MIX VEG SAGU IN COCONUT MILK ಮಿಕ್ಸ್ ವೆಜ್ ಸಾಗು ಇನ್ ಕೋಕೋನಟ್ ಮಿಲ್ಕ್
ತರಕಾರಿಗಳ ಸಾಗು ದೋಸೆ, ಚಪಾತಿ, ಪೂರಿಯ ಜೊತೆ ತುಂಬಾ ಚೆನ್ನಾಗಿರುತ್ತದೆ. ಈ ರೆಸಿಪಿ ಸ್ವಲ್ಪ ವಿಶೇಷವಾಗಿದೆ! ಒಮ್ಮೆ ಮಾಡಿ ನೋಡಿ! ಮಾಡುವ ವಿಧಾನ:- 1/2 ಹೋಳು ತೆಂಗಿನ ಕಾಯಿ ತುರಿದು,(ಒಡೆದ ಕಾಯಿಯ ದೊಡ್ಡ ಭಾಗ) ಸ್ವಲ್ಪ ನೀರು ಹಾಕಿ ಗಟ್ಟಿಯಾದ ಕಾಯಿ ಹಾಲು ತೆಗೆದಿಡಿ. ಮೊದಲು ತೆಗೆದ ಹಾಲು ಹಾಗೆ ಇಟ್ಟು, ಮತ್ತೊಂದು ಬಾರಿ ರುಬ್ಬಿ ಎರಡನೇ ಬಾರಿ ತೆಗೆದ ಹಾಲನ್ನು ತರಕಾರಿ ಬೇಯಿಸಲು ಹಾಕಿ. ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿ ಬೇಯಿಸಿ ಇಟ್ಟುಕೊಳ್ಳಿ. …









