ಸೂಪ್ ಇತ್ಯಾದಿ

SABUDANA SOUP ಸಾಬೂದಾನ ಸೂಪ್

SABUDANA SOUP ಸಾಬೂದಾನ ಸೂಪ್

ಚುಮು ಚುಮು ಛಳಿಗೆ ಬಿಸಿ ಬಿಸಿ ಸೂಪ್!

ಸೂಪ್ ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಆರೋಗ್ಯಕರ ಅಂಶಗಳನ್ನು ಹೊಂದಿರುತ್ತದೆ. ಮಧ್ಯಾಹ್ನ ಅಥವಾ ರಾತ್ರಿ ಊಟದ ಮೊದಲು ಕುಡಿಯಲು ಸೊಗಸಾಗಿರುವ ಈ ಸೂಪ್ ಅನ್ನು ಎಷ್ಟು ವಿಧದಲ್ಲಿ ಮಾಡಿದರೂ ಚೆಂದವೇ! ಸಾಬೂದಾನ ಬಳಸಿ ಮಾಡುವ ರುಚಿಯಾದ, ಆರೋಗ್ಯಕರವಾದ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ :-

1/2 ಕಪ್ ನೈಲಾನ್ ಸಾಬೂದಾನವನ್ನು ತೊಳೆದು ನಾಲ್ಕು ಗಂಟೆ ಕಾಲ ನೆನೆಸಿಡಿ.

ನಿಮಗೆ ಇಷ್ಟವಾದ ತರಕಾರಿಗಳನ್ನು ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ ಒಂದು ಚಮಚ ಬೆಣ್ಣೆ ಹಾಕಿ ಒಂದು ಚಮಚ ಕಾರ್ನ್ ಫ್ಲೋರ್ ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಬಿಸಿ ಮಾಡಿ, ಸಣ್ಣಗೆ ಹೆಚ್ಚಿದ ತರಕಾರಿಗಳನ್ನು ಹಾಕಿ ಸ್ವಲ್ಪ ಬಾಡಿಸಿ ಸ್ವಲ್ಪ ನೀರು ಹಾಕಿ ಮೀಡಿಯಂ ಉರಿಯಲ್ಲಿ ಬೇಯಿಸಿ. ತರಕಾರಿ ಅರ್ಧ ಬೆಂದ ಮೇಲೆ ನೆನೆಸಿದ ಸಾಬೂದಾನ ಹಾಕಿ, ಸಾಬೂದಾನ ಪಾರದರ್ಶಕ (Transparent) ಆಗುವವರೆಗೆ ಬೇಯಿಸಿ ಒಂದು ಚಿಕ್ಕ ಚಮಚ ಕಪ್ಪು ಮೆಣಸಿನ ಪುಡಿ, ಉಪ್ಪು ಸೇರಿಸಿ. ಬೇಕಾದರೆ ಇನ್ನೂ ಸ್ವಲ್ಪ ನೀರು ಸೇರಿಸಿ ಒಲೆಯಿಂದ ಇಳಿಸಿ. ಬಟ್ಟಲಿನಲ್ಲಿ ಸ್ವಲ್ಪ ವಿನೆಗರ್, ಚಿಲ್ಲಿ ಸಾಸ್ ಸೇರಿಸಿ ಕಲೆಸಿ, ಯಾವುದಾದರೂ ಸುಟ್ಟ ಹಪ್ಪಳದ ಜೊತೆಗೆ ಬಿಸಿ ಬಿಸಿಯಾಗಿ ಸವಿಯಿರಿ! ನಿಮ್ಮ ಅಭಿರುಚಿಗೆ ತಕ್ಕ ಹಾಗೆ ಟೋಮೇಟೋ ಸಾಸ್, ಸೋಯಾ ಸಾಸ್ ಬೇಕಾದರೆ ಹಾಕಿಕೊಳ್ಳಬಹುದು. ನಾನು ಹಾಕಿಲ್ಲ.

ಸಾಬೂದಾನ ನೆನೆಸಿರುವುದರಿಂದ ಬೇಗನೆ ಬೇಯುತ್ತದೆ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿ ಆದರೆ ಇನ್ನೂ ಸ್ವಲ್ಪ ನೀರು ಸೇರಿಸಿ ಬಿಸಿ ಮಾಡಿ ಕುಡಿಯಬಹುದು. ನೈಲಾನ್ ಸಾಬೂದಾನದ ಬದಲು ಸಾಧಾರಣ ಸಾಬೂದಾನ ಬೇಕಾದರೆ ಹಾಕಿಕೊಳ್ಳಬಹುದು. ಆದರೆ ಬೇಯಲು ಸ್ವಲ್ಪ ಸಮಯ ಹೆಚ್ಚು ಬೇಕಾಗುತ್ತದೆ.

ಧನ್ಯವಾದಗಳು 🙏🙏🙏

Leave a Reply

Your email address will not be published.