Kannada Oota ಉಪಹಾರ ಹಬ್ಬದ ಅಡುಗೆಗಳು

SASIVE KAYANNA ಸಾಸಿವೆ ಕಾಯನ್ನ

ಸಾಂಪ್ರಾದಾಯಕ ಅಡುಗೆ! ಅಜ್ಜಿಯ ಕಾಲದಲ್ಲಿ ಮಾಡುತ್ತಿದ್ದ ವಿಧಾನ!

ಮಾಡುವ ವಿಧಾನ:-

1 ಲೋಟ ಅಕ್ಕಿ ತೊಳೆದು ಚಿಟಿಕೆ ಅರಿಷಿಣ, ಉಪ್ಪು, 2 ಲೋಟ ನೀರು ಹಾಕಿ ಅನ್ನ ಮಾಡಿ ತಟ್ಟೆಯಲ್ಲಿ ಹರಡಿಡಿ.

1 ಟೀ ಚಮಚ ಸಾಸಿವೆ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.

   

4 ಚಮಚ ಕಾಯಿ ತುರಿದಿಡಿ.

4 ಹಸಿ ಮೆಣಸಿನಕಾಯಿ, ಕಾಯಿ ತುರಿ, ಸಾಸಿವೆ ಪುಡಿ ಹಾಕಿ ಚಟ್ನಿಯ ಹದಕ್ಕೆ ರುಬ್ಬಿಡಿ.

   

ಬಾಣಲೆಯಲ್ಲಿ ಎಣ್ಣೆ ಹಾಕಿ ಸ್ವಲ್ಪ ಕಡಲೇ ಬೀಜ ಕರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಇಂಗು, ಕರಿಬೇವು ಹಾಕಿ ಬಾಡಿಸಿ ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು ಮಾಡಿಟ್ಟ ಅನ್ನ, ಹೆಚ್ಚಿದ ಕೊತ್ತಂಬರಿ ಸೊಪ್ಪು, 1/2 ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಕಲೆಸಿ ಕೊನೆಯಲ್ಲಿ ಕರಿದ ಕಡಲೇ ಬೀಜ ಹಾಕಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಸಾಂಪ್ರಾದಾಯಕ ಸಾಸಿವೆ ಕಾಯನ್ನ ಸಿದ್ಧ!

ಧನ್ಯವಾದಗಳು

Leave a Reply

Your email address will not be published.