UNDE PAYASA ಉಂಡೆ ಪಾಯಸ
ಪಾಯಸ ಎಲ್ಲಾ ಹಬ್ಬಗಳಲ್ಲಿ, ವಿಶೇಷ ದಿನಗಳಲ್ಲಿ ತಪ್ಪದೆ ಮಾಡುವ ಸಿಹಿ ತಿಂಡಿ. ಉಂಡೆ ಪಾಯಸ ಬಹಳ ಹಳೆಯ ಸಾಂಪ್ರಾದಾಯಕ ಸಿಹಿ ತಿಂಡಿ. ಮಾಡುವ ವಿಧಾನ:- 1 ಲೋಟ ಅಕ್ಕಿ 2 ಗಂಟೆ ನೆನೆಸಿಡಿ. 1/2 ಲೋಟ ಕಾಯಿ ತುರಿ ತುರಿದಿಡಿ. 1 ಲೋಟ ಬೆಲ್ಲ ತುರಿದಿಡಿ. ಕಾಯಿ ತುರಿ ಮತ್ತು ಅಕ್ಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಚಿಟಿಕೆ ಉಪ್ಪು ಹಾಕಿ ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಕಲೆಸುತ್ತಾ ಹಾಲು ಬಾಯಿ ಹದಕ್ಕೆ ಬರುವವರೆಗೆ ಬೇಯಿಸಿ. …









