Showing 103 Result(s)
Kannada Oota ಉಪಹಾರ

GARLIC RICE ಗಾರ್ಲಿಕ್ ರೈಸ್

 ಬೆಳ್ಳುಳ್ಳಿ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸ ರೆಸಿಪಿ! ತುಂಬಾ ಸುಲಭವಾಗಿ, ರುಚಿಯಾಗಿ, ಬೇಗನೆ ಮಾಡಬಹುದು! ಮಾಡುವ ವಿಧಾನ:-    1 ಲೋಟ ಅಕ್ಕಿ ತೊಳೆದು ನೀವು ಸಾಧಾರಣವಾಗಿ ಅನ್ನ ಮಾಡುವ ಹಾಗೆ ಅನ್ನ ಮಾಡಿ ತಟ್ಟೆಯಲ್ಲಿ ಹರಡಿಡಿ. 1 ಮೀಡಿಯಂ ಗಾತ್ರದ ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ. 4 ಚಮಚದಷ್ಟು ತೆಂಗಿನ ಕಾಯಿ ತುರಿದು ಇಡಿ.    ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಬೆಳ್ಳುಳ್ಳಿ, 8 ಬ್ಯಾಡಗಿ/ಕೆಂಪು ಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿದು ತೆಗೆದಿಡಿ. ಅದೇ …

Kannada Oota

BADANE HASI GOJJU MATTHU RAGI MUDDE ಬದನೇ ಕಾಯಿ ಹಸಿ ಗೊಜ್ಜು ಮತ್ತು ರಾಗಿ ಮುದ್ದೆ

ಪ್ರತಿ ದಿನ ಬೇಳೆ ಸಾರು ತಿಂದು ಬೇಸರ ಆಗಿದ್ದರೆ, ಒಮ್ಮೆ ಈ ಹಸಿ ಗೊಜ್ಜು ತಿಂದು ನೋಡಿ, ಇದು ಹೊಸ ರುಚಿ ಅಂತೂ ಖಂಡಿತಾ ಅಲ್ಲ, ಅಜ್ಜಿಯ ಕಾಲದ್ದು! 4 ಗುಂಡು ಬದನೇ ಕಾಯಿಯನ್ನು ತೊಳೆದು, ಎರಡು ಭಾಗ ಮಾಡಿ, 1 ಆಲೂಗೆಡ್ಡೆ (optional) ಜೊತೆ ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿ, ಬದನೆ ಮತ್ತು ಆಲೂ ಸಿಪ್ಪೆ ತೆಗೆದು ಇಡಿ, (ಬದನೇ ಕಾಯಿಯನ್ನು ನಮ್ಮ ಅಮ್ಮ ಕೆಂಡದಲ್ಲಿ ಸುಡುತ್ತಿದ್ದರು, ಹಾಗೆ ಸುಟ್ಟರೆ ರುಚಿ ಇನ್ನೂ ಚೆಂದ, ಈಗಲೂ …

Kannada Oota ಉಪಹಾರ

KADAMBAM SAADAM (RICE) ಕದಂಬಂ ಅನ್ನ

ಕದಂಬಂ ಅನ್ನ ತಮಿಳುನಾಡಿನ ಸಾಂಪ್ರಾದಾಯಿಕ ಅಡುಗೆ‌. ನವರಾತ್ರಿಯಲ್ಲಿ ತಾಯಿ ದುರ್ಗೆಯ ನೈವೇದ್ಯಕ್ಕೆ ಮಾಡುತ್ತಾರೆ. ಗಣೇಶನ ಹಬ್ಬದಲ್ಲಿ 5 ದಿನದ ನಂತರ ಗಣಪತಿಯನ್ನು ಬಿಡುವಾಗ, ಕೆಲವು ಐಯಂಗಾರ್ ಮನೆಗಳಲ್ಲಿ ಆನೆ ಹಬ್ಬದ ಸಮಯದಲ್ಲಿ ಸಹ ಮಾಡುತ್ತಾರೆ. ಮಾಡುವ ವಿಧಾನ ಮತ್ತು ರುಚಿ ಸ್ವಲ್ಪ ನಮ್ಮ ಕರ್ನಾಟಕದ ಬಿಸಿ ಬೇಳೆ ಬಾತಿನ ಹಾಗೇ ಇರುತ್ತೆ. ಬಿಸಿ ಬೇಳೆ ಬಾತಿನ ಸೋದರ ಸಂಬಂಧಿ ಎಂದೇ ಹೇಳಬಹುದು, ತರಕಾರಿ ಹೆಚ್ಚು ಹಾಕಿದಷ್ಟೂ ರುಚಿ ಹೆಚ್ಚು. ಕದಂಬಂ ಅನ್ನ ಮಾಡುವ ವಿಧಾನ:-    1 ಲೋಟ …

