ಸಂಜೆ ಕಾಫಿ ಜೊತೆಗೆ ಬಿಸಿ ಬಿಸಿಯಾಗಿ ತಿನ್ನಲು ತುಂಬಾ ಚೆನ್ನಾಗಿರುತ್ತದೆ!
ಮಾಡುವ ವಿಧಾನ:-
200 ಗ್ರಾಂ ಪನ್ನೀರ್ ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ.
ಅಕ್ಕಿ ಹಿಟ್ಟು – 1 ಟೇಬಲ್ ಚಮಚ
ಕಾರ್ನ್ ಫ್ಲೋರ್ – 1 ಟೇಬಲ್ ಚಮಚ
ಖಾರದ ಪುಡಿ – 2 ಟೀ ಚಮಚ
ಗರಂ ಮಸಾಲ ಪುಡಿ – 1 ಟೀ ಚಮಚ
ಚಾಟ್ ಮಸಾಲ – 1 ಟೀ ಚಮಚ
ಅರಿಷಿಣ – 1/2 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕಸೂರಿ ಮೇಥಿ – 1 ಟೀ ಚಮಚ
ತಾಜಾ ಗಟ್ಟಿಯಾದ ಮೊಸರು – 1 ಟೇಬಲ್ ಚಮಚ

ಇಷ್ಟು ಸಾಮಗ್ರಿಗಳನ್ನು ಹೆಚ್ಚಿದ ಪನ್ನೀರ್ ಗೆ ಸವರಿ ಅರ್ಧ ಗಂಟೆ FRIDGE ನಲ್ಲಿಡಿ.

ನಂತರ ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ, ಗರಿ ಗರಿಯಾಗಿ ಕರಿದು ನಿಮಗೆ ಇಷ್ಟವಾದ ಯಾವುದಾದರೂ ಸಾಸ್ ಅಥವಾ ಚಟ್ನಿಯೊಂದಿಗೆ ಸವಿಯಿರಿ!
ಖಾರಾ ನಿಮಗೆ ಬೇಕಾಗುವಷ್ಟು ಹಾಕಿ ಮಾಡಿಕೊಳ್ಳಿ.

ಪನ್ನೀರ್ ಬದಲಿಗೆ ಬೇಯಿಸಿ ಸಿಪ್ಪೆ ತೆಗೆದ ಬೇಬಿ ಆಲೂಗೆಡ್ಡೆ ಅಥವಾ ಚಿಕ್ಕದಾಗಿ ಹೆಚ್ಚಿದ ಆಲೂಗೆಡ್ಡೆ ಹಾಕಿ ಮಾಡಬಹುದು!
ಧನ್ಯವಾದಗಳು!![]()
![]()
![]()