Kannada ಸೂಪ್ ಇತ್ಯಾದಿ

SWEET CORN SOUP ಸ್ವೀಟ್ ಕಾರ್ನ್ ಸೂಪ್

ಮಳೆ ಸುರಿಯುವಾಗ ಬಿಸಿ ಬಿಸಿ ಸೂಪ್ ಕುಡಿದರೆ ಎಷ್ಟು ಚೆಂದ ಅಲ್ಲವೇ? ರುಚಿಯಾದ, ಆರೋಗ್ಯಕರವಾದ, ಸುಲಭವಾಗಿ ಮಾಡುವ ಸೂಪ್ ಮಾಡುವ ರೆಸಿಪಿ ಇಲ್ಲಿದೆ!

ಸ್ವೀಟ್ ಕಾರ್ನ್ ಸೂಪ್ ಮಾಡುವ ವಿಧಾನ:-

1 ಕ್ಯಾರೆಟ್ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.

25 ರಿಂದ 30 ಎಳೆಯ ಹುರುಳೀ ಕಾಯಿ ತೊಳೆದು ಸಣ್ಣಗೆ ಹೆಚ್ಚಿಡಿ.

   

100 ಗ್ರಾಂ ನಷ್ಟು ಸ್ವೀಟ್ ಕಾರ್ನ್ ತೊಳೆದು, 1/4 ಭಾಗದಷ್ಟು ಸ್ವಲ್ಪ ನೀರು ಸೇರಿಸಿ ರುಬ್ಬಿಡಿ. 3/4 ಭಾಗ ಬೇಯಲು ಹಾಕಿ.

ಒಂದು ಪಾತ್ರೆಯಲ್ಲಿ ಹೆಚ್ಚಿದ ಹುರುಳೀ ಕಾಯಿ, ಕ್ಯಾರೆಟ್, 3/4 ಭಾಗ ಸ್ವೀಟ್ ಕಾರ್ನ್ ಬೇಯಲು ಇಡಿ. ರುಬ್ಬಿದ ಸ್ವೀಟ್ ಕಾರ್ನ್ ಮಿಶ್ರಣ ಸೇರಿಸಿ 5 ರಿಂದ 6 ನಿಮಿಷ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ.

   

ಬಾಣಲೆಯಲ್ಲಿ 1 ಚಮಚ ಬೆಣ್ಣೆ ಹಾಕಿ 1 ಟೇಬಲ್ ಚಮಚ ಕಾರ್ನ್ ಫ್ಲೋರ್ ಹಾಕಿ ಸ್ವಲ್ಪ ಹುರಿದು, ಬೇಯಿಸಿದ ತರಕಾರಿಗಳನ್ನು ಹಾಕಿ ಸ್ವಲ್ಪ ನೀರು ಸೇರಿಸಿ ಉಪ್ಪು, 1/2 ಚಮಚ ಕಪ್ಪು ಮೆಣಸಿನ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಕುದಿಸಿ ಒಲೆಯಿಂದ ಇಳಿಸಿ.

   

ಕುಡಿಯಲು ಕೊಡುವಾಗ ಸ್ವಲ್ಪ ವಿನೆಗರ್ ಬೇಕಾದರೆ ಸೇರಿಸಿ ಯಾವುದಾದರೂ ಸುಟ್ಟ ಹಪ್ಪಳದ ಜೊತೆ ಕೊಡಿ.

ಮೆಣಸಿನ ಪುಡಿ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿ.

1 ಬಟ್ಟಲು ಸೂಪ್ ಕುಡಿದರೆ ಹೊಟ್ಟೆ ತುಂಬಿ ಹೋಗುತ್ತದೆ! ಡಯಟ್ ಮಾಡುವವರಿಗೆ ಮಕ್ಕಳಿಗೆ ಬಹಳ ಒಳ್ಳೆಯದು!

ಧನ್ಯವಾದಗಳು.

Leave a Reply

Your email address will not be published.