Kannada Oota

STUFFED KULCHA & BENDI MASALA ಸ್ಟಫ್ಡ್ ಕುಲ್ಚಾ ಮತ್ತು ಬೆಂಡಿ ಮಸಾಲ

ಮಾಡುವ ವಿಧಾನ:-      ಮೊದಲು ಕುಲ್ಚಾ ಹಿಟ್ಟನ್ನು ಸಿದ್ಧ ಮಾಡಿಕೊಳ್ಳಿ. 1 ಬಟ್ಟಲು ಮೈದಾ ಹಿಟ್ಟಿಗೆ ತಲಾ 1/2 ಚಮಚ ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಸಕ್ಕರೆ, 1 ಚಮಚ ಉಪ್ಪು, 1 ಚಮಚ ಎಣ್ಣೆ, 2 ಚಮಚ ಬಿಳಿ ಎಳ್ಳು, ಹೆಚ್ಚಿದ ಕೊತ್ತಂಬರಿ, 2 ಚಮಚ ಮೊಸರು ಹಾಕಿ, ಚೆನ್ನಾಗಿ ಕಲೆಸಿ, ಬೇಕಾದಲ್ಲಿ ಸ್ವಲ್ಪ ನೀರು ಹಾಕಿ, ಮೆತ್ತಗೆ ಕಲೆಸಿ, ಒದ್ದೆ ಬಟ್ಟೆ ಹಾಕಿ 2 ತಾಸು ನೆನೆಯಲು ಬಿಡಿ. 2 ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ …

Kannada Oota

RICE PHIRNI ರೈಸ್ ಫಿರ್ನಿ

ಉತ್ತರ ಭಾರತದ ಬಹು ಜನಪ್ರಿಯ ಪಾಯಸ( ಖೀರ್)! ಮಾಡುವುದು ತುಂಬಾ ಸುಲಭ! ಅವರು ಹಬ್ಬಗಳಲ್ಲಿ ತಪ್ಪದೆ ಮಾಡುತ್ತಾರೆ! ಹಾಗಾದರೆ ಸಿಹಿ ಪಾಯಸದ ರೆಸಿಪಿ ನೋಡೋಣವೇ? ರೈಸ್ ಫಿರ್ನಿ ಮಾಡುವ ವಿಧಾನ:-    4 ಚಮಚ ಬಾಸುಮತಿ ಅಕ್ಕಿಯನ್ನು ತೊಳೆದು 1/2 ಗಂಟೆ ನೆನೆಸಿಡಿ. ನಂತರ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ. 2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕುಂಕುಮ ಕೇಸರಿ ನೆನೆಸಿಡಿ.    ದಪ್ಪ ತಳದ ಬಾಣಲೆಯಲ್ಲಿ 1/2 ಲೀಟರ್ ಗಟ್ಟಿ ಹಾಲು ಕುದಿಯಲು ಇಡಿ. ಹಾಲು …

Kannada Oota Tindi Tinisu ಖಾರ ತಿನಿಸುಗಳು

STUFFED ONION RINGS & KADALE BELE CHITHRANNA ಸ್ಟಫ್ಡ್ ಆನಿಯನ್ ರಿಂಗ್ಸ್ ಮತ್ತು ಕಡಲೇ ಬೇಳೆ ಚಿತ್ರಾನ್ನ

ಸ್ಟಫ್ಡ್ ಆನಿಯನ್ ರಿಂಗ್ಸ್ ಮಾಡುವ ವಿಧಾನ:-     4 ಆಲೂ ಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿ, ಹಸಿ ಮೆಣಸಿನ ಕಾಯಿ ಪೇಸ್ಟ್,1/2 ಚಮಚ ಜೀರಿಗೆ ಪುಡಿ, ನಿಂಬೆ ರಸ, ಉಪ್ಪು ಹಾಕಿ ಕಲೆಸಿಡಿ. ಸಾಧಾರಣವಾಗಿ ಬಜ್ಜಿ ಹಿಟ್ಟಿನ ಹದಕ್ಕೆ ಬಜ್ಜಿ ಹಿಟ್ಟು ಕಲೆಸಿಡಿ. ಈರುಳ್ಳಿ ಸಿಪ್ಪೆ ತೆಗೆದು 1/2 ಇಂಚು ಅಳತೆಗೆ ರಿಂಗ್ಸ್ ತರಹ ಕತ್ತರಿಸಿ ರಿಂಗ್ಸ್ ಅನ್ನು ಬೇರೆ ಬೇರೆ ಮಾಡಿ, ಒಂದು ದೊಡ್ಡ ರಿಂಗ್ ಒಳಗೆ ಒಂದು ಚಿಕ್ಕ ರಿಂಗ್ …

Kannada Oota

MUGHLAI BIRIYANI (Veg) ಮುಘಲಾಯ್ ಬಿರಿಯಾನಿ (ವೆಜ್)

