ಸಿಹಿ ತಿನಿಸುಗಳು

AMRUTHA PHALA ಅಮೃತ ಫಲ

AMRUTHA PHALA ಅಮೃತ ಫಲ

ಹೆಸರೇ ಹೇಳುವಂತೆ ರುಚಿ ಅಮೃತಾನೆ!!! ಮಾಡಲು ಸ್ವಲ್ಪ ಸಮಯ, ತಾಳ್ಮೆ ಬೇಕು ಅಷ್ಟೇ! ಆದರೆ ರುಚಿ ಮಾತ್ರ ಅದ್ಭುತ!!!

ಬೇಕಾಗುವ ಸಾಮಗ್ರಿಗಳು:-

ಗಟ್ಟಿಯಾದ ಕಾಯಿ ಹಾಲು – ಒಂದು ಅಳತೆ
ಗಟ್ಟಿಯಾದ ಹಸುವಿನ ಹಾಲು – ಒಂದು ಅಳತೆ
ಸಕ್ಕರೆ – ಒಂದು ಅಳತೆ

ಮಾಡುವ ವಿಧಾನ:-

ಒಂದು ತೆಂಗಿನ ಕಾಯಿ ತುರಿದು, ಸ್ವಲ್ಪವೇ ನೀರು ಸೇರಿಸಿ ನುಣ್ಣಗೆ ರುಬ್ಬಿ, ಸೋರಿ ಹಾಕಿ ಗಟ್ಟಿಯಾದ ಕಾಯಿ ಹಾಲು ತೆಗೆದಿಡಿ.

1 ಅಳತೆ ಹಸುವಿನ ಹಾಲು ಕುದಿಸಿಡಿ.

ದಪ್ಪ ತಳದ ಬಾಣಲೆಯಲ್ಲಿ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಕಲೆಸುತ್ತಾ ಇರಿ.

ಮಿಶ್ರಣ ಸ್ವಲ್ಪ ಗಟ್ಟಿಯಾದ ಮೇಲೆ ಉರಿ ಕಡಿಮೆ ಮಾಡಿ ಕೈ ಬಿಡದಂತೆ ಕಲೆಸುತ್ತಾ ಇರಿ.

ಮಿಶ್ರಣ ಬಾಣಲೆಯ ಅಂಚು ಬಿಡುತ್ತಾ, ಒಂದೇ ಉಂಡೆಯಂತೆ ಆದಾಗ, ಚಿಟಿಕೆ ಏಲಕ್ಕಿ ಪುಡಿ ಬೇಕಾದರೆ ಸೇರಿಸಿ, ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಬಾಯಲ್ಲಿ ನೀರೂರಿಸುವ ಅಮೃತ ಫಲ ಸವಿಯಲು ಸಿದ್ಧ!

ಈ ಸಿಹಿ ಮಾಡಲು ಹೆಚ್ಚು ಕಡಿಮೆ 30 ನಿಮಿಷ ಬೇಕಾಗುವುದು.

ಧನ್ಯವಾದಗಳು 🙏🙏🙏

Leave a Reply

Your email address will not be published.