Tindi Tinisu ಸಿಹಿ ತಿನಿಸುಗಳು

RAVA KAJJAYA ರವಾ ಕಜ್ಜಾಯ

ಕಜ್ಜಾಯ ಸಾಂಪ್ರಾದಾಯಕ ಸಿಹಿ. ಮಾಡುವುದು ಸ್ವಲ್ಪ ಕಷ್ಟವಾದರೂ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಸಾಧಾರಣವಾಗಿ ಎಲ್ಲರೂ ಕಜ್ಜಾಯ ಮಾಡುವುದು ನೆನೆಸಿದ ಅಕ್ಕಿ ಹಿಟ್ಟು ಮಾಡಿ. ನಮ್ಮ ಅತ್ತೆ ಮಾಡುತ್ತಿದ್ದ ಸುಲಭವಾದ ವಿಧಾನ ಇಲ್ಲಿದೆ ನೋಡಿ! ಈ ಕಜ್ಜಾಯ ಮಾಡುವುದು ಚಿರೋಟಿ ರವೆಯಿಂದ. ಇದನ್ನು ಇನ್ಸ್ಟೆಂಟ್ ಕಜ್ಜಾಯ ಅಂತ ಬೇಕಾದರೂ ಕರೆಯಬಹುದು. ಮಾಡುವುದು ಸುಲಭ! ಗರಿ ಗರಿಯಾಗಿರುತ್ತದೆ.

ಮಾಡುವ ವಿಧಾನ:-

ಒಂದು ಬೆಲ್ಲ ಪುಡಿ ಮಾಡಿಡಿ.

ಅರ್ಧ ಲೋಟ ಕಾಯಿ ತುರಿದಿಡಿ.

ಎರಡು ಏಲಕ್ಕಿ ಪುಡಿ ಮಾಡಿಡಿ.

 

ಬಾಣಲೆಯಲ್ಲಿ ಒಂದು ಲೋಟ ನೀರು ಹಾಕಿ, ಪುಡಿ ಬೆಲ್ಲ ಹಾಕಿ ಬಿಸಿಯಾಗಲು ಇಡಿ. ಬೆಲ್ಲ ಸಂಪೂರ್ಣವಾಗಿ ಕರಗಿದ ಮೇಲೆ ಒಂದು ಲೋಟ ಚಿರೋಟಿ ರವೆ ಹಾಕಿ ಗಂಟಿಲ್ಲದ ಹಾಗೆ ಕಲೆಸಿ, ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಮೂರ್ನಾಲ್ಕು ನಿಮಿಷ ಬೇಯಿಸಿ. ಪಾಕ ಬರುವ ಅವಶ್ಯಕತೆ ಇಲ್ಲ.

ಒಲೆಯಿಂದ ಇಳಿಸಿ ಒಂದು ಚಮಚ ತುಪ್ಪ, ಕಾಯಿ ತುರಿ, ಒಂದು ಚಮಚ ಅಕ್ಕಿ ಹಿಟ್ಟು, ಏಲಕ್ಕಿ ಪುಡಿ, ಒಂದು ಚಮಚ ಬಿಳಿ ಎಳ್ಳು ಹಾಕಿ ಚೆನ್ನಾಗಿ ಕಲೆಸಿ.

ಒಂದು ಎಲೆ ಅಥವಾ ಪ್ಲಾಸ್ಟಿಕ್ ಎಲೆಗೆ ಎಣ್ಣೆ ಸವರಿ ತೆಳ್ಳಗೆ ತಟ್ಟಿ ಕಾದ ಎಣ್ಣೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ ಆಗುವವರೆಗೆ ಕರಿದು, ತೆಗೆದರೆ ರುಚಿಯಾದ, ಗರಿ ಗರಿಯಾದ ರವಾ ಕಜ್ಜಾಯ ಸವಿಯಲು ಸಿದ್ಧ.

 

ಈ ಕಜ್ಜಾಯ ಅಕ್ಕಿ ಕಜ್ಜಾಯದ ಹಾಗೆ ಎಣ್ಣೆ ಹೀರುವುದಿಲ್ಲ.

ಧನ್ಯವಾದಗಳು

Leave a Reply

Your email address will not be published.