Gojju

NIMBE HANNINA GOJJU ನಿಂಬೆ ಹಣ್ಣಿನ ಗೊಜ್ಜು

NIMBE HANNINA GOJJU ನಿಂಬೆ ಹಣ್ಣಿನ ಗೊಜ್ಜು

ಈ ಚಳಿಗಾಲದಲ್ಲಿ ತುಂಬಾ ಚೆನ್ನಾಗಿರುವ ನಿಂಬೆಹಣ್ಣು ಸಿಗುತ್ತದೆ. ಬೆಲೆ ಕೂಡ ಕಡಿಮೆ. ಹಾಗಾದರೆ ನಿಂಬೆಹಣ್ಣಿನ ಬಾಯಲ್ಲಿ ನೀರೂರಿಸುವ ರುಚಿಯಾದ ಗೊಜ್ಜು ಮಾಡೋಣವೇ?

ಮಾಡುವ ವಿಧಾನ:-

ಹದಿನೈದರಿಂದ ಇಪ್ಪತ್ತು ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಪುಡಿ ಮಾಡಿಡಿ. ಖಾರಾ ಹೆಚ್ಚು ಬೇಕಾದವರು ಬ್ಯಾಡಗಿ ಮತ್ತು ಕೆಂಪು ಮೆಣಸಿನಕಾಯಿ ಎರಡೂ ಸ್ವಲ್ಪ ಸ್ವಲ ಹಾಕಬಹುದು.

ಕಾಲು ಬಟ್ಟಲು ಒಣ ಕೊಬ್ಬರಿ ತುರಿದಿಡಿ.

ಒಂದು ಟೀ ಚಮಚ ಮೆಂತ್ಯ ಸ್ವಲ್ಪ ಹುರಿದು ಮೆಣಸಿನಕಾಯಿ ಜೊತೆಗೆ ಪುಡಿ ಮಾಡಿಡಿ.

ನಂತರ ಕೊಬ್ಬರಿ ತುರಿ, ಮೆಣಸಿನಕಾಯಿ ಮೆಂತ್ಯದ ಪುಡಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಡಿ.

ಐದು ಅಥವಾ ಆರು ನಿಂಬೆಹಣ್ಣು ರಸ ಹಿಂಡಿ ಬೀಜ ಸೋರಿಸಿಡಿ.

ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ( ಎಣ್ಣೆ ಸ್ವಲ್ಪ ಹೆಚ್ಚು ಬೇಕು ) ಸಾಸಿವೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿ ರುಬ್ಬಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು, ಗೋಲಿ ಗಾತ್ರದ ಬೆಲ್ಲ ಹಾಕಿ ಚೆನ್ನಾಗಿ ಕಲೆಸಿ. ಎಣ್ಣೆ ಅಂಶ ಮೇಲೆ ಬರುವವರೆಗೆ ಕುದಿಸಿ ಕೊನೆಯಲ್ಲಿ ನಿಂಬೆ ರಸ ಸೇರಿಸಿ ಕಲೆಸಿ ಒಂದು ಕುದಿ ಬಂದ ತಕ್ಷಣ ಒಲೆಯಿಂದ ಇಳಿಸಿ.

ಈ ಗೊಜ್ಜು ಬಿಸಿ ಅನ್ನಕ್ಕೆ ತುಪ್ಪ ಸೇರಿಸಿಕೊಂಡು ತಿನ್ನಬಹುದು. ದೋಸೆ, ರೊಟ್ಟಿ, ಚಪಾತಿ ಜೊತೆಗೂ ತುಂಬಾ ಚೆನ್ನಾಗಿರುತ್ತದೆ.

ಇದನ್ನು ಫ್ರಿಜ್ಜಿನಲ್ಲಿ ಹದಿನೈದು ದಿನ, ಹೊರಗಡೆ ಮೂರ್ನಾಲ್ಕು ದಿನ ಬೇಕಾದರೂ ಇಟ್ಟು ಉಪಯೋಗಿಸಬಹುದು.

ಈ ರೆಸಿಪಿ ಹೇಳಿ ಕೊಟ್ಟ ಆತ್ಮೀಯ ಗೆಳತಿ ಉಮಾ ವಸಂತ್ ಅವರಿಗೆ ಧನ್ಯವಾದಗಳು.

ಧನ್ಯವಾದಗಳು 🙏🙏🙏

Leave a Reply

Your email address will not be published.