Oota ಉಪಹಾರ

MAVINA KAYI THOKKU ಮಾವಿನ ಕಾಯಿ ತೊಕ್ಕು

ಮಾವಿನ ಕಾಯಿಯ ಕಾಲದಲ್ಲಿ ಮಾಡಬಹುದಾದ ಈ ತೊಕ್ಕು ತಿಂಗಳಾದರೂ Fridge ನಲ್ಲಿಟ್ಟರೆ ಕೆಡುವುದಿಲ್ಲ! ತೊಕ್ಕು ಮಾಡಿಟ್ಟರೆ, ಅನ್ನ ಮಾಡಿ ಬೇಕಾದಾಗ ಕಲೆಸಿಕೊಳ್ಳಬಹುದು!

ಮಾಡುವ ವಿಧಾನ:-

1 ತೋತಾಪುರಿ ಮಾವಿನ ಕಾಯಿ ತುರಿದಿಡಿ.

1 ಟೀ ಚಮಚ ಮೆಂತ್ಯ, 1 ಟೀ ಚಮಚ ಸಾಸಿವೆ ಹುರಿದು ಪುಡಿ ಮಾಡಿಡಿ.

15 ರಿಂದ 20 ಒಣಗಿದ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ ( ಖಾರಾ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ )

ಬಿಸಿ 6 ಟೇಬಲ್ ಚಮಚ ಎಣ್ಣೆ ಹಾಕಿ, ( ಎಣ್ಣೆ ಸ್ವಲ್ಪ ಹೆಚ್ಚು ಬೇಕಾಗುತ್ತದೆ ) ಕಾದ ಮೇಲೆ ಒಗ್ಗರಣೆಗೆ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಇಂಗು, ಅರಿಷಿಣ ಹಾಕಿ ಸ್ವಲ್ಪ ಹುರಿದು ನಂತರ ಮಾವಿನ ಕಾಯಿ ತುರಿ ಹಾಕಿ ಬಾಡಿಸಿ.

ನಂತರ ಉಪ್ಪು, ಖಾರದ ಪುಡಿ, ಸಾಸಿವೆ ಮೆಂತ್ಯ ಪುಡಿ, ಚೂರು ಬೆಲ್ಲ ಹಾಕಿ ಚೆನ್ನಾಗಿ ಕಲೆಸಿ ಕಡಿಮೆ ಉರಿಯಲ್ಲಿ ಆಗಾಗ ಕಲೆಸುತ್ತಾ ಮೂರ್ನಾಲ್ಕು ನಿಮಿಷ ಬೇಯಿಸಿ ಸಂಪೂರ್ಣವಾಗಿ ತಣ್ಣಗಾದ ಮೇಲೆ Fridge ನಲ್ಲಿಡಿ.

ಚಿತ್ರಾನ್ನ ಬೇಕಾದಾಗ ಅನ್ನ ಮಾಡಿ ನಿಮ್ಮ ರುಚಿಗೆ ತಕ್ಕಷ್ಟು ಗೊಜ್ಜು, ಕರಿದ ಕಡಲೇ ಬೀಜ ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಮಾವಿನ ಕಾಯಿ ಚಿತ್ರಾನ್ನ ರೆಡಿ!

ಧನ್ಯವಾದಗಳು

Leave a Reply

Your email address will not be published.