Showing 134 Result(s)
Kannada Oota ಉಪಹಾರ ಸಾಂಬಾರು ಮತ್ತು ಪಲ್ಯಗಳು

KAJU MASALA & KERALA PARATHA ಕಾಜೂ ಮಸಾಲಾ ಮತ್ತು ಕೇರಳ ಪರಾಟ

ಕಾಜೂ ಮಸಾಲಾ ಎಲ್ಲರೂ ಇಷ್ಟ ಪಟ್ಟು ತಿನ್ನುವ ಗ್ರೇವಿ! ರುಚಿ ಅದ್ಭುತ! ಮಾಡುವ ವಿಧಾನ:- 100 ಗ್ರಾಂ ಗೋಡಂಬಿಯನ್ನು ಸ್ವಲ್ಪ ತುಪ್ಪ ಹಾಕಿ ಹುರಿದಿಡಿ. 1 ಈರುಳ್ಳಿ, 2 ಟೂಮೇಟೋ ಸಣ್ಣಗೆ ಹೆಚ್ಚಿ 1 ಚಮಚ ಬೆಣ್ಣೆ, 1 ಇಂಚು ಚಕ್ಕೆ, 3 ಲವಂಗ, 1 ಇಂಚು ಸಿಪ್ಪೆ ತೆಗೆದ ಶುಂಠಿ, 5 ಎಸಳು ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಡಿ.     ಬಾಣಲೆಯಲ್ಲಿ 2 ಚಮಚ ಬೆಣ್ಣೆ ಹಾಕಿ, 1/4 …

Kannada Oota ಸಾಂಬಾರು ಮತ್ತು ಪಲ್ಯಗಳು

DAL TADKA & ALU GARLIC PARATHA ದಾಲ್ ತಡ್ಕಾ ಮತ್ತು ಆಲೂ ಗಾರ್ಲಿಕ್ ಪರಾಟ

ದಾಲ್ ಉತ್ತರ ಭಾರತೀಯರ ಅಚ್ಚು ಮೆಚ್ಚಿನ ಆಹಾರ! ಊಟದಲ್ಲಿ ಪ್ರತಿ ದಿನ ಬಳಸುತ್ತಾರೆ! ಆರೋಗ್ಯಕರ ಮತ್ತು ರುಚಿಕರವಾದ ದಾಲ್ ತಡ್ಕಾ ಮಾಡುವ ರೆಸಿಪಿ ಇಲ್ಲಿದೆ! ದಾಲ್ ತಡ್ಕಾ ಮಾಡುವ ವಿಧಾನ:- 1/2 ಬಟ್ಟಲು ತೊಗರಿ ಬೇಳೆ, 1/2 ಬಟ್ಟಲು ಕಡಲೇ ಬೇಳೆ ತೊಳೆದು 1 ಚಮಚ ಎಣ್ಣೆ ಹಾಕಿ 6 ವಿಷಲ್ ಕೂಗಿಸಿಡಿ. 2 ಟೊಮೇಟೋ, 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ ಸಣ್ಣಗೆ ಹೆಚ್ಚಿಡಿ. 1 ಇಂಚು ಶುಂಠಿ ಸಿಪ್ಪೆ ತೆಗೆದು …

