HIDUKIDA BELE SAMBAR ( Saaru) ಹಿದುಕಿದ ಬೇಳೆ ಸಾಂಬಾರ್ (ಸಾರು)
ಹಿದುಕಿದ ಬೇಳೆ ಸಾಂಬಾರ್ ದಕ್ಷಿಣ ಕರ್ನಾಟಕದ ಬಹು ಜನಪ್ರಿಯ ಸಾಂಬಾರ್! ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಅವರೇ ಕಾಯಿ ಸೀಸನ್ ನಲ್ಲಿ ವಾರಕ್ಕೆರಡು ಬಾರಿಯಾದರೂ ಮಾಡೇ ಮಾಡುತ್ತಾರೆ! ಅಂತಹ ರುಚಿಯಾದ ಹಿದುಕಿದ ಬೇಳೆ ಸಾಂಬಾರ್ ಸುಲಭವಾಗಿ, ರುಚಿಯಾಗಿ ಮಾಡುವ ರೆಸಿಪಿ ನಿಮಗಾಗಿ! ಮಾಡುವ ವಿಧಾನ:- 1/2 ಕೇಜಿ (2 ಪಾವು) ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿಡಿ. 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 2 ಟೇಬಲ್ ಚಮಚ ಗಸಗಸೆ, 2 ಟೇಬಲ್ ಚಮಚ ಧನಿಯಾ ಎಣ್ಣೆ …









