Showing 103 Result(s)
Kannada Oota ಸಾಂಬಾರು ಮತ್ತು ಪಲ್ಯಗಳು

AVARE KALINA SAMBAR ಅವರೆ ಕಾಳಿನ ಸಾಂಬಾರ್

ಈಗ ಸೊಗಡು ಅವರೆ ಕಾಯಿ ಸಿಗುವ ಕಾಲ! ಅವರೆಕಾಳಿನ ರುಚಿಯಾದ ಸಾಂಬಾರ್ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:-    1 ಪಾವು ಎಳೆಯದಾದ ಅವರೆ ಕಾಳನ್ನು ಬೇಯಿಸಿಡಿ. 1 ಹಸಿ ಈರುಳ್ಳಿ, 2 ಚಮಚ ಸಾಂಬಾರ್ ಪುಡಿ, 1/2 ಚಮಚ ಜೀರಿಗೆ, ಬೆಂದ ಅವರೆ ಕಾಳು 1 ಸೌಟು, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿಡಿ.    ಬೆಂದ ಅವರೆ ಕಾಳಿಗೆ ರುಬ್ಬಿದ ಮಿಶ್ರಣ, ಉಪ್ಪು, 2 ಚಮಚ ಹುಣಿಸೆ ರಸ, ಸ್ವಲ್ಪ ನೀರು ಹಾಕಿ …

Kannada Oota ಸಾಂಬಾರು ಮತ್ತು ಪಲ್ಯಗಳು

THARAKARIGALA KOOTU ತರಕಾರಿಗಳ ಕೂಟು

ಪ್ರತಿ ದಿನ ಸಾಂಬಾರ್, ಸಾರು ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ! ಮಾಡುವ ವಿಧಾನ:- ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿ 100 ಗ್ರಾಂ ತೊಗರಿ ಬೇಳೆ / ಹೆಸರು ಬೇಳೆ ಜೊತೆಗೆ ಹಾಕಿ ಬೇಯಿಸಿಡಿ. ಹುರುಳಿ ಕಾಯಿ, ಆಲೂಗೆಡ್ಡೆ, ಕ್ಯಾರೆಟ್, ಕುಂಬಳ, ಸೀಮೆ ಬದನೆ, ಬದನೆ, ನುಗ್ಗೆ ಕಾಯಿ, ಬಟಾಣಿ, ಅವರೆ ಕಾಳು, ನೆನೆಸಿದ ಕಡಲೇ ಬೀಜ ಹೀಗೆ ಸ್ವಲ್ಪ ಸ್ವಲ್ಪ ಹಾಕಬಹುದು. ಅಥವಾ ಯಾವುದಾದರೂ ಸೊಪ್ಪು ಹಾಕಿ ಮಾಡಬಹುದು. ಅಥವಾ ನಿಮ್ಮ ಇಷ್ಟದ …

Kannada Oota

MIX VEGETABLE BATH ಮಿಕ್ಸ್ ವೆಜಿಟೇಬಲ್ ಬಾತ್

ರುಚಿಯಾದ, ಸುಲಭವಾಗಿ ಮಾಡಬಹುದಾದ ಲಂಚ್ ಬಾಕ್ಸ್ ಗೆ, ಮಧ್ಯಾಹ್ನದ ಊಟಕ್ಕೆ ಮಾಡಬಹುದಾದ ರೆಸಿಪಿ! ಬಾತ್ ಪುಡಿ ಮಾಡುವ ವಿಧಾನ:- ಕಡಲೇ ಬೇಳೆ – 2 ಟೇಬಲ್ ಚಮಚ ಉದ್ದಿನ ಬೇಳೆ – 1 ಟೇಬಲ್ ಚಮಚ ಧನಿಯಾ – 1 ಟೀ ಚಮಚ ಚಕ್ಕೆ – 1/2 ಇಂಚು ಲವಂಗ – 2 ಒಣ ಕೊಬ್ಬರಿ ತುರಿ – 2 ಟೇಬಲ್ ಚಮಚ ಬ್ಯಾಡಗಿ ಮೆಣಸಿನಕಾಯಿ – 8 ರಿಂದ 10 ಮೇಲೆ ಹೇಳಿರುವ ಸಾಮಗ್ರಿಗಳನ್ನು ಬೇರೆ …

