JOLADA ROTTI ಜೋಳದ ರೊಟ್ಟಿ
ಉತ್ತರ ಕರ್ನಾಟಕದ ಜನಪ್ರಿಯ ಆಹಾರ! ಅಲ್ಲಿನ ಜನ ಆ ರೊಟ್ಟಿಯನ್ನು ಬಡಿಯುವುದು ನೋಡಲೇ ಬಲು ಚೆಂದ! ಆದರೆ ಹಾಗೆ ಬಡಿಯಲು ಸಾಕಷ್ಟು ಅಭ್ಯಾಸ ಬೇಕು! ಬಡಿಯಲು ಬರುವುದಿಲ್ಲವೆಂದು ಜೋಳದ ರೊಟ್ಟಿಯನ್ನು ತಿನ್ನದಿರಲು ಆಗುವುದೇ!? ಈ ರೊಟ್ಟಿಯನ್ನು ಬಡಿಯದೇ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಬಾಣಲೆಯಲ್ಲಿ 1 1/2 ಲೋಟ ನೀರು ಬಿಸಿಯಾಗಲು ಇಡಿ. ನೀರು ಕುದಿಯುವಾಗ 1 ಲೋಟ ಜೋಳದ ಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. …