Tindi Tinisu

KABUL PALAK CUTLET ಕಾಬುಲ್ ಪಾಲಾಕ್ ಕಟ್ಲೆಟ್

KABUL PALAK CUTLET ಕಾಬುಲ್ ಪಾಲಾಕ್ ಕಟ್ಲೆಟ್

ಕಾಬುಲ್ ಕಡಲೆ ಮತ್ತು ಪಾಲಾಕ್ ಸೊಪ್ಪಿನ ಕಾಂಬಿನೇಷನ್ನಿನ ಈ ಕಟ್ಲೆಟ್ ರುಚಿಕರ! ಆರೋಗ್ಯಕರ! ಖಂಡಿತ ಮನೆಯವರೆಲ್ಲ ಇಷ್ಟ ಪಟ್ಟು ತಿನ್ನುತ್ತಾರೆ.

ಮಾಡುವ ವಿಧಾನ:-

ಒಂದು ಕಪ್ ಕಾಬುಲ್ ಕಡಲೆ ರಾತ್ರಿ ಪೂರ ನೆನೆಸಿ ಬೆಳಿಗ್ಗೆ ಬೇಯಿಸಿ ನೀರು ಸೋರಿ ಹಾಕಿ ರುಬ್ಬಿಡಿ.

ಒಂದು ಕಂತೆ ಪಾಲಾಕ್ ಸೊಪ್ಪು ಬೇಯಿಸಿ ನೀರು ಸಂಪೂರ್ಣವಾಗಿ ಹಿಂಡಿ ರುಬ್ಬಿಡಿ.

ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ನಾಲ್ಕು ಹಸಿರು ಮೆಣಸಿನ ಕಾಯಿ ಪೇಸ್ಟ್ ಮಾಡಿಡಿ.ರುಬ್ಬಿದ ಕಾಬುಲ್ ಕಡಲೆ, ಪಾಲಾಕ್ ಮಿಶ್ರಣ, ನಾಲ್ಕು ದೊಡ್ಡ ಚಮಚ ಬ್ರೆಡ್ ಕ್ರಂಬ್ಸ್, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನ ಕಾಯಿ ಪೇಸ್ಟ್, ಅರ್ಧ ಚಮಚ ಖಾರದ ಪುಡಿ, ಒಂದು ಚಮಚ ಚಾಟ್ ಮಸಾಲ ಪುಡಿ, ಅರ್ಧ ಚಮಚ ಗರಂ ಮಸಾಲ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿ ಚಿಕ್ಕ ಕಟ್ಲೆಟ್ ಮಾಡಿ , ಬ್ರೆಡ್ ಕ್ರಂಬ್ಸ್ ಮೇಲೆ ಹೊರಳಿಸಿ ಕಾವಲಿಯ ಮೇಲೆ ಸಾಕಷ್ಟು ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿ ನಿಮಗೆ ಇಷ್ಟವಾದ ಸಾಸ್ ಜೊತೆಗೆ ಸವಿಯಿರಿ.

ಧನ್ಯವಾದಗಳು 🙏🙏🙏

Leave a Reply

Your email address will not be published.