KOBBARI MITAYI ಕೊಬ್ಬರಿ ಮಿಠಾಯಿ
ತೆಂಗಿನ ಕಾಯಿಯಿಂದ ಮಾಡಬಹುದಾ ರುಚಿಯಾದ ರೆಸಿಪಿ ಇಲ್ಲಿದೆ! ಇದು ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ :-


ತೆಂಗಿನ ಕಾಯಿಯ ಹಿಂದೆ ಇರುವ ಕಪ್ಪು ಭಾಗವನ್ನು Scraper ಅಥವಾ ಚಾಕುವಿನಿಂದ ತೆಗೆದು Mixie jar ನಲ್ಲಿ Pulse mode ನಲ್ಲಿ ಎರಡು ಅಳತೆ ಪುಡಿ ಮಾಡಿಡಿ. ಅಥವಾ ತೆಂಗಿನ ಕಾಯಿ ಹೋಳನ್ನು ಎಚ್ಚರಿಕೆಯಿಂದ ತಿರುಗಿಸುತ್ತಾ ಬಿಳಿ ಭಾಗ ಮಾತ್ರ ತುರಿಯಬಹುದು. ಆಯ್ಕೆ ನಿಮ್ಮದು!



ದಪ್ಪ ತಳದ ಬಾಣಲೆಯಲ್ಲಿ ಎರಡು ಅಳತೆ ಕಾಯಿ
ತುರಿ, ಒಂದು ಅಳತೆ ಸಕ್ಕರೆ, ಎರಡು ಚಮಚ ಹಾಲು ಹಾಕಿ, ಚೆನ್ನಾಗಿ ಕಲೆಸಿ, ಒಂದು
ಗಂಟೆ ನೆನೆಯಲು ಬಿಡಿ. ಆಗ ಸಕ್ಕರೆ ಕರಗಿರುತ್ತದೆ. ಕೊಬ್ಬರಿ ಮಿಠಾಯಿ ಬೇಗ
ಮಾಡಬಹುದು. ಕಡಿಮೆ ಉರಿಯಲ್ಲಿ ಕಲಿಸುತ್ತಾ ಇರಿ. ಈ ಮಿಶ್ರಣಕ್ಕೆ ಬೇಕಾದರೆ ಒಂದು
ಚಿಕ್ಕ ಚಮಚ ತುಪ್ಪ ಹಾಕಿ. ಮಿಶ್ರಣ ಒಂದೇ ಉಂಡೆ ಆದಾಗ ಒಲೆಯಿಂದ ತೆಗೆದು ತುಪ್ಪ
ಸವರಿದ ತಟ್ಟೆಗೆ ಹರಡಿ, ಸ್ವಲ್ಪ ಬೆಚ್ಚಗಿರುವಾಗಲೇ ನಿಮಗೆ ಬೇಕಾದ ಅಳತೆಯ
ತುಂಡುಗಳಾಗಿ ಮಾಡಿ ಸವಿಯಿರಿ. ಈ ವಿಧಾನದಲ್ಲಿ ಮಾಡಿದ ಕೊಬ್ಬರಿ ಮಿಠಾಯಿ
ಬಾಯಿಯಲ್ಲಿಟ್ಟರೆ
ಕರಗುವ ಹಾಗಿರುತ್ತದೆ.

ಧನ್ಯವಾದಗಳು 🙏🙏🙏
