TOMATO GOJJU ಟೋಮೆಟೋ ಗೊಜ್ಜು
TOMATO GOJJU ಟೋಮೆಟೋ ಗೊಜ್ಜು ರುಚಿಯಾಗಿ, ಸುಲಭವಾಗಿ ಮಾಡಬಹುದಾ ರೆಸಿಪಿ. ಮಾಡಿ ಫ್ರಿಜ್ಜಿನಲ್ಲಿ ಹದಿನೈದು ದಿನ, ಹೊರಗಡೆ ಎರಡು ದಿನ ಇಡಬಹುದು. ಪ್ರವಾಸಗಳಿಗೆ ಹೋಗುವಾಗ ಚಪಾತಿ ಜೊತೆಗೆ ತೆಗೆದು ಕೊಂಡು ಹೋಗಬಹುದು. ಮಾಡುವ ವಿಧಾನ:- ಒಂದು ಕೇಜಿ ಆಪಲ್ ಟೋಮೆಟೋ ತೊಳೆದು ಸ್ವಲ್ಪವೂ ನೀರು ಇಲ್ಲದಂತೆ ಒರೆಸಿ, ಸ್ವಲ್ಪ ಕೂಡ ನೀರು ಸೋಕಿಸದೆ ನುಣ್ಣಗೆ ರುಬ್ಬಿ, ರಸ ಸೋಸಿಡಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ, ಇಂಗು, ಕರಿಬೇವು, …


