Kannada ಉಪಹಾರ

CHANNA BATURA ಚನ್ನಾ ಬತೂರ

ಜನ ಪ್ರಿಯ ತಿಂಡಿ. ಹೋಟೆಲ್ ನಲ್ಲಿ ಹೋದಾಗ ತಪ್ಪದೆ ತಿನ್ನುವ ತಿಂಡಿ. ಮನೆಯಲ್ಲಿ ಸುಲಭವಾಗಿ, ರುಚಿಯಾಗಿ, ಶುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ. ಚನ್ನಾ (ಚೋಲೆ) ಮಾಡುವ ವಿಧಾನ:- 100 ಗ್ರಾಂ ಕಾಬೂಲ್ ಕಡಲೆ ಕಾಳು ತೊಳೆದು ರಾತ್ರಿ ನೆನೆಸಿಡಿ.     1 ಚಮಚ ಗಸಗಸೆ, 6 ಗೋಡಂಬಿ ಬಿಸಿನೀರಲ್ಲಿ 1 ಗಂಟೆ ನೆನೆಸಿ ನುಣ್ಣಗೆ ರುಬ್ಬಿ. 1 ಟೊಮೇಟೋ ಬಿಸಿ ನೀರಲ್ಲಿ ಹಾಕಿ ಸಿಪ್ಪೆ ತೆಗೆದು ಗೋಡಂಬಿ ಜೊತೆ ಮತ್ತೆ ರುಬ್ಬಿ. ( ಸಾಮಾನ್ಯವಾಗಿ ಚೋಲೆ ಮಾಡುವಾಗ …

Kannada ಉಪಹಾರ

KHARA BATH ಖಾರಾ ಬಾತ್

ನಾವು ಸಾಧಾರಣವಾಗಿ ಹೋಟೆಲ್ ಗೆ ಹೋದಾಗ ತಿನ್ನುವ ಜನಪ್ರಿಯವಾದ ತಿಂಡಿಗಳಲ್ಲಿ ಖಾರಾ ಬಾತ್ ಸಹ ಒಂದು, ರುಚಿಯಾದ ಈ ಖಾರಾ ಬಾತ್ ಮಾಡುವ ವಿಧಾನ ಇಲ್ಲಿದೆ. ಖಾರಾ ಬಾತ್ ಮಾಡುವ ವಿಧಾನ:- 1 ಇಂಚು ಚಕ್ಕೆ, 4 ಲವಂಗ, 4 ಏಲಕ್ಕಿ, 8 ಬ್ಯಾಡಗಿ ಮೆಣಸಿನ ಕಾಯಿ, 6 ಗುಂಟೂರು ಮೆಣಸಿನ ಕಾಯಿ, (ಮೆಣಸಿನ ಕಾಯಿ ಹುರಿದಿರಬೇಕು), 6 ಚಮಚ ಕಾಯಿ ತುರಿಯನ್ನು ನೀರು ಹಾಕದೆ ರುಬ್ಬಿಟ್ಟು ಕೊಳ್ಳಿ. (ನಾನು ಕೇವಲ ಬ್ಯಾಡಗಿ ಮೆಣಸಿನ ಕಾಯಿ ಮಾತ್ರ ಹಾಕಿದ್ದೇನೆ, …

Kannada ಹಬ್ಬದ ಅಡುಗೆಗಳು

GASAGASE PAYASA ಗಸಗಸೆ ಪಾಯಸ

ಗಸಗಸೆಯಲ್ಲಿ ದೇಹವನ್ನು ತಂಪು ಮಾಡುವ ಗುಣವಿದೆ. ಬಾಯಿ ಹುಣ್ಣು ಆದಾಗ ಮನೆಯಲ್ಲಿ ದೊಡ್ಡವರು ಹೇಳ್ತಾರೆ ಒಂದು ಚಮಚ ಗಸಗಸೆ ತಿನ್ನಿ ಎಲ್ಲಾ ಸರಿ ಹೋಗುತ್ತೆ ಅಂತ! ಗಸಗಸೆ ಪಾಯಸ ಬಹಳ ರುಚಿಯಾದ, ಆರೋಗ್ಯಕರ ಪಾಯಸ. ಮಾಡುವುದು ತುಂಬಾ ಸುಲಭ! ಮಾಡುವ ವಿಧಾನ:- 4 ಚಮಚ ಟೇಬಲ್ ಚಮಚ ಗಸಗಸೆ (50 ಗ್ರಾಂ), 1 ಟೀ ಚಮಚ ಅಕ್ಕಿ ಬಿಸಿ ನೀರಲ್ಲಿ 1 ಗಂಟೆ ನೆನೆಸಿಡಿ. ನಂತರ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಸಾಧ್ಯವಾದಷ್ಟು ನುಣ್ಣಗೆ ರುಬ್ಬಿ. …

