PALAK DAL & JEERA RICE ಪಾಲಕ್ ದಾಲ್ ಮತ್ತು ಜೀರಾ ರೈಸ್
ಪಾಲಕ್ ಒಂದು ಆರೋಗ್ಯಕರ ಸೊಪ್ಪು! ಕಬ್ಬಿಣದ ಅಂಶ ಹೇರಳವಾಗಿದೆ! ಬೆಳೆಯುವ ಮಕ್ಕಳಿಗೆ ಬಹಳ ಒಳ್ಳೆಯದು! ಪಾಲಕ್ ಸೊಪ್ಪು ಹಾಕಿ ಒಂದು ರುಚಿಯಾದ, ಆರೋಗ್ಯಕರ ದಾಲ್ ಮಾಡುವ ರೆಸಿಪಿ ಇಲ್ಲಿದೆ. ಪಾಲಕ್ ದಾಲ್ ಮಾಡುವ ವಿಧಾನ:- 4 ಕಟ್ಟು ಪಾಲಕ್ ಸೊಪ್ಪನ್ನು ತೊಳೆದು, ಸಣ್ಣಗೆ ಹೆಚ್ಚಿಡಿ. 1 ಈರುಳ್ಳಿ, 3 ಟೊಮೇಟೋ ಸಣ್ಣಗೆ ಹೆಚ್ಚಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, 1 ಟೀ ಚಮಚ ಜೀರಿಗೆ, ಚಿಟಿಕೆ ಅರಿಶಿಣ, …









