ಹೆಸರು ಕೇಳಿದೊಡನೆ ಬಾಯಲ್ಲಿ ನೀರು ಬರುವಷ್ಟು ಪ್ರಸಿದ್ಧಿ ಪಡೆದಿದೆ! ಇನ್ನೇನು ಮಳೆಗಾಲ ಶುರುವಾಗಿದೆ! ಮಳೆ ಬರುವಾಗ ಬಿಸಿ ಬಿಸಿ ಬೋಂಡಾ, ಚಟ್ನಿಯೊಂದಿಗೆ ಕಾಫಿ ಕುಡಿದರೆ ಎಷ್ಟು ಚೆನ್ನ ಅಲ್ಲವೇ? ಹಾಗಾದರೆ ಈಗ ಬೋಂಡಾ ರೆಸಿಪಿ ನೋಡೋಣವೇ?
ಮಾಡುವ ವಿಧಾನ :-
1 ಲೋಟ ಉದ್ದಿನ ಬೇಳೆ ತೊಳೆದು 2 ಗಂಟೆ ನೆನೆಸಿಡಿ. ಜೊತೆಗೆ 1 ಚಮಚ ಕಡಲೇ ಬೇಳೆ ಅಥವಾ ತೊಗರಿ ಬೇಳೆ ತೊಳೆದು ಹಾಕಿ.

ನಂತರ ಆದಷ್ಟೂ ಕಡಿಮೆ ನೀರು ಬಳಸಿ ನುಣ್ಣಗೆ ರುಬ್ಬಿ.
ರುಬ್ಬಿದ ಮಿಶ್ರಣಕ್ಕೆ ಮೆಣಸು ಹಾಗೂ ಜೀರಿಗೆ ಹುರಿದು ತರಿ ತರಿಯಾಗಿ ಪುಡಿ ಮಾಡಿದ್ದು 1 ಚಮಚ, ಚಿಟಿಕೆ ಇಂಗು, 1 ಇಂಚು ತುರಿದ ಶುಂಠಿ, 2 ಚಮಚ ಸಣ್ಣಗೆ ಹೆಚ್ಚಿದ ತೆಂಗಿನ ಕಾಯಿ ಚೂರು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, ಉಪ್ಪು, 1 ಚಮಚ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲೆಸಿ.

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಕಾದ ಎಣ್ಣೆಯಲ್ಲಿ ಕೈ ಸ್ವಲ್ಪ ಒದ್ದೆ ಮಾಡಿಕೊಂಡು, ಗುಂಡಗೆ ಉದ್ದಿನ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗುವಂತೆ ಕರಿದು ತೆಗೆದಿಡಿ.

ಕರಿದ ಬಿಸಿ ಬಿಸಿ ಬೋಂಡಾವನ್ನು ಚಟ್ನಿ ಅಥವಾ ರಸಂನಲ್ಲಿ ಹಾಕಿ ಸವಿಯಿರಿ!
ಧನ್ಯವಾದಗಳು ![]()
![]()
![]()