ಸಾಂಬಾರು ಮತ್ತು ಪಲ್ಯಗಳು

HULI SOPPINA CHUTNEY ಹುಳಿ ಸೊಪ್ಪಿನ ಚಟ್ನಿ

ಹೆಸರೇ ಹೇಳುವ ಹಾಗೇ, ಹೂವಿನ ಕುಂಡಗಳಲ್ಲಿ, ತೆರೆದ ಜಾಗಗಳಲ್ಲಿ ತಾನಾಗೇ ಬೆಳೆಯುವ ಈ ಪುಟ್ಟ ಪುಟ್ಟ ಸೊಪ್ಪಿನ ಗಿಡ ರುಚಿಯಲ್ಲಿ ಬಹಳ ಹುಳಿ! ಇದರಿಂದ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ!

ಇದು ಅಜ್ಜಿಯ ಕೈರುಚಿ!

ಮಾಡುವ ವಿಧಾನ:-

ಸೊಪ್ಪನ್ನು ಬಿಡಿಸಿ ಚೆನ್ನಾಗಿ ತೊಳೆದು ಖಾರಕ್ಕೆ ಬೇಕಾಗುವಷ್ಟು ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ.

ಸ್ವಲ್ಪ ತಣ್ಣಗಾದ ನಂತರ ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಕಾಯಿ ತುರಿ ಹಾಕಿ ರುಬ್ಬಿಡಿ.

ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿ ಚಟ್ನಿಗೆ ಸೇರಿಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಹುಳಿ ಸೊಪ್ಪಿನ ಚಟ್ನಿ ಸಿದ್ಧ!

ಈ ಚಟ್ನಿ ಅನ್ನ, ರಾಗಿ ಮುದ್ದೆಯೊಂದಿಗೆ ಬಹಳ ಚೆನ್ನಾಗಿರುತ್ತದೆ!

ಧನ್ಯವಾದಗಳು.

Leave a Reply

Your email address will not be published.