MANGO DAL ಮ್ಯಾಂಗೋ ದಾಲ್
ಬೇಸಿಗೆಯಲ್ಲಿ ಎಲ್ಲಡೆ ಮಾವಿನದೇ ದರ್ಬಾರು! ಮಾವಿನ ಕಾಯಿಯಾಗಲಿ, ಹಣ್ಣಾಗಲಿ ಅದರ ಸುವಾಸನೆಗೆ ಮನಸೋಲದವರಿಲ್ಲ! ಬಹಳ ಜನರಿಗೆ ಮಾವಿನ ಕಾಯಿಯ ಹುಳಿ ಇಷ್ಟ ಆಗುತ್ತೆ. ಅಂತಹವರಿಗಾಗಿ ಈ ರೆಸಿಪಿ. ತೋತಾಪುರಿ ಉಪಯೋಗಿಸಿದರೆ ತುಂಬಾ ಹುಳಿ ಇರುವುದಿಲ್ಲ.ಮ್ಯಾಂಗೋ ದಾಲ್ ಮಾಡುವ ವಿಧಾನ:- ದೋರೆಯಾದ ತೋತಾಪುರಿ ಮಾವಿನ ಕಾಯಿಯನ್ನು ಆಯ್ಕೆ ಮಾಡಿಕೊಳ್ಳಿ.( ಕಾಯಿಯೂ ಅಲ್ಲದ, ಹಣ್ಣೂ ಅಲ್ಲದ್ದನ್ನು ದೋರೆಗಾಯಿ ಎನ್ನುತ್ತಾರೆ) ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಕೊಳ್ಳಿ, ಕುಕ್ಕರಿನಲ್ಲಿ 1 ಬಟ್ಟಲು ತೊಗರಿ ಬೇಳೆ ಹಾಕಿ 1 ಅಥವಾ 2 ವಿಷಲ್ …