Kannada ಸಾಂಬಾರು ಮತ್ತು ಪಲ್ಯಗಳು

AVARE KALU SARU ಅವರೇ ಕಾಳು ಸಾರು

ಅವರೇ ಕಾಯಿಯನ್ನು ಇಷ್ಟ ಪಡದವರು ಬಹಳ ಕಡಿಮೆ! ಅವರೆ ಕಾಯಿಯಿಂದ ಏನು ಮಾಡಿದರೂ ಚೆಂದವೇ! ಒಳ್ಳೆಯ ಸೊಗಡಿರುವ ಅವರೆ ಕಾಯಿಯಿಂದ ಸಾರು ಮಾಡಿದರೆ ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ:- ಅವರೆ ಕಾಳು 1 ಪಾವಿನಷ್ಟು ಬೇಯಿಸಿಡಿ. ಬೆಂದ ಅವರೆ ಕಾಳು 2 ಚಮಚ, 2 ಚಮಚ ಕಾಯಿ ತುರಿ, 1 ಚಮಚ ಸಾರಿನ ಪುಡಿ, 2 ಹಸಿ ಟೊಮೇಟೋ ನುಣ್ಣಗೆ ರುಬ್ಬಿಡಿ. ಖಾರಾ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿ. ಬೆಂದ ಅವರೆ ಕಾಳಿಗೆ ರುಬ್ಬಿದ ಮಿಶ್ರಣ, …

Kannada ಸಾಂಬಾರು ಮತ್ತು ಪಲ್ಯಗಳು

BADANE TAVA FRY ಬದನೆ ತವಾ ಫ್ರೈ

ಚಪಾತಿ ಜೊತೆ, ಅನ್ನ ಸಾರಿನ ಜೊತೆ Side dish ಆಗಿ ತುಂಬಾ ಚೆನ್ನಾಗಿರುತ್ತದೆ!ಮಾಡುವ ವಿಧಾನ:- ಗುಂಡು ಬದನೆಯನ್ನು ತೆಳ್ಳಗೆ, ಗುಂಡಗೆ ಹೆಚ್ಚಿ ನೀರಲ್ಲಿ ಹಾಕಿಡಿ. ಒಂದು ತಟ್ಟೆಯಲ್ಲಿ 4 ಚಮಚ ಚಿರೋಟಿ ರವೆ, 1 ಚಮಚ ಖಾರಾ ಪುಡಿ, 1 ಚಮಚ ಅಕ್ಕಿ ಹಿಟ್ಟು, 1/2 ಚಮಚ ಗಸಗಸೆ, ಉಪ್ಪು ಹಾಕಿ ಚೆನ್ನಾಗಿ ಕಲೆಸಿಡಿ. ಸ್ವಲ್ಪ ಹುಳಿ ಬೇಕಾದರೆ 1/2 ಚಮಚ ಆಮ್ ಚೂರ್ ಪುಡಿ ಹಾಕಿ.     ತವಾ ಬಿಸಿಯಾಗಲು ಇಡಿ. ನೀರಿನಿಂದ ತೆಗೆದ …

Kannada ಸಾಂಬಾರು ಮತ್ತು ಪಲ್ಯಗಳು

GORI KAYI PALYA ಗೋರಿ ಕಾಯಿ ಪಲ್ಯ

ಗೋರಿ ಕಾಯಿ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು! ಆರೋಗ್ಯಕ್ಕೆ ಎಲ್ಲರಿಗೂ ಒಳ್ಳೆಯದಾದರೂ ಅದರ ಸ್ವಲ್ಪ ಒಗರು ರುಚಿಯಿಂದ ಬಹಳ ಜನ ಅದನ್ನು ತಿನ್ನುವುದಿಲ್ಲ! ಹೀಗೆ ಮಾಡಿ ನೋಡಿ ಖಂಡಿತಾ ಇಷ್ಟ ಪಟ್ಟು ತಿನ್ನುತ್ತಾರೆ!ಮಾಡುವ ವಿಧಾನ :- 100 ಗ್ರಾಂ ನಷ್ಟು ಗೋರಿ ಕಾಯಿ ತೊಳೆದು ಸಣ್ಣಗೆ ಹೆಚ್ಚಿ ಬೇಯಿಸಿ ಸೋರಿ ಹಾಕಿಡಿ. 2 ಚಮಚ ಕಡಲೇ ಬೇಳೆ 2 ಗಂಟೆ ನೆನೆಸಿಡಿ ನೀರು ಸೋರಿ ಹಾಕಿಡಿ. 4 ಚಮಚ ಕಾಯಿ ತುರಿದಿಡಿ.        ನೆಂದ ಕಡಲೇ …

