Oota ಉಪಹಾರ

VEG PALAV ( JAINS FOOD ) No Onion, Garlic, Roots ವೆಜ್ ಪಲಾವ್ ( ಜೈನ್ ಫುಡ್ ) ಈರುಳ್ಳಿ, ಬೆಳ್ಳುಳ್ಳಿ, ಗೆಡ್ಡೆ ರಹಿತ

ಪಲಾವ್ ಸಾಧಾರಣವಾಗಿ ಎಲ್ಲರೂ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಮಾಡುತ್ತಾರೆ. ಅದನ್ನು ಹಾಕದೆ ರುಚಿಯಾದ ಪಲಾವ್ ಮಾಡುವ ವಿಧಾನ ಇಲ್ಲಿದೆ!

ಪೂರ್ವ ತಯಾರಿ :- 10 ನಿಮಿಷ
ಕುಕಿಂಗ್ :- 15 ನಿಮಿಷ

ಬೇಕಾಗುವ ಸಾಮಗ್ರಿಗಳು :-

ಬಾಸುಮತಿ ಅಕ್ಕಿ – 1 ಲೋಟ
ಬೀನ್ಸ್ – 50 ಗ್ರಾಂ
ಬಟಾಣಿ – 50 ಗ್ರಾಂ
ಕ್ಯಾಪ್ಸಿಕಮ್ – 50 ಗ್ರಾಂ
ಹಸಿಮೆಣಸಿನಕಾಯಿ – 6
ಚಕ್ಕೆ – 1 ಇಂಚು
ಲವಂಗ – 6
ಏಲಕ್ಕಿ – 4
ಸೋಂಪು – 2 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 100 ಗ್ರಾಂ

ಮಾಡುವ ವಿಧಾನ :-

ಬಾಸುಮತಿ ಅಕ್ಕಿ ತೊಳೆದು ಮೂವತ್ತು ನಿಮಿಷ ನೆನೆಸಿ ಸೋರಿ ಹಾಕಿಡಿ.

ತರಕಾರಿಗಳನ್ನು ಹೆಚ್ಚಿಡಿ. ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.

ಚಕ್ಕೆ, ಲವಂಗ, ಏಲಕ್ಕಿ, ಸೋಂಪು ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.

ಕುಕ್ಕರಿನಲ್ಲಿ ಎಣ್ಣೆ ಹಾಕಿ ಹೆಚ್ಚಿದತರಕಾರಿಗಳನ್ನು ಹಾಕಿ ಸ್ವಲ್ಪ ಹುರಿದು, ಮಸಾಲೆ ಪುಡಿ, ನೆನೆಸಿದ ಬಾಸುಮತಿ ಅಕ್ಕಿ ಹಾಕಿ ಸ್ವಲ್ಪ ಹುರಿದು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, 2 ಲೋಟ ನೀರು, 1/2 ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಕಲೆಸಿ.

ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಆಗಾಗ ಫೋರ್ಕ್ ನಲ್ಲಿ ಕಲೆಸುತ್ತಾ ಹತ್ತು ನಿಮಿಷ ಬೇಯಿಸಿದರೆ ರುಚಿಯಾದ ವೆಜ್ ಪಲಾವ್ ಸಿದ್ಧ!

ಮೊಸರು ಬಜ್ಜಿ ಮಾಡುವ ವಿಧಾನ :-

1/2 ಸೌತೆಕಾಯಿ ಕಹಿ, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1 ಟೋಮೇಟೋ ಸಣ್ಣಗೆ ಹೆಚ್ಚಿಡಿ. ಹೆಚ್ಚಿದ ಸೌತೆಕಾಯಿ, ಟೋಮೇಟೋ, 2 ಚಮಚ ಕಾಯಿ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಉಪ್ಪು, ತಾಜಾ ಮೊಸರು ಅರ್ಧ ಬಟ್ಟಲು ಹಾಕಿ ಚೆನ್ನಾಗಿ ಕಲೆಸಿದರೆ ರುಚಿಯಾದ ಮೊಸರು ಬಜ್ಜಿ ಸಿದ್ಧ!

ಧನ್ಯವಾದಗಳು

Leave a Reply

Your email address will not be published.