Kannada ಹಬ್ಬದ ಅಡುಗೆಗಳು

SWEET AND KHARA KADUBU ಸಿಹಿ ಮತ್ತು ಖಾರಾ ಕಡುಬು

ಇನ್ನೇನು ಶ್ರಾವಣ ಮಾಸ ಹತ್ತಿರ ಬರುತ್ತಾ ಇದೆ! ಹಬ್ಬಗಳ ಸಾಲು ಸಾಲಾಗಿ ಬರುತ್ತಿವೆ! ಪ್ರತಿ ದಿನ ಸಿಹಿ ತಿಂಡಿ ಮಾಡಬೇಕು. ಈ ಕಡುಬು ಒಮ್ಮೆ ಮಾಡಿ ನೋಡಿ. ಸಾಮಾನ್ಯವಾಗಿ ಕಡುಬನ್ನು ಅಕ್ಕಿ ಹಿಟ್ಟು ಬೇಯಿಸಿ ಮಾಡುತ್ತಾರೆ. ಆದರೆ ಅಕ್ಕಿಯನ್ನು ನೆನೆಸಿ ಕಾಯಿ ತುರಿಯೊಂದಿಗೆ ರುಬ್ಬಿ, ಬೇಯಿಸಿ, ಹಲಸಿನ ಎಲೆಯಲ್ಲಿ ಕೋನ್ ಆಕಾರದಲ್ಲಿ ಮಾಡುವುದೇ ಈ ಕಡುಬಿನ ವಿಶೇಷತೆ! ಕೋನ್ ಮಾಡಲು:- ಹಲಸಿನ ಎಲೆಗಳನ್ನು ಚೆನ್ನಾಗಿ ತೊಳೆದು ತೊಟ್ಟುಗಳನ್ನು ತೆಗೆದು ಕೋನ್ ಆಕಾರದಲ್ಲಿ ಸುತ್ತಿ ಕಡ್ಡಿ ಚುಚ್ಚಿದರೆ ಕೋನ್ …

Kannada ಹಬ್ಬದ ಅಡುಗೆಗಳು

SABBAKKI PAYASA ಸಬ್ಬಕ್ಕಿ ಪಾಯಸ

ಸಬ್ಬಕ್ಕಿ ಪಾಯಸ ಮಕ್ಕಳ ಇಷ್ಟವಾದ ಪಾಯಸ! ಮಾಡುವ ವಿಧಾನ:- 1 ಚಮಚ ತುಪ್ಪ ಹಾಕಿ 1 ಲೋಟ ಸಬ್ಬಕ್ಕಿಯನ್ನು 2 ನಿಮಿಷ ಹುರಿಯಿರಿ. ಕುದಿಯುವ ನೀರು ಹಾಕಿ ಮೆತ್ತಗೆ ಆಗುವವರೆಗೆ ಬೇಯಿಸಿ. ಸಬ್ಬಕ್ಕಿ ಪೂರ್ತಿ ಬೆಂದಾಗ ಪಾರದರ್ಶಕ ಆಗುತ್ತದೆ( Transparent). ಒಂದೆರಡು ನಿಮಿಷ ಹಾಗೇ ಬಿಟ್ಚು ಮೇಲಿನ ತಿಳಿಯನ್ನು ತೆಗೆದು ಬಿಡಿ. 1/4 ಲೀಟರ್ ಹಾಲು ಕಾಯಲು ಇಡಿ. ಬೆಂದ ಸಬ್ಬಕ್ಕಿಗೆ ಬಿಸಿ ಹಾಲು, 1/2 ಲೋಟ ಸಕ್ಕರೆ ಹಾಕಿ (ಸಿಹಿ ನಿಮ್ಮ ರುಚಿಗೆ ತಕ್ಕ ಹಾಗೆ) …

Kannada ಉಪಹಾರ ಹಬ್ಬದ ಅಡುಗೆಗಳು

BILI HOLIGE AND MIX VEG SAAGU ಬಿಳಿ ಹೋಳಿಗೆ ಮತ್ತು ಮಿಕ್ಸ್ ವೆಜ್ ಸಾಗು

ಹೋಳಿಗೆ ಕರ್ನಾಟಕದ ಅತ್ಯಂತ ಜನಪ್ರಿಯ ಸಿಹಿ ತಿಂಡಿ! ವಿಶೇಷ ದಿನಗಳಲ್ಲಿ, ಹಬ್ಬಗಳಲ್ಲಿ ತಪ್ಪದೆ ಮಾಡುವ ಆಹಾರ! ಹೋಳಿಗೆ ಸಾಮಾನ್ಯವಾಗಿ ಸಿಹಿ ಇರುತ್ತದೆ. ಆದರೆ ಬಿಳಿ ಹೋಳಿಗೆ ಯಾವುದಾದರೂ ಖಾರಾ Side dish ಜೊತೆ ತಿನ್ನುವುದು. ಬಿಳಿ ಹೋಳಿಗೆ ಮಾಡುವ ವಿಧಾನ:- ಕಣಕ ಮಾಡಲು – 1 ಲೋಟ ಮೈದಾ ಹಿಟ್ಟು, ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ 1 ಚಮಚ ಎಣ್ಣೆ ಹಾಕಿ ಕಲೆಸಿ ಸ್ವಲ್ಪ ನೀರು ಸೇರಿಸಿ ಹೋಳಿಗೆ ಕಣಕದ ಹಿಟ್ಚಿನ ಹದಕ್ಕೆ ಕಲೆಸಿ ಚೆನ್ನಾಗಿ ನಾದಿ …

Kannada ಉಪಹಾರ

DIDHEER NEERU DOSE & ELLU CHUTNEY ದಿಢೀರ್ ನೀರು ದೋಸೆ & ಎಳ್ಳು ಚಟ್ನಿ

ಬೆಳಗ್ಗಿನ ತಿಂಡಿಗೆ ಅವಸರಕ್ಕೆ ಏನು ಮಾಡೋದು ಅಂತ ಯೋಚನೆ ಮಾಡುವ ಗೃಹಿಣಿಯರಿಗೆ ಇಲ್ಲಿದೆ ಸುಲಭವಾಗಿ ಮಾಡುವ ರೆಸಿಪಿ! ದಿಢೀರ್ ನೀರು ದೋಸೆ ನೀರು ದೋಸೆಗೆ ಸಾಮಾನ್ಯವಾಗಿ ಅಕ್ಕಿ ನೆನೆಸಿ ನುಣ್ಣಗೆ ರುಬ್ಬಿ ಮಾಡುವುದು. ಈ ರೆಸಿಪಿ ಅಕ್ಕಿ ನೆನೆಸದೆ ಕಾಯಿತುರಿ ಮಾತ್ರ ರುಬ್ಬಿ 5 ನಿಮಿಷದಲ್ಲಿ ಮಾಡುವುದು!      1/2 ಕಾಯಿ ಹೋಳು ನುಣ್ಣಗೆ ರುಬ್ಬಿ 1 ಲೋಟ ಅಕ್ಕಿ ಹಿಟ್ಟಿಗೆ ಹಾಕಿ, ಉಪ್ಪು, 2 1/2 ಲೋಟದಷ್ಟು ನೀರು ಸೇರಿಸಿ ಗಂಟು ಇಲ್ಲದ ಹಾಗೆ …

