಿದ್ದರೆ ಒಮ್ಮೆ ಮಾಡಿ ನೋಡಿ! ಹುಳಿ ಖಾರಾ ಉಪ್ಪು Spicy ಉಪ್ಪಿಟ್ಟು. ಉಪ್ಪಿಟ್ಟು ಇಷ್ಟ ಇಲ್ಲದವರೂ ಕೂಡ ಇಷ್ಟ ಪಟ್ಟು ತಿನ್ನುತ್ತಾರೆ. ಮೊಸರು ಅಕ್ಕಿ ತರಿ ಉಪ್ಪಿಟ್ಟು ಮಾಡುವ ವಿಧಾನ:- 1 ಲೋಟ ಅಕ್ಕಿ ತರಿಗೆ ಸ್ವಲ್ಪ ಉಪ್ಪು, ತಾಜಾ ಮೊಸರು …

ಚಾಟ್ಸ್

CRISPY PALAK MOONG BITES ಕ್ರಿಸ್ಪಿ ಪಾಲಾಕ್ ಮೂಂಗ್ ಬೈಟ್ಸ್

CRISPY PALAK MOONG BITES ಕ್ರಿಸ್ಪಿ ಪಾಲಾಕ್ ಮೂಂಗ್ ಬೈಟ್ಸ್ ಸಂಜೆ ಕಾಫಿ ಅಥವಾ ಟೀ ಜೊತೆಗೆ ಖಾರಾ ಖಾರಾ ಗರಿ ಗರಿ ಏನಾದರೂ ಬೇಕು ಅಂದರೆ ಇದನ್ನು ಮಾಡಿ ಇಡಿ. ಬೇಕಾದಾಗ ತಿನ್ನಬಹುದು. ಮಾಡುವ ವಿಧಾನ:- ಎರಡು ಕಟ್ಟು ಪಾಲಾಕ್ ಸೊಪ್ಪು , ನಾಲ್ಕು ಹಸಿ ಮೆಣಸಿನಕಾಯಿ ಎರಡು ಮೂರು ನಿಮಿಷ ಕುದಿಯುವ ನೀರಿನಲ್ಲಿ ಬೇಯಿಸಿ ನೀರು ಪೂರ್ತಿ ಸೋರಿ ಹಾಕಿ ರುಬ್ಬಿಡಿ. ಅರ್ಧ ಲೋಟ ಹೆಸರುಬೇಳೆ ಎರಡು ಗಂಟೆ ನೆನೆಸಿ ನೀರು ಸೋರಿ ಹಾಕಿಡಿ. …

ಸಾಂಬಾರು ಮತ್ತು ಪಲ್ಯಗಳು

IYENGAR PEPPER RASAM ಅಯ್ಯಂಗಾರ್ ಪೆಪ್ಪರ್ ರಸಂ

IYENGAR PEPPER RASAM ಅಯ್ಯಂಗಾರ್ ಪೆಪ್ಪರ್ ರಸಂ ಮೆಣಸು ಆರೋಗ್ಯಕ್ಕೆ ಬಹಳ ಒಳ್ಳೆಯದು! ಕೆಮ್ಮು, ನೆಗಡಿಗೆ ರಾಮಬಾಣ ಇದ್ದ ಹಾಗೆ! ಮಳೆಗಾಲದಲ್ಲಿ ಚಳಿಗೆ, ನೆಗಡಿಗೆ ಈ ಬಿಸಿ ಬಿಸಿ ಸಾರು ಕುಡಿದು ನೋಡಿ! ಇದು ರುಚಿಕರ ಹಾಗೂ ಆರೋಗ್ಯಕರ! ಮಾಡುವ ವಿಧಾನ:- 1 ಚಿಕ್ಕ ಲೋಟ ಬೇಳೆಯನ್ನು ತೊಳೆದು ಒಂದು ಚಮಚ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ. ಬೇಕಾದರೆ ಸ್ವಲ್ಪ ನೀರು ಹಾಕಿ ಸೋರಿ ಹಾಕಿ ಬೇಳೆಯ ಕಟ್ಟು ತೆಗೆದಿಡಿ. ಬೆಂದ ಬೇಳೆಯನ್ನು ಪಲ್ಯ, ದಾಲ್ ಮಾಡಲು …

ಸಾಂಬಾರು ಮತ್ತು ಪಲ್ಯಗಳು

GREEN ALU FRY ಗ್ರೀನ್ ಆಲೂ ಫ್ರೈ

GREEN ALU FRY ಗ್ರೀನ್ ಆಲೂ ಫ್ರೈ Pot – To – Plate ಆಲೂಗಡ್ಡೆ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸರುಚಿಯ ಪಲ್ಯ ಇಲ್ಲಿದೆ. ಸುಲಭ ಮತ್ತು ರುಚಿಕರ! ಮಾಡುವ ವಿಧಾನ:- ಆಲೂಗಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಉದ್ದಕೆ ಹೆಚ್ಚಿಡಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಜೀರಿಗೆ, ಆಲೂಗಡ್ಡೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಡಿಮೆ ಉರಿಯಲ್ಲಿ ಆಲೂಗಡ್ಡೆ ಬೇಯುವವರೆಗೆ ತಟ್ಟೆ ಮುಚ್ಚಿ ಬೇಯಲು ಇಡಿ. ಇನ್ನೊಂದು ಕಡೆ, ಒಂದು ಕಟ್ಟು ಪುದೀನಾ, ಅರ್ಧ ಕಟ್ಟು …

ಖಾರ ತಿನಿಸುಗಳು

BURGER ಬರ್ಗರ್

BURGER ಬರ್ಗರ್ ಎಲ್ಲರ ಫೇವರಿಟ್. ಮನೆಯಲ್ಲಿ ಮಾಡುವ ಸುಲಭವಾದ ವಿಧಾನ ಇಲ್ಲಿದೆ. ಮಾಡುವ ವಿಧಾನ:- ಪ್ಯಾಟೀಸ್ ಮಾಡಲು :- ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿ. ಒಂದು ಕ್ಯಾರೆಟ್, ಒಂದು ಕ್ಯಾಪ್ಸಿಕಂ, ಸ್ವಲ್ಪ ಕ್ಯಾಬೇಜ್ ಸಣ್ಣಗೆ ತುರಿದಿಡಿ. ಸ್ವಲ್ಪ ಬಣಾಣಿ ಬೇಯಿಸಿ ಪುಡಿ ಮಾಡಿಡಿ. ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳಿಗೆ ಅರ್ಧ ಚಮಚ ಚಾಟ್ ಮಸಾಲಾ, ಅರ್ಧ ಚಮಚ ಆಮ್ ಚೂರ್ ಪುಡಿ, ಅರ್ಧ ಚಮಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಹಸಿ …

ಚಾಟ್ಸ್

RING SAMOSA ರಿಂಗ್ ಸಮೋಸಾ

RING SAMOSA ರಿಂಗ್ ಸಮೋಸಾ ಸಮೋಸಾ ಎಲ್ಲರಿಗೂ ಇಷ್ಟವಾಗುವ ತಿನಿಸು. ಸಾಧಾರಣವಾಗಿ ಮಾಡುವ ಆಕಾರದಲ್ಲಿ ಅಲ್ಲದೆ ಹೊಸ ರೂಪದ ಸಮೋಸ ಮಾಡುವ ರೆಸಿಪಿ ಇಲ್ಲಿದೆ:- ಮಾಡುವ ವಿಧಾನ :- ಮೈದಾ ಹಿಟ್ಟಿಗೆ ಸ್ವಲ್ಪ ಓಂ ಕಾಳು, ಒಂದು ಚಮಚ ಎಣ್ಣೆ, ಸ್ವಲ್ಪ ಉಪ್ಪು ಸೇರಿಸಿ ಗಟ್ಟಿಯಾಗಿ ಹಿಟ್ಟು ಕಲೆಸಿಡಿ. ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ. ಒಂದು ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಎರಡು ಹಸಿ ಮೆಣಸಿನ …