ಉಪಹಾರ

GOJJAVALAKKI ಗೊಜ್ಜವಲಕ್ಕಿ

GOJJAVALAKKI ಗೊಜ್ಜವಲಕ್ಕಿ

ಅವಲಕ್ಕಿಯಿಂದ ಮಾಡಬಹುದಾದ ರುಚಿಯಾದ ವಿಧಾನ ಇಲ್ಲಿದೆ :-

ಮಾಡುವ ವಿಧಾನ :-

ಗಟ್ಟಿ ಅವಲಕ್ಕಿಯನ್ನು Mixie jar ಗೆ ಹಾಕಿ ಒಂದು ಸುತ್ತು ಸುತ್ತಿಸಿ ಎರಡು ಮೂರು ಸಲ ತೊಳೆದಿಡಿ. ತುಂಬಾ ಪುಡಿ ಮಾಡಬೇಡಿ. ನೀವು ಬೇಕಾದರೆ ಅವಲಕ್ಕಿ ಪುಡಿ ಮಾಡದೆ ಹಾಗೇ ಮಾಡಬಹುದು.

ನಿಂಬೆಹಣ್ಣು ಗಾತ್ರದ ಹುಣಿಸೆ ಹಣ್ಣು ತೊಳೆದು ರಸ ತೆಗೆದಿಡಿ. ತುಂಬಾ ತೆಳ್ಳಗೆ ಮಾಡದೆ ಗಟ್ಟಿಯಾಗಿ ರಸ ತೆಗೆದಿಡಿ. ಈ ರಸಕ್ಕೆ ಎರಡು ಚಮಚ ಸಾರಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಚೂರು ಬೆಲ್ಲ ಹಾಕಿ ಕರಗಿಸಿಡಿ. ನಂತರ ಈ ರಸವನ್ನು ಅವಲಕ್ಕಿ ಪುಡಿಯ ಮೇಲೆ ಹಾಕಿ ಒಂದು ಸಲ ಚೆನ್ನಾಗಿ ಕಲೆಸಿ. ಅವಲಕ್ಕಿ ಮೇಲೆ ರಸ ಸ್ವಲ್ಪ ಇದ್ದರೆ ಸಾಕು.

ಎರಡು ಚಮಚ ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ.

ನಾಲ್ಕು ಚಮಚ ಕಾಯಿ ತುರಿದಿಡಿ.

ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ ಎಣ್ಣೆ ಹಾಕಿ ಕಡಲೇ ಬೀಜ ಕರಿದು ತೆಗೆದಿಡಿ. ನಂತರ ಸಾಸಿವೆ, ಇಂಗು, ಕಡಲೆ ಬೇಳೆ, ಉದ್ದಿನ ಬೇಳೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಕಲೆಸಿ. ಕಡಿಮೆ ಉರಿಯಲ್ಲಿ ಸ್ವಲ್ಪ ಬಿಸಿ ಮಾಡಿ ಕೊನೆಯಲ್ಲಿ ಕಾಯಿತುರಿ, ಎಳ್ಳಿನ ಪುಡಿ, ಕೊತ್ತಂಬರಿ ಸೊಪ್ಪು, ಕಡಲೇ ಬೀಜ ಹಾಕಿದರೆ ರುಚಿಯಾದ ಸುಲಭವಾಗಿ ಮಾಡಬಹುದಾದ ಗೊಜ್ಜವಲಕ್ಕಿ ಸವಿಯಲು ಸಿದ್ಧ.

ಧನ್ಯವಾದಗಳು 🙏🙏🙏

Leave a Reply

Your email address will not be published.