VEGETABLE BONDA ವೆಜಿಟೇಬಲ್ ಬೋಂಡಾ
ಈ ಹವಾಮಾನಕ್ಕೆ ಬಿಸಿ ಬಿಸಿಯಾದ ಬೋಂಡಾ ಎಷ್ಟು ಚೆನ್ನ ಅಲ್ಲವೇ?! ಬೋಂಡಾ ರುಚಿಯಾಗಿ ಮತ್ತು ಆರೋಗ್ಯಕರವಾಗಿದ್ದರೆ ಮತ್ತೂ ಚೆನ್ನ! ವೆಜಿಟೇಬಲ್ ಬೋಂಡಾ ಮಾಡುವ ವಿಧಾನ:- ನಿಮಗೆ ಇಷ್ಟವಾದ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಕುಕ್ಕರಿನಲ್ಲಿ ನೀರು ಹಾಕದೆ ಇಡ್ಲಿಯ ಹಾಗೆ 10 ನಿಮಿಷ ಹಬೆಯಲ್ಲಿ ಬೇಯಿಸಿಡಿ. ಹುರುಳಿ ಕಾಯಿ, ಕ್ಯಾರೆಟ್, ಬಟಾಣಿ, ಆಲೂಗೆಡ್ಡೆ, ಗೋಭಿ ಸ್ವಲ್ಪ ಸ್ವಲ್ಪ ಹಾಕಬಹುದು. 1 ಈರುಳ್ಳಿ,2 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬೆಂದ ತರಕಾರಿಗಳನ್ನು ನೀರು ಸೋರಿ ಹಾಕಿಡಿ. ಬಾಣಲೆಯಲ್ಲಿ …









