Tindi Tinisu ಖಾರ ತಿನಿಸುಗಳು

ONION RINGS ಆನಿಯನ್ ರಿಂಗ್ಸ್

ಮಳೆಗಾಲಕ್ಕೆ ಹೇಳಿ ಮಾಡಿಸಿದ ತಿಂಡಿ! ಮಳೆ ಬರುವಾಗ ಬಿಸಿ ಬಿಸಿ ಕಾಫಿ ಜೊತೆಗೆ ತಟ್ಟೆ ಪೂರ ಕೊಟ್ಟರೂ ನಿಮಿಷದಲ್ಲಿ ಖಾಲಿ ಆಗುತ್ತದೆ!

ಮಾಡುವ ವಿಧಾನ:-

ದೊಡ್ಡ ದೊಡ್ಡ ಈರುಳ್ಳಿಯನ್ನು ಸಿಪ್ಪೆ ತೆಗೆದು ಅರ್ಧ ಇಂಚು ಅಗಲಕ್ಕೆ ಕತ್ತರಿಸಿ, ರಿಂಗ್ ಗಳನ್ನು ಬೇರೆ ಬೇರೆ ಮಾಡಿಡಿ.

ಒಂದು ಬಟ್ಟಲಿನಲ್ಲಿ ಅರ್ಧ ಬಟ್ಟಲು ಕಡಲೇ ಹಿಟ್ಟು, ಅರ್ಧ ಬಟ್ಟಲು ಅಕ್ಕಿ ಹಿಟ್ಟು, ಉಪ್ಪು, 1 ಚಮಚ ಖಾರದ ಪುಡಿ, ಸ್ವಲ್ಪ ಜೀರಿಗೆ, ಇಂಗು ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಬಜ್ಜಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಈರುಳ್ಳಿ ರಿಂಗ್ ಗಳನ್ನು ಒಂದೊಂದಾಗಿ ಬಜ್ಜಿ ಹಿಟ್ಟಿನಲ್ಲಿ ಅದ್ದಿ, ತಟ್ಟೆಯಲ್ಲಿರುವ ಬ್ರೆಡ್ ಕ್ರಂಬ್ಸ್/ ಚಿರೋಟಿ ರವೆಯಲ್ಲಿ ಅದ್ದಿ, ಇನ್ನೊಂದು ಬಾರಿ ಬಜ್ಜಿ ಹಿಟ್ಟಿನಲ್ಲಿ ಅದ್ದಿ ಮತ್ತೊಂದು ಬಾರಿ ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಗರಿ ಗರಿಯಾಗುವಂತೆ ಕಡಿಮೆ ಉರಿಯಲ್ಲಿ ಕರಿದು ತೆಗೆದರೆ ಬಾಯಲ್ಲಿ ನೀರೂರಿಸುವ ಆನಿಯನ್ ರಿಂಗ್ಸ್ ಸವಿಯಲು ಸಿದ್ಧ!

ಧನ್ಯವಾದಗಳು

Leave a Reply

Your email address will not be published.