Showing 158 Result(s)
Kannada Tindi Tinisu ಖಾರ ತಿನಿಸುಗಳು

MASALA PAPPAD ಮಸಾಲಾ ಪಾಪ್ಪಡ್

ಹೋಟೆಲ್ ಗಳಿಗೆ ಹೋದಾಗ ಮರೆಯದೆ ತಿನ್ನುವ Starter! ಮನೆಯಲ್ಲಿಯೇ ಸುಲಭವಾಗಿ, ರುಚಿಯಾಗಿ, ಶುಚಿಯಾಗಿ ಮಾಡುವ ವಿಧಾನ ಇಲ್ಲಿದೆ! ಮೆಣಸು ಹಾಕಿರುವ ಹಪ್ಪಳಗಳನ್ನು ಎಣ್ಣೆಯಲ್ಲಿ ಕರಿದಿಡಿ/ Oven ನಲ್ಲಿ ಸುಟ್ಟಿಡಿ. 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 2 ಟೋಮೋಟೋ ಸಣ್ಣಗೆ ಹೆಚ್ಚಿಡಿ. 1 ಚಿಕ್ಕ ಕ್ಯಾರೆಟ್ ತುರಿದಿಡಿ. 4 ಚಮಚ ತೆಂಗಿನ ಕಾಯಿ ತುರಿದಿಡಿ. ಕೊತ್ತಂಬರಿ ಸೊಪ್ಪು ಸ್ವಲ್ಪ ಸಣ್ಣಗೆ ಹೆಚ್ಚಿಡಿ. ಮೇಲೆ ಕೊಟ್ಟಿರುವ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ, 1 ಚಮಚ ಖಾರಾದ ಪುಡಿ, ಉಪ್ಪು, …

Kannada Tindi Tinisu ಖಾರ ತಿನಿಸುಗಳು ಸಾಂಬಾರು ಮತ್ತು ಪಲ್ಯಗಳು

JUNAKA VADE ಜುಣಕಾ ವಡೆ/ಕಡಲೇ ಹಿಟ್ಟಿನ ವಡೆ

ಉತ್ತರ ಕರ್ನಾಟಕದ ಜನಪ್ರಿಯ ತಿನಿಸು ಜುಣಕಾ, ಜೋಳದ ರೊಟ್ಟಿಯೊಂದಿಗೆ ಜುಣಕಾ ಇದ್ದರೆ, 2 ರೊಟ್