ಬಿರಿಯಾನಿಗಳ ರಾಜ ಎಂದೇ ಹೇಳಬಹುದು! ರುಚಿ ಅದ್ಭುತ! ಮಾಡುವ ವಿಧಾನ ನೋಡೋಣವೇ? 1/4 ಕೇಜಿ (1 ಲೋಟ) ಬಾಸುಮತಿ ಅಕ್ಕಿಯನ್ನು ತೊಳೆದಿಡಿ. ಕುಕ್ಕರಿನಲ್ಲಿ 4 ಲೋಟ ನೀರು ಹಾಕಿ ಕುದಿಯಲು ಇಡಿ. 1 ಪಲಾವ್ ಎಲೆ, 1 ಇಂಚು ಚಕ್ಕೆ, 2 ಲವಂಗ, 2 ಏಲಕ್ಕಿ ಹಾಕಿ, ಬಾಸುಮತಿ ಅಕ್ಕಿ ಹಾಕಿ ಬೇಯಲು ಬಿಡಿ. ಅಕ್ಕಿ 90% ಬೆಂದ ಮೇಲೆ ನೀರು ಸೋರಿ ಹಾಕಿಡಿ. 1/2 ಚಮಚ ತುಪ್ಪ, ಚಿಟಿಕೆ ಉಪ್ಪು ಹಾಕಿ ಕಲೆಸಿಡಿ.     …

Kannada Oota ಉಪಹಾರ

PALAK RICE ಪಾಲಕ್ ರೈಸ್

 ಪಾಲಕ್ ಸೊಪ್ಪು ಅತ್ಯಂತ ಆರೋಗ್ಯಕರ ಸೊಪ್ಪು! ಕಬ್ಬಿನದ ಅಂಶ ತುಂಬಿದೆ, ಬೆಳೆಯುವ ಮಕ್ಕಳಿಗೆ ತುಂಬಾ ಒಳ್ಳೆಯದು. ಪಾಲಕ್ ರೈಸ್ ಬಹಳ ಸುಲಭವಾಗಿ, ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು ಕುಕ್ಕರಿನಲ್ಲಿ 4 ಲೋಟ ನೀರು ಹಾಕಿ ಮುಚ್ಚಳ ಹಾಕದೆ ಬೇಯಿಸಿ ನೀರು ಸೋರಿ ಹಾಕಿಡಿ.     4 ಕಟ್ಟು ಪಾಲಕ್ ಸೊಪ್ಪು ಚೆನ್ನಾಗಿ ತೊಳೆದು ಬಾಣಲೆಯಲ್ಲಿ ನೀರು ಹಾಕಿ 2 ಹಸಿ ಮೆಣಸಿನ ಕಾಯಿ ಜೊತೆ ಬೇಯಿಸಿ …

Kannada Oota

HUNISE CHITHRANNA ಹುಣಿಸೆ ಚಿತ್ರಾನ್ನ

ನಿಂಬೆ ಚಿತ್ರಾನ್ನ, ಈರುಳ್ಳಿ ಚಿತ್ರಾನ್ನ, ಕಾಯಿ ಚಿತ್ರಾನ್ನ ತಿಂದು ಬೇಸರವಾಗಿದ್ದರೆ ಬದಲಾವಣೆಗೆ ಈ ಹುಣಿಸೆ ಚಿತ್ರಾನ್ನ ಮಾಡಿ ನೋಡಿ! ರುಚಿ ತುಂಬಾ ಚೆನ್ನಾಗಿರುತ್ತದೆ! ಮಾಡುವ ವಿಧಾನ:- 1 ಪಾವು ಅಕ್ಕಿ ತೊಳೆದು ಅನ್ನ ಮಾಡಿ ತಟ್ಟೆಯಲ್ಲಿ ಹರಡಿಡಿ.     1 ನಿಂಬೆ ಹಣ್ಣಿನ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಲ್ಲಿ ನೆನೆಸಿ ರಸ ತೆಗೆದು 1 ತುಂಡು ಬೆಲ್ಲ ಹಾಕಿ ನೆನೆಸಿಡಿ.        ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ 1 …

Kannada Oota

BABY ALOO BIRIYANI ಬೇಬಿ ಆಲೂ ಬಿರಿಯಾನಿ

ಆಲೂ ಗೆಡ್ಡೆ ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುವ ತರಕಾರಿ, ಅದರಲ್ಲೂ ಬೇಬಿ ಆಲೂ ಗೆಡ್ಡೆ ಮಕ್ಕಳಿಗೆ ಬಲು ಇಷ್ಟ! ಈ ಬೇಬಿ ಆಲೂ ಗೆಡ್ಡೆಯ ಒಂದು ಬಿರಿಯಾನಿ ನಿಮ್ಮ ಮನೆಯ ಮುದ್ದು ಮಕ್ಕಳಿಗಾಗಿ. ಬೇಬಿ ಆಲೂ ಬಿರಿಯಾನಿ ಮಾಡುವ ವಿಧಾನ:- 1/4 ಬೇಬಿ ಆಲೂ ಗೆಡ್ಡೆಯನ್ನು ತೊಳೆದು, ಸಿಪ್ಪೆ ತೆಗೆದು, ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಆಲೂ ಗೆಡ್ಡೆ ಹಾಕಿ ಸ್ವಲ್ಪ ಬಾಡಿಸಿ, ಉಪ್ಪು, ಖಾರ ಪುಡಿ ಹಾಕಿ ಫ್ರೈ ಮಾಡಿ ತೆಗೆದು ಇಡಿ‌.     …