DUM BABY ALOO ದಂ ಬೇಬಿ ಆಲೂ
ಆಲೂಗೆಡ್ಡೆ ತರಕಾರಿಗಳ ರಾಜ ಎಂದೇ ಹೇಳಬಹುದು! ಪ್ರಪಂಚದಾದ್ಯಂತ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಇಂತಹ ಆಲೂಗೆಡ್ಡೆಯ ರುಚಿಯಾದ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ :-
1/4 ಕೇಜಿ ಬೇಬಿ ಆಲೂ ತೊಳೆದು ಸ್ವಲ್ಪ ಉಪ್ಪು ಹಾಕಿ ಬೇಯಿಸಿ ಸಿಪ್ಪೆ ತೆಗೆದಿಡಿ.
1 ಈರುಳ್ಳಿ ಸಣ್ಣಗೆ ಹೆಚ್ಚಿ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 1 ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, 10 ರಿಂದ 12 ಗೋಡಂಬಿ ಜೊತೆಗೆ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ.
ಮೂರು ದೊಡ್ಡ ಟೋಮೇಟೋ ಬಿಸಿ ನೀರಿನಲ್ಲಿ ಹಾಕಿ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಡಿ.
1/2 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ/ ತುಪ್ಪ ಹಾಕಿ ಜೀರಿಗೆ, ಈರುಳ್ಳಿ, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಹುರಿದು ರುಬ್ಬಿದ ಈರುಳ್ಳಿ ಮಿಶ್ರಣವನ್ನು ಹಾಕಿ ಸ್ವಲ್ಪ ಬಾಡಿಸಿ. ನಂತರ 1 ಚಮಚ ಖಾರದ ಪುಡಿ, ಉಪ್ಪು, ಟೋಮೇಟೋ ಪ್ಯೂರಿ ಹಾಕಿ ಚೆನ್ನಾಗಿ ಕಲೆಸಿ. ಬೇಯಿಸಿದ ಆಲೂಗೆಡ್ಡೆ, ಅರ್ಧ ಬಟ್ಟಲು ತಾಜಾ ಸಿಹಿ ಮೊಸರು ಹಾಕಿ ಕಲೆಸಿ, ಕಡಿಮೆ ಉರಿಯಲ್ಲಿ ಎಣ್ಣೆ ಮೇಲುಗಡೆ ತೇಲುವವರೆಗೆ ಕುದಿಸಿ ಕೊನೆಯಲ್ಲಿ ಸ್ವಲ್ಪ ಕಸೂರಿ ಮೇಥಿ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ದಂ ಬೇಬಿ ಆಲೂ ಸವಿಯಲು ಸಿದ್ಧ!

ಬೇಬಿ ಆಲೂಗೆಡ್ಡೆ ಸಿಗದಿದ್ದರೆ ಸಾಧಾರಣ ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿ ಇದೇ ರೀತಿಯಲ್ಲಿ ಮಾಡಬಹುದು.

ಧನ್ಯವಾದಗಳು 🙏🙏🙏
