Kannada Tindi Tinisu ಖಾರ ತಿನಿಸುಗಳು

HESARU UDDINA VADE ಹೆಸರು ಉದ್ದಿನ ವಡೆ

ಉದ್ದಿನ ವಡೆ ಎಲ್ಲರ ಮೆಚ್ಚಿನ ತಿಂಡಿ! ರುಚಿಕರ ಕೂಡ! ಈ ರುಚಿಯಾದ ಉದ್ದಿನ ವಡೆಯನ್ನು ಇನ್ನಷ್ಟು ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ!

ನನ್ನ ಚಿಕ್ಕ ಅತ್ತೆಯಿಂದ ಕಲಿತದ್ದು!

ಮಾಡುವ ವಿಧಾನ:-

1 ಲೋಟ ಉದ್ದಿನ ಬೇಳೆ, 1/2 ಲೋಟ ಹೆಸರು ಬೇಳೆ ಬೇರೆ ಬೇರೆಯಾಗಿ ತೊಳೆದು 2 ಗಂಟೆ ನೆನೆಸಿಡಿ.

ಹೆಸರು ಬೇಳೆಯನ್ನು ನೀರು ಸೋರಿ ಹಾಕಿ ರುಬ್ಬದೆ ಹಾಗೇ ಇಡಿ.

  

ಉದ್ದಿನ ಬೇಳೆಯನ್ನು ನೀರಿನಿಂದ ತೆಗೆದು ಆದಷ್ಟೂ ನುಣ್ಣಗೆ ರುಬ್ಬಿಡಿ.

 

1 ಚಮಚ ಮೆಣಸು, 1 ಚಮಚ ಜೀರಿಗೆ ಹುರಿದು ತರಿ ತರಿಯಾಗಿ ಕುಟ್ಟಿಡಿ.

1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ. ( Optional )

  

ಸ್ವಲ್ಪ ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ.

ರುಬ್ಬಿದ ಉದ್ದಿನ ಬೇಳೆ ಮಿಶ್ರಣಕ್ಕೆ, ನೀರು ಸೋರಿ ಹಾಕಿದ ಹೆಸರು ಬೇಳೆ ಇಡಿಯಾಗಿ, 2 ಚಮಚ ಅಕ್ಕಿ ಹಿಟ್ಟು, ಮೆಣಸು ಜೀರಿಗೆ ಪುಡಿ, ಉಪ್ಪು, ಹೆಚ್ಚಿದ ಕೊತ್ತಂಬರಿ, ಕರಿಬೇವು, ತುರಿದ ಶುಂಠಿ, ಚಿಟಿಕೆ ಇಂಗು ಹಾಕಿ ಚೆನ್ನಾಗಿ ಕಲೆಸಿ.

ಕಾದ ಎಣ್ಣೆಯಲ್ಲಿ ವಡೆಗಳನ್ನು ತಟ್ಟಿ ಕೆಂಪಗೆ ಕರಿದು, ಚಟ್ನಿಯೊಂದಿಗೆ ಸವಿಯಿರಿ.

  

ಇದೇ ಹಿಟ್ಟಿನಿಂದ ಪುಟ್ಟ ಪುಟ್ಟ ಪಕೋಡಗಳಂತೆ ಬೇಕಾದರೂ ಮಾಡಬಹುದು!

ಧನ್ಯವಾದಗಳು

Leave a Reply

Your email address will not be published.