ಸಿಹಿ ತಿನಿಸುಗಳು

GUP CHUP ಗಪ್ ಚುಪ್

ಸುಲಭವಾಗಿ ಮಾಡಬಹುದಾದ ಸಿಹಿ ರೆಸಿಪಿ! ಇದು ನಾನು ನನ್ನ ಅಮ್ಮನಿಂದ ಕಲಿತದ್ದು!

ಮಾಡುವ ವಿಧಾನ :-

ಸ್ವಲ್ಪ ಉದ್ದಿನ ಬೇಳೆ 2 ಗಂಟೆ ನೆನೆಸಿಡಿ. ಸ್ವಲ್ಪ ನೀರು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ, ನುಣ್ಣಗೆ ರುಬ್ಬಿಡಿ.

1 ಅಳತೆ ಸಕ್ಕರೆಗೆ 1 ಅಳತೆ ನೀರು ಹಾಕಿ, ಸಕ್ಕರೆ ಪೂರ್ತಿಯಾಗಿ ಕರಗುವವರೆಗೆ ಕುದಿಸಿ. 5 ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿ. ( ಜಾಮೂನ್ ಪಾಕದಂತೆ ). 4 ಏಲಕ್ಕಿ ಪುಡಿ ಮಾಡಿ ಸಕ್ಕರೆ ಪಾಕಕ್ಕೆ ಹಾಕಿ.

ರುಬ್ಬಿದ ಮಿಶ್ರಣದಲ್ಲಿ ಬಾಳೆ ಹಣ್ಣನ್ನು ತೆಳ್ಳಗೆ Slice ಮಾಡಿ, ಉದ್ದಿನ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗುವಂತೆ ಕರಿದು ತೆಗೆದಿಡಿ.

ಕರಿದದ್ದನ್ನು ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದಿಟ್ಟು ಮೇಲೆ ಸ್ವಲ್ಪ ಹೆಚ್ಚಿದ ಗೋಡಂಬಿ, ಬಾದಾಮಿ ಹಾಕಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಗಪ್ ಚುಪ್ ಸಿದ್ಧ!

ಬಾಳೆಹಣ್ಣಿನ ಬದಲಿಗೆ ಸೇಬು ಅಥವಾ ಪೈನಾಪಲ್ ಹಣ್ಣು ಬೇಕಾದರೆ ಹಾಕಬಹುದು!

ಧನ್ಯವಾದಗಳು!

Leave a Reply

Your email address will not be published.