Kannada ಸಾಂಬಾರು ಮತ್ತು ಪಲ್ಯಗಳು

ALU MATTAR ಆಲೂ ಮಟ್ಟರ್

ಮಕ್ಕಳ Favourite ಗ್ರೇವಿ! ಮಾಡುವುದು ಬಹಳ ಸುಲಭ! ಮಾಡುವ ವಿಧಾನ:- 1 ಹೆಚ್ಚಿದ ಆಲೂಗೆಡ್ಡೆ ಮತ್ತು 1 ಲೊಟ ಹಸಿ ಬಟಾಣಿಯನ್ನು ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿಡಿ. 2 ಟೊಮ್ಯಾಟೋ ಬಿಸಿ ನೀರಲ್ಲಿ ಹಾಕಿ ಸಿಪ್ಪೆ ತೆಗೆದು 10 ಗೋಡಂಬಿ ಹಾಕಿ ನುಣ್ಣಗೆ ರುಬ್ಬಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.     ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, ಸ್ವಲ್ಪ ಅರಿಶಿನ ಹಾಕಿ ಸ್ವಲ್ಪ ಹುರಿದು 1 ಚಮಚ Ginger garlic …

Kannada Oota ಸಾಂಬಾರು ಮತ್ತು ಪಲ್ಯಗಳು

BIRANJI RICE & CAPSICUM YENNEGAYI ಬಿರಂಜಿ ರೈಸ್ ಮತ್ತು ಕ್ಯಾಪ್ಸಿಕಮ್ ಎಣ್ಣೆ ಗಾಯಿ

ಬಿರಂಜಿ ರೈಸ್, ವಿಶೇಷ ರುಚಿಯ ಸುಲಭವಾಗಿ ಮಾಡುವ ರೆಸಿಪಿ.ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆನೆಸಿ, ನೀರು ಸೋರಿ ಹಾಕಿಡಿ. 1 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1/2 ಹೋಳು ತೆಂಗಿನ ಕಾಯಿ ತುರಿದು 2 ಈರುಳ್ಳಿ, 8 ಎಸಳು ಬೆಳ್ಳುಳ್ಳಿ ಹಾಕಿ ರುಬ್ಬಿಡಿ. 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ ಕುಟ್ಟಿ ಪುಡಿ ಮಾಡಿಡಿ. 4 ಹಸಿ ಮೆಣಸಿನಕಾಯಿ …

Kannada ಸಾಂಬಾರು ಮತ್ತು ಪಲ್ಯಗಳು

MASALA BEANS PALYA ಮಸಾಲ ಬೀನ್ಸ್ ಪಲ್ಯ

ಬೀನ್ಸ್ ಪಲ್ಯ ಸಾಮಾನ್ಯವಾಗಿ ಎಲ್ಲರೂ ಕಾಯಿ ತುರಿ, ಇಂಗಿನ ಒಗ್ಗರಣೆ ಹಾಕಿ ಮಾಡುತ್ತಾರೆ. North Indian Style ನಲ್ಲಿ ಬೀನ್ಸ್ ಪಲ್ಯ ಮಾಡುವ ರೆಸಿಪಿ ಇಲ್ಲಿದೆ. ಮಾಡುವ ವಿಧಾನ:- 1/4 ಕೇಜಿ ಎಳೆಯ ಬೀನ್ಸ್ ತೊಳೆದು, ನಾರು ಬಿಡಿಸಿ, 2 ಇಂಚು ಉದ್ದಕ್ಕೆ ಹೆಚ್ಚಿಟ್ಟು ಕೊಳ್ಳಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ ನೀರು ಹಾಕಿ ಹೆಚ್ಚಿದ ಬೀನ್ಸ್, ಚಿಟಿಕೆ ಸಕ್ಕರೆ ಹಾಕಿ ಬೀನ್ಸ್ ಹುರುಳಿ ಕಾಯಿ ಪೂರ್ಣವಾಗಿ ಬೇಯಿಸಿ ನೀರು ಸೋರಿ ಹಾಕಿ. (ಈ ನೀರನ್ನು …