ಖಾರ ತಿನಿಸುಗಳು

VEGETABLES LOLLIPOP ವಿಜಿಟೇಬಲ್ ಲಾಲಿಪಾಪ್

VEGETABLES LOLLIPOP ವಿಜಿಟೇಬಲ್ ಲಾಲಿಪಾಪ್

ಮಿಶ್ರ ತರಕಾರಿಗಳನ್ನು ಹಾಕಿ ಮಾಡುವ ರುಚಿಯಾದ ರೆಸಿಪಿ ಇಲ್ಲಿದೆ. ಶಾಲೆಯಿಂದ ಮನೆಗೆ ಬಂದ ಮೇಲೆ ಮಕ್ಕಳಿಗೆ ಮಾಡಿಕೊಟ್ಟರೆ ಖುಷಿಯಾಗಿ
ತಿನ್ನುತ್ತಾರೆ.

ಮಾಡುವ ವಿಧಾನ :

ಎರಡು ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ.

ಒಂದು ಹಿಡಿ ಸ್ವೀಟ್ ಕಾರ್ನ್ ಬೇಯಿಸಿ ಪುಡಿ ಮಾಡಿಡಿ. ಅದರ ಬದಲು ಬಟಾಣಿ ಹಾಕಬಹುದು. ಅಥವಾ ಎರಡೂ ಹಾಕಬಹುದು.

ಎರಡು ಕ್ಯಾರೆಟ್, ಸ್ವಲ್ಪ ಕ್ಯಾಬೇಜ್ ತುರಿದಿಡಿ.

ಒಂದು ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು, ನಾಲ್ಕು ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಚಾಟ್ ಮಸಾಲ, ಅರ್ಧ ಚಮಚ ಖಾರದ ಪುಡಿ, ನಾಲ್ಕು ಚಮಚ ಬ್ರೆಡ್ ಕ್ರಂಬ್ಸ್ ಹಾಕಿ ಚೆನ್ನಾಗಿ ಕಲೆಸಿಡಿ.

ನಾಲ್ಕು ಚಮಚ ಕಾರ್ನ್ ಫ್ಲೋರ್, ಎರಡು ಚಮಚ ಮೈದಾ, ಸ್ವಲ್ಪ ಉಪ್ಪು, ಖಾರದ ಪುಡಿ ಸೇರಿಸಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಹಿಟ್ಟು ಕಲೆಸಿಡಿ.

ಐಸ್ ಕ್ಯಾಂಡಿ ಕಡ್ಡಿಗಳ ತುದಿಗೆ ತರಕಾರಿ ಮಿಶ್ರಣ ಚೆನ್ನಾಗಿ ಅಂಟಿಸಿ ಕಾರ್ನ್ ಫ್ಲೋರ್ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗುವಂತೆ ಕರಿದು ಹೆಚ್ಚಿನ ಎಣ್ಣೆ ತೆಗೆಯಲು ಕಿಚನ್ ಪೇಪರ್ ಮೇಲೆ ಹಾಕಿ ಚಟ್ನಿ ಅಥವಾ ಸಾಸ್ ಜೊತೆಗೆ ಸವಿಯಿರಿ.

ಧನ್ಯವಾದಗಳು 🙏🙏🙏

Leave a Reply

Your email address will not be published.