KADAMBA SAMBAR ಕದಂಬ ಸಾಂಬಾರ್
ತಮಿಳು ನಾಡಿನ ಜನಪ್ರಿಯ ಸಾಂಬಾರ್. ಹಬ್ಬದ ದಿನಗಳಲ್ಲಿ, ವಿಶೇಷ ದಿನಗಳಲ್ಲಿ ಮಾಡುತ್ತಾರೆ. ಕದಂಬ ಎಂದರೇನೆ ಎಲ್ಲಾ ಸೇರಿಸಿದ್ದು ಎಂದು ಅರ್ಥ! ಮಾಡುವ ವಿಧಾನ:- ನಿಮಗೆ ಇಷ್ಟವಾದ ತರಕಾರಿಗಳನ್ನು ದೊಡ್ಡ ದೊಡ್ಡದಾಗಿ ಹೆಚ್ಚಿಡಿ. ಈರುಳ್ಳಿ, ಬೆಳ್ಳುಳ್ಳಿ ಬಿಟ್ಟು ಬೇರೆ ಯಾವ ತರಕಾರಿ ಬೇಕಾದರೂ ಹಾಕಬಹುದು. 1 ನಿಂಬೆ ಹಣ್ಣಿನ ಗಾತ್ರದ ಹುಣಿಸೆ ರಸ ತೆಗೆದು ಚೂರು ಬೆಲ್ಲ ಸೇರಿಸಿಡಿ. 1 ಬಟ್ಟಲು ತೊಗರಿ ಬೇಳೆಗೆ ಚಿಟಿಕೆ ಅರಿಶಿಣ, 1 ಚಮಚ ಎಣ್ಣೆ ಹಾಕಿ 4 ವಿಷಲ್ …









