RAGI SHAVIGE (Sihi & Khara) ರಾಗಿ ಶಾವಿಗೆ (ಸಿಹಿ & ಖಾರಾ)
ಶಾವಿಗೆ ತುಂಬಾ ಹಿಂದಿನಿಂದ ಮಾಡುತ್ತಾ ಬಂದಿರುವ ಅಡುಗೆ! ರುಚಿಯಾದ, ಆರೋಗ್ಯಕರವಾದ ರೆಸಿಪಿ.ಮಾಡುವ ವಿಧಾನ:- ನಿಮಗೆ ಬೇಕಾಗವಷ್ಟು ರಾಗಿಯನ್ನು 4 ಗಂಟೆ ಕಾಲ ನೆನೆಸಿಡಿ. Mixie/Grinder ನಲ್ಲಿ ನುಣ್ಣಗೆ ರುಬ್ಬಿ. ಹಿಟ್ಟು ಜರಡಿಯ ಮೇಲೆ ಹಾಕಿ ರಾಗಿ ಹಾಲನ್ನು ಸೋಸಿಕೊಳ್ಳಿ. ( ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಜರಡಿ ಹಿಡಿಯುವುದು) ದಪ್ಪ ತಳದ ಬಾಣಲೆಯಲ್ಲಿ ರಾಗಿ ಹಾಲು, ಚಿಟಿಕೆ ಉಪ್ಪು ಹಾಕಿ ಕೈ ಬಿಡದೆ ಮಧ್ಯಮ ಉರಿಯಲ್ಲಿ ಕಲೆಸುತ್ತಾ ಇರಿ. ಹಾಲು ಬಾಯಿಯ ಹದಕ್ಕೆ ಬಂದಾಗ ಒಲೆಯಿಂದ ಇಳಿಸಿ. …