Kannada Oota ಸಾಂಬಾರು ಮತ್ತು ಪಲ್ಯಗಳು

MYSORE RASAM ಮೈಸೂರು ರಸಂ

ಮೈಸೂರು ಅಂದದ ಊರು! ಮೈಸೂರಿನ KRS, ಅರಮನೆ, ಮೈಸೂರು ಪಾಕ್, ಮೈಸೂರು ಸಿಲ್ಕ್, ಮೈಸೂರು ಮಲ್ಲಿಗೆ! ಹೀಗೆ ಬೆಳೆಯುತ್ತಾ ಹೋಗುವ ಪಟ್ಟಿಗೆ ಸೇರಿಸಲು ಇನ್ನೊಂದು ಹೆಸರು ಮೈಸೂರು ರಸಂ! ರುಚಿಯಾದ, ಸುಲಭವಾಗಿ ಮಾಡಬಹುದಾದ ರಸಂ ಪುಡಿ, ರಸಂ ಎರಡರ ರೆಸಿಪಿ ಇಲ್ಲಿದೆ! ರಸಂ ಪುಡಿ ಬೇಕಾಗುವ ಸಾಮಗ್ರಿಗಳು ಬ್ಯಾಡಗಿ ಮೆಣಸಿನಕಾಯಿ – 200 ಗ್ರಾಂ ಧನಿಯ – 4 ಟೇಬಲ್ ಚಮಚ ಕರಿ ಮೆಣಸು – 2 ಟೇಬಲ್ ಚಮಚ ಸಾಸಿವೆ – 2 ಟೇಬಲ್ ಚಮಚ ಜೀರಿಗೆ …

Kannada Oota ಉಪಹಾರ

MALAGOGARE (Pepper rice) ಮಳಗೋಗರೆ (ಮೆಣಸಿನ ಅನ್ನ)

ಮಳೆಗಾಲ ಪ್ರಾರಂಭವಾಗುವಾಗಲೇ ಮನೆಯಲ್ಲಿ ನೆಗಡಿ, ಕೆಮ್ಮು ಆರಂಭವಾಗುತ್ತೆ. ಆಷಾಡ ಮಾಸದಲ್ಲಿ, ಗಾಳಿ ಮತ್ತು ಮಳೆ ಎರಡೂ ಇರುವುದರಿಂದ ನಾವು ಹೆಚ್ಚು ಮೆಣಸನ್ನು ಉಪಯೋಗಿಸುವುದು ಒಳ್ಳೆಯದು! ನೆಗಡಿ ಕೆಮ್ಮಿನೊಂದಿಗೆ ಹೋರಾಡುವ ಶಕ್ತಿ ಈ ಪುಟ್ಟ ಕಾಳಿಗಿದೆ! “ಮಳಗೋಗರೆ” ತಮಿಳುನಾಡಿನ ಒಂದು ಸಾಂಪ್ರದಾಯಿಕ ಅಡುಗೆ! ಮಾಡುವುದು ತುಂಬಾ ಸುಲಭ! ಮಾಡುವ ವಿಧಾನ:- ನೀವು ಸಾಮಾನ್ಯವಾಗಿ ಮಾಡುವ ಹಾಗೇ ಅನ್ನ ಮಾಡಿ ಹರಡಿಡಿ.     3 ಚಮಚ ಉದ್ದಿನ ಬೇಳೆ, 1 ಚಮಚ ಕರಿ ಮೆಣಸು, 2 ಬ್ಯಾಡಗಿ ಮೆಣಸಿನ …

Kannada Oota ಉಪಹಾರ

HERALI KAYI GOJJU & CHITHRANNA ಹೇರಳೆ ಕಾಯಿ ಗೊಜ್ಜು ಮತ್ತು ಚಿತ್ರಾನ್ನ

ಹೇರಳೆ ಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಪಿತ್ತನಾಶಕ! ಮಧು ಮೇಹವನ್ನು ಹತೋಟಿಯಲ್ಲಿ ಇಡುತ್ತದೆ. ಬಾಣಂತಿಯರಿಗೆ ಸಹ ಇದರ ರಸದದಿಂದ ಗೊಜ್ಜು ಮಾಡಿ ಕೊಡುತ್ತಾರೆ. ಆರೋಗ್ಯಕರವಾದ, ರುಚಿಕರವಾದ ಹೇರಳೆ ಕಾಯಿಯ ಗೊಜ್ಜಿನ ರೆಸಿಪಿ ಇಲ್ಲಿದೆ. ಹೇರಳೆ ಕಾಯಿ ಗೊಜ್ಜು ಮಾಡುವ ವಿಧಾನ :-     1 ಚಮಚ ಉದ್ದಿನ ಬೇಳೆ, 3/4 ಚಮಚ ಕಡಲೇ ಬೇಳೆ, 1/2 ಚಮಚ ಜೀರಿಗೆ, 1/2 ಚಮಚ ಮೆಂತ್ಯ, 1 ಚಮಚ ಬಿಳಿ ಎಳ್ಳು ಇಷ್ಟನ್ನು ಹುರಿದಿಡಿ. 8 ಬ್ಯಾಡಗಿ ಮೆಣಸಿನ …

Kannada Oota ಸಾಂಬಾರು ಮತ್ತು ಪಲ್ಯಗಳು

VEG DUM BIRIYANI & SHORBA GRAVY ವೆಜ್ ದಮ್ ಬಿರಿಯಾನಿ ಮತ್ತು ಶೋರ್ಬಾ ಗ್ರೇವಿ

ನನಗೆ ಬಹಳ ಇಷ್ಚವಾದ ಆಹಾರ! ಹೋಟೆಲ್ ಗಳಲ್ಲಿ ಬಿರಿಯಾನಿ ಜೊತೆ ಶೇರ್ವಾ/ಶೋರ್ಬಾ ಗ್ರೇವಿ ಕೊಡುತ್ತಾರೆ. ಆ ಎರಡೂ ರೆಸಿಪಿ ಒಟ್ಟಿಗೆ! ವೆಜ್ ದಮ್ ಬಿರಿಯಾನಿ ಮಾಡುವ ವಿಧಾನ:-         ನಿಮಗೆ ಇಷ್ಟವಾದ ತರಕಾರಿ ತೊಳೆದು ಹೆಚ್ಚಿಡಿ. 1 ಚಿಕ್ಕ ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣಗೆ, ಉದ್ದಕ್ಕೆ ಹೆಚ್ಚಿ ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದಿಡಿ. 12 ಗೋಡಂಬಿ ಕೆಂಪಗೆ ಹುರಿದಿಡಿ (ಬೇಕಾದರೆ) 2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ …

Kannada Oota ಉಪಹಾರ

GHEE RICE & VEG PEPPER MASALA ಘೀ ರೈಸ್ ಮತ್ತು ವೆಜ್ ಪೆಪ್ಪರ್ ಮಸಾಲ

ಘೀ ರೈಸ್ ಹೆಸರೇ ಹೇಳುವಂತೆ ತುಪ್ಪದಿಂದ ಮಾಡುವ ಒಂದು ರೆಸಿಪಿ! ಮಾಡೋದು ಬಹಳ ಸುಲಭ! ಹೆಚ್ಚು ಮಸಾಲೆ ಇಲ್ಲ! ಘೀ ರೈಸ್ (ಹೋಟೆಲ್ ಶೈಲಿ) 1 ಲೋಟ ಬಾಸುಮತಿ ಅಕ್ಕಿಯನ್ನು ತೆರೆದ ಕುಕ್ಕರಿನಲ್ಲಿ ಬೇಯಿಸಿ ನೀರು ಸೋರಿ ಹಾಕಿಡಿ.      1 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. 2 ಹಸಿ ಮೆಣಸಿನ ಕಾಯಿ ಸೀಳಿಡಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ, 1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ ಹಾಕಿ, ಗೋಡಂಬಿ, ಹೆಚ್ಚಿದ ಈರುಳ್ಳಿ, …

Kannada Oota ಸಾಂಬಾರು ಮತ್ತು ಪಲ್ಯಗಳು

VEGETABLE KURMA & GARLIC BUTTER NAAN ವೆಜಿಟೇಬಲ್ ಕುರ್ಮ ಮತ್ತು ಗಾರ್ಲಿಕ್ ಬಟರ್ ನಾನ್

ವೆಜಿಟೇಬಲ್ ಕುರ್ಮ ಅತ್ಯಂತ ಜನಪ್ರಿಯ Side Dish! ಪೂರಿ, ರವೆ ಇಡ್ಲಿ, ಸೆಟ್ ದೋಸೆ, ಚಪಾತಿ, ರೋಟಿ ಹೀಗೆ ಎಲ್ಲಾ ತಿಂಡಿಗಳ ಜೊತೆ ಚೆನ್ನಾಗಿ ಹೊಂದಿ ಕೊಳ್ಳುತ್ತೆ. ಹೋಟೆಲ್ ಶೈಲಿ ಯಲ್ಲಿ ವಿಜಿಟೇಬಲ್ ಕುರ್ಮ ಮಾಡುವ ರೆಸಿಪಿ ಇಲ್ಲಿದೆ. ವೆಜಿಟೇಬಲ್ ಕುರ್ಮ ಮಾಡುವ ವಿಧಾನ:- ನಿಮಗೆ ಇಷ್ಟವಾಗುವ ತರಕಾರಿಗಳನ್ನು ತೊಳೆದು, ಸಣ್ಣಗೆ ಹೆಚ್ಚಿಕೊಂಡು ಕುಕ್ಕರಿನಲ್ಲಿ 1 ವಿಷಲ್ ಬೇಯಿಸಿಡಿ. ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಕ್ಯಾಪ್ಸಿಕಮ್, ಬಟಾಣಿ, ಗೋಬಿ ಮುಂತಾದ ತರಕಾರಿ ಹಾಕಬಹುದು.     4 ಚಮಚ ಕಾಯಿ …

Kannada Oota ಉಪಹಾರ

TEMPLE PULIYOGARE ದೇವಸ್ಥಾನದ ಪುಳಿಯೋಗರೆ

ಪುಳಿಯೋಗರೆ ಒಂದು ಸಾಂಪ್ರಾದಾಯಿಕ, ರುಚಿಯಾದ, ಜನಪ್ರಿಯ ಆಹಾರ! ದೇವಾಲಯಗಳಲ್ಲಿ ಸಾಮಾನ್ಯವಾಗಿ ಪ್ರಸಾದದ ರೂಪದಲ್ಲಿ ಪುಳಿಯೋಗರೆ ಕೊಡುತ್ತಾರೆ. ಅದರ ರುಚಿ ಆಹಾ! ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ! ತಿಂದವರಿಗಷ್ಟೇ ಗೊತ್ತು! ಆ ಪುಳಿಯೋಗರೆ ಸುಲಭವಾಗಿ ಮಾಡುವ ರೆಸಿಪಿ ಇಲ್ಲಿದೆ!!! ಮಾಡುವ ವಿಧಾನ:- 1 ಪಾವು ಅಕ್ಕಿ ತೊಳೆದು, 2 ಅಳತೆ ನೀರು ಸೇರಿಸಿ ಅನ್ನ ಮಾಡಿಡಿ.     1 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1/2 ಚಮಚ ಧನಿಯ, 1/2 ಚಮಚ ಮೆಂತ್ಯ, …