GOLD COINS ಗೋಲ್ಡ್ ಕಾಯಿನ್
ಎಲ್ಲರಿಗೂ ಇಷ್ಟವಾಗುವ ಸ್ಟಾರ್ಟರ್! ಕೆಲವೇ ಹೋಟೆಲ್ ಗಳಲ್ಲಿ ಮಾಡುತ್ತಾರೆ. ಮಕ್ಕಳಿಗಂತೂ ತುಂಬಾ ಇಷ್ಟವಾಗುವ ಈ ಗೋಲ್ಡ್ ಕಾಯಿನ್ ಮಾಡುವ ವಿಧಾನ ಇಲ್ಲಿದೆ :-
ಮಾಡುವ ವಿಧಾನ :-
ಸಾಲ್ಟ್ ಬ್ರೆಡ್ ಅನ್ನು ಚಿಕ್ಕ ಚಿಕ್ಕದಾಗಿ, ಗುಂಡಗೆ ಕಟ್ ಮಾಡಿ ಇಡಿ.

ನಾಲ್ಕು ಚಮಚ ಕಾರ್ನ್ ಫ್ಲೋರ್, ನಾಲ್ಕು ಚಮಚ ಮೈದಾ, ಸ್ವಲ್ಪ ಕಪ್ಪು ಮೆಣಸಿನ ಪುಡಿ, ಉಪ್ಪು ಸೇರಿಸಿ ಬಜ್ಜಿ ಹಿಟ್ಟಿಗಿಂತ ತೆಳ್ಳಗೆ ಹಿಟ್ಟು ಕಲೆಸಿಡಿ.

ಎರಡು ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ.
1 ಈರುಳ್ಳಿ, 2 ಕ್ಯಾಪ್ಸಿಕಮ್, ಸ್ವಲ್ಪ ಕೊತ್ತಂಬರಿ ಸೊಪ್ಪು, 6 ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

1 ಕ್ಯಾರೆಟ್ ತುರಿದಿಡಿ.

ಬಟ್ಟಲಿನಲ್ಲಿ ಬ್ರೆಡ್, ಕಾರ್ನ್ ಫ್ಲೋರ್ ಮಿಶ್ರಣ ಬಿಟ್ಟು ಉಳಿದ ಸಾಮಗ್ರಿಗಳನ್ನು ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್ ಮತ್ತು 1 ಚಮಚ ಚಾಟ್ ಮಸಾಲ ಹಾಕಿ ಚೆನ್ನಾಗಿ ಕಲೆಸಿ.
ಬ್ರೆಡ್ ಮೇಲೆ ಆಲೂ ಮಿಶ್ರಣ ಚೆನ್ನಾಗಿ ಒತ್ತಿ ಕಾರ್ನ್ ಫ್ಲೋರ್ ಪೇಸ್ಟ್ ನಲ್ಲಿ ಅದ್ದಿ ಮೇಲೆ ಬಿಳಿ ಎಳ್ಳು ಉದುರಿಸಿ, ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಕರಿದು ನಿಮಗೆ ಇಷ್ಟವಾದ ಸಾಸ್ ಅಥವಾ ಚಟ್ನಿ ಜೊತೆಗೆ ಸವಿಯಿರಿ.

ಸಾಧಾರಣವಾಗಿ ಆಲೂಗೆಡ್ಡೆ ಮಿಶ್ರಣಕ್ಕೆ ಒಂದು ಚಮಚ ಸೋಯಾ ಸಾಸ್ ಹಾಕುತ್ತಾರೆ. ನಾನು ಅದರ ಬದಲು ಚಾಟ್ ಮಸಾಲ ಹಾಕಿದ್ದೀನಿ.

ಧನ್ಯವಾದಗಳು 🙏🙏🙏
