Kannada ಉಪಹಾರ

RAGI IDLI & DOSA & ERULLI ALU SAMBAR (Two in one) ರಾಗಿ ಇಡ್ಲಿ ಮತ್ತು ದೋಸೆ ಮತ್ತು ಈರುಳ್ಳಿ ಆಲೂ ಸಾಂಬಾರ್

ರಾಗಿ ದಕ್ಷಿಣ ಕರ್ನಾಟಕದ ಪ್ರಮುಖ ಆಹಾರ. ಆರೋಗ್ಯಕರ ಕೂಡ! ಇದರಿಂದ ರುಚಿಯಾದ ಇಡ್ಲಿ ಮತ್ತು ದೋಸೆ ಒಂದೇ ಹಿಟ್ಟಿನಿಂದ ಮಾಡುವ ರೆಸಿಪಿ ಇಲ್ಲಿದೆ!ಹಿಟ್ಟು ಮಾಡುವ ವಿಧಾನ:-

ರಾಗಿ – 1 ಲೋಟ
ದೋಸೆ ಅಕ್ಕಿ – 1 ಲೋಟ
ಉದ್ದಿನ ಬೇಳೆ -1/2 ಲೋಟ
ಗಟ್ಟಿ ಅವಲಕ್ಕಿ – 4 ಚಮಚ
ಮೆಂತ್ಯ – 1/2 ಚಮಚ (ಬೇಕಾದರೆ)

ರಾಗಿ ತೊಳೆದು 4 ಗಂಟೆ ನೆನೆಸಿಡಿ.
ಅಕ್ಕಿ, ಅವಲಕ್ಕಿ ತೊಳೆದು ಒಟ್ಚಿಗೆ 2 ಗಂಟೆ ನೆನೆಸಿಡಿ.
ಉದ್ದಿನ ಬೇಳೆ, ಮೆಂತ್ಯ ತೊಳೆದು 2 ಗಂಟೆ ನೆನೆಸಿಡಿ.
ಮೊದಲು ರಾಗಿ ನುಣ್ಣಗೆ ರುಬ್ಬಿಡಿ. Grinder ಆದರೆ ಒಳ್ಳೆಯದು. Mixie ಯಲ್ಲಾದರೆ 2 ಬಾರಿ ರುಬ್ಬಬೇಕು. ರಾಗಿ ನುಣ್ಣಗೆ ಆಗುವುದು ನಿಧಾನ. ನಂತರ ಮಿಕ್ಕೆಲ್ಲವನ್ನೂ ನುಣ್ಣಗೆ ರುಬ್ಬಿ ರಾಗಿ ಮಿಶ್ರಣಕ್ಕೆ ಸೇರಿಸಿ ಉಪ್ಪು ಹಾಕಿ ಕಲೆಸಿ ರಾತ್ರಿ ಪೂರ ಹುದುಗಲು ಬಿಡಿ. ಹಿಟ್ಟು ಗಟ್ಟಿಯಾಗಿ ಇರಲಿ.

 

ಇಡ್ಲಿ ಮಾಡುವ ವಿಧಾನ:-

ಗಟ್ಟಿಯಾದ ಮಿಶ್ರಣಕ್ಕೆ ಸ್ವಲ್ಪ ಅಡುಗೆ ಸೋಡಾ ಸೇರಿಸಿ ಕಲೆಸಿ ಸಾಧಾರಣವಾಗಿ ಮಾಡುವಂತೆ 10 ರಿಂದ 12 ನಿಮಿಷ ಬೇಯಿಸಿದರೆ ರಾಗಿ ಇಡ್ಲಿ ಸಿದ್ಧ!

   

      

ದೋಸೆ ಮಾಡುವ ವಿಧಾನ:-

ಇದೇ ಹಿಟ್ಟನ್ನು ಸ್ವಲ್ಪ ನೀರು ಸೇರಿಸಿ ತೆಳ್ಳಗೆ ದೋಸೆ ಹಿಟ್ಚಿನ ಹದಕ್ಕೆ ಕಲೆಸಿ.

ದೋಸೆ ಮೆತ್ತಗೆ ಬೇಕೆಂದರೆ ದೋಸೆ ಸ್ವಲ್ಪ ದಪ್ಪಗೆ ಹಾಕಿ ತಟ್ಟೆ ಮುಚ್ಚಿ ಬೇಯಿಸಿ.

ದೋಸೆ ಗರಿ ಗರಿಯಾಗಿ ಬೇಕೆಂದರೆ ತೆಳ್ಳಗೆ ಮಾಡಿದ ಹಿಟ್ಚಿಗೆ 1 ಚಮಚ ಅಕ್ಕಿ ಹಿಟ್ಟು ಹಾಕಿ ತೆಳ್ಳಗೆ ದೋಸೆ ಹಾಕಿ ತಟ್ಟೆ ಮುಚ್ಚದೆ ಕಡಿಮೆ ಉರಿಯಲ್ಲಿ ಬೇಯಿಸಿ.

ಈರುಳ್ಳಿ ಆಲೂಗೆಡ್ಡೆ ಸಾಂಬಾರ್ ಮಾಡುವ ವಿಧಾನ:-

ಇಡ್ಲಿ ಜೊತೆ ಒಳ್ಳೆಯ Combination!

1 ಲೋಟ ತೊಗರಿ ಬೇಳೆಯನ್ನು 1 ಸಿಪ್ಪೆ ತೆಗೆದು ಹೆಚ್ಚಿದ ಆಲೂಗೆಡ್ಡೆ ಜೊತೆ 2 ವಿಷಲ್ ಕೂಗಿಸಿಡಿ.

2 ಈರುಳ್ಳಿ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿ, ಎಳೆ ಎಳೆಯಾಗಿ ಬಿಡಿಸಿಡಿ.

   

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಈರುಳ್ಳಿಯನ್ನು ಸ್ವಲ್ಪ ಹುರಿದು 2 ಚಮಚ ಹುಣಿಸೆ ರಸ ಹಾಕಿ ಬೇಯಿಸಿಡಿ.

1 ಚಮಚ ಕಡಲೇ ಬೇಳೆ, 1 ಚಮಚ ಧನಿಯಾ, 2 ಚಮಚ ಕಾಯಿ ತುರಿ, ನಿಮಗೆ ಬೇಕಾದಷ್ಟು ಒಣ ಮೆಣಸಿನ ಕಾಯಿ ಹುರಿದು ನುಣ್ಣಗೆ ರುಬ್ಬಿಡಿ. ಮೆಣಸಿನ ಕಾಯಿಗೆ ಮಾತ್ರ ಎಣ್ಣೆ ಹಾಕಿ ಹುರಿಯಿರಿ.

      

ಬೆಂದ ಬೇಳೆಗೆ ರುಬ್ಬಿದ ಮಿಶ್ರಣ, ಬೆಂದ ಈರುಳ್ಳಿ, ಉಪ್ಪು, ಚೂರು ಬೆಲ್ಲ , ಸ್ವಲ್ಪ ನೀರು ಬೇಕಾದರೆ ಹಾಕಿ ಕುದಿಸಿ.

ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿ ಸಾಂಬಾರ್ ಗೆ ಹಾಕಿದರೆ ರುಚಿಯಾದ ಈರುಳ್ಳಿ ಆಲೂಗೆಡ್ಡೆ ಸಾಂಬಾರ್ ಸಿದ್ಧ!

ಧನ್ಯವಾದಗಳು.

Leave a Reply

Your email address will not be published.