Kannada ಉಪಹಾರ

POORI & SAGU ಪೂರಿ ಮತ್ತು ಸಾಗು

ಜನಪ್ರಿಯ ತಿಂಡಿ! ಸಾಗು ಒಬ್ಬೊಬ್ಬರದು ಒಂದೊಂದು ಶೈಲಿ! ನಮ್ಮ ಮನೆಯ ಸಾಗು ಹೆಚ್ಚು ಮಸಾಲೆ ಇಲ್ಲ! ಈ ರೆಸಿಪಿಯಲ್ಲಿ ನಿಮಗೆ ಇಷ್ಟವಾದ ಯಾವುದಾದರೂ ಸಾಮಗ್ರಿಗಳನ್ನು ಸೇರಿಸಿಕೊಳ್ಳಬಹುದು. ಅಥವಾ ಇಷ್ಟವಿಲ್ಲದ ಸಾಮಗ್ರಿಗಳನ್ನು ಹಾಕದೆ ಮಾಡಬಹುದು! ಮಾಡುವ ವಿಧಾನ:- ಸಾಗು ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿ ಬೇಯಿಸಿಡಿ. 4 ಚಮಚ ಕಾಯಿ ತುರಿದಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1/2 ಈರುಳ್ಳಿ ರುಬ್ಬಲು, 1/2 ಒಗ್ಗರಣೆಗೆ. ಕಾಯಿ ತುರಿ, 2 ಚಮಚ ಹುರಿಗಡಲೆ, 4 ಹಸಿ ಮೆಣಸಿನಕಾಯಿ, …

Kannada ಉಪಹಾರ

BROKEN WHEAT PONGAL ಬ್ರೋಕನ್ ವೀಟ್ ಪೊಂಗಲ್

ಈಗಿನ ಯುವ ಜನತೆ ಹೆಚ್ಚಿನವರು ಡಯಟ್, ಕ್ಯಾಲೋರಿಯ ಬಗ್ಗೆ ತುಂಬಾ ಯೋಚನೆ ಮಾಡುತ್ತಾರೆ. ಹಾಗೆಂದು ಹೊಟ್ಟೆ ತುಂಬಾ ತಿನ್ನದೆ ಊಟ ಬಿಡುವುದು ಕೂಡ ತಪ್ಪು! ಇಂತಹವರಿಗಾಗಿ ಇಲ್ಲಿದೆ ಬೇಗ ಹೊಟ್ಟೆ ತುಂಬುವ, ರುಚಿಯಾಗಿರುವ, ಕಡಿಮೆ ಕ್ಯಾಲೋರಿಯ, ಸುಲಭವಾಗಿ ಮಾಡುವ ರೆಸಿಪಿ!ಬ್ರೋಕನ್ ವೀಟ್ ಪೊಂಗಲ್ ಮಾಡುವ ವಿಧಾನ:- 1 ಲೋಟ ಬ್ರೋಕನ್ ವೀಟ್, 1/2 ಲೋಟ ಹೆಸರು ಬೇಳೆ ಎಣ್ಣೆ ಹಾಕದೆ ಸ್ವಲ್ಪ ಹುರಿದು ತೊಳೆದು ನೀರು ಸೋರಿ ಹಾಕಿಡಿ. ನಿಮಗೆ ಇಷ್ಟವಾದ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಡಿ. 1 …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

KOBBARI LADDU ಕೊಬ್ಬರಿ ಲಡ್ಡು

ಹಬ್ಬ ಬಂದರೆ ಗೃಹಿಣಿಯರಿಗೆ ಕೈ ತುಂಬಾ ಕೆಲಸ! ಮನೆ ಕ್ಲೀನ್, ಶಾಪಿಂಗ್ , ಹಬ್ಬದ ಸಿದ್ಧತೆ ಹೀಗೆ! ಹಬ್ಬ ಎಂದ ಮೇಲೆ ಸಿಹಿ ತಿಂಡಿ ಇರಲೇಬೇಕು! ಅದರಲ್ಲೂ ಬೇಗ ಆಗುವ ತಿಂಡಿ ಇದ್ದರೆ ಎಷ್ಟು ಚೆಂದ ಅಲ್ಲವೇ? ಸುಲಭವಾಗಿ, ಬೇಗ ಮಾಡುವ ರೆಸಿಪಿ ಇದು! ಕೊಬ್ಬರಿ ಲಡ್ಡು ಮಾಡುವ ವಿಧಾನ:- 1 ಅಳತೆ ಕಾಯಿ ತುರಿಯನ್ನು ಬಾಣಲೆಯಲ್ಲಿ ಎಣ್ಣೆ ಹಾಕದೆ ಕಡಿಮೆ ಉರಿಯಲ್ಲಿ ಸ್ವಲ್ಪ ನೀರಿನಂಶ ಹೋಗುವವರೆಗೆ ಹುರಿಯಿರಿ. 2 ರಿಂದ 3 ನಿಮಿಷ ಸಾಕು. ನಂತರ 1/4 …