MAVINA HANNINA GOJJU ಮಾವಿನ ಹಣ್ಣಿನ ಗೊಜ್ಜು
ಹಣ್ಣುಗಳ ರಾಜ ಮಾವಿನ ಹಣ್ಣಿನಿಂದ ಏನೇ ಮಾಡಿದರೂ ಅದರ ರುಚಿ ಅದ್ಭುತವಾಗಿರುತ್ತದೆ! ಪುಟ್ಟ ಪುಟ್ಟ ಮಾವಿನ ಹಣ್ಣಿನಿಂದ ಮಾಡುವ ರುಚಿಯಾದ ಗೊಜ್ಜಿನ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ :-
ಮಾವಿನ ಹಣ್ಣಿನ ಸಿಪ್ಪೆ ತೆಗೆದು ಹಣ್ಣು ಓಟೆ ಸಮೇತ ಹಾಗೇ ಇಡಿ. ಸಿಪ್ಪೆಗೆ ಸ್ವಲ್ಪ ನೀರು ಹಾಕಿ ಕಿವುಚಿ ರಸ ತೆಗೆದು ಹಣ್ಣಿಗೆ ಹಾಕಿಡಿ.
ಕಡಲೇ ಬೇಳೆ – 1 ಟೀ ಚಮಚ
ಉದ್ದಿನ ಬೇಳೆ – 1 ಟೀ ಚಮಚ
ಧನಿಯಾ – 1 ಟೀ ಚಮಚ
ಮೆಂತ್ಯ – 1/4 ಟೀ ಚಮಚ
ಸಾಸಿವೆ – 1/4 ಟೀ ಚಮಚ
ಜೀರಿಗೆ – 1/4 ಟೀ ಚಮಚ
ಬ್ಯಾಡಗಿ ಮೆಣಸಿನಕಾಯಿ – 6 ರಿಂದ 8
ಕಾಯಿ ತುರಿ – 2 ಟೇಬಲ್ ಚಮಚ

ಕಾಯಿ ತುರಿ ಬಿಟ್ಟು ಉಳಿದ ಸಾಮಗ್ರಿಗಳನ್ನು ಹುರಿದು ಕಾಯಿ ತುರಿ ಜೊತೆಗೆ ನುಣ್ಣಗೆ ರುಬ್ಬಿಡಿ.

ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಸಾಸಿವೆ, ಇಂಗು, ಕರಿಬೇವು, ಸ್ವಲ್ಪ ಇಂಗು ಒಗ್ಗರಣೆ ಹಾಕಿ ರುಬ್ಬಿದ ಮಿಶ್ರಣ, ಮಾವಿನ ಹಣ್ಣಿನ ಮಿಶ್ರಣ, ಒಂದು ಚಮಚ ಹುಣಿಸೆ ಹಣ್ಣಿನ ರಸ, ಚೂರು ಬೆಲ್ಲ, ರುಚಿಗೆ ತಕ್ಕಷ್ಟು ಸೇರಿಸಿ ಕಡಿಮೆ ಉರಿಯಲ್ಲಿ ಕುದಿಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣಿನ ಗೊಜ್ಜು ಸಿದ್ಧ!
ಬಿಸಿ ಬಿಸಿ ಅನ್ನದ ಜೊತೆಗೆ ಸ್ವಲ್ಪ ತುಪ್ಪ ಸೇರಿಸಿ ತಿಂದರೆ ಆಹಾ!!!
ನಾನು ಹಾಕಿರುವುದು ಸಕ್ಕರೆ ಗುತ್ತಿ ಜಾತಿಯ ಸಣ್ಣ ಮಾವಿನ ಹಣ್ಣು. ಅದು ಸಿಗದಿದ್ದರೆ ದೊಡ್ಡ ಮಾವಿನ ಹಣ್ಣು ಕತ್ತರಿಸಿ ಮಾಡಬಹುದು.
ಧನ್ಯವಾದಗಳು 🙏🙏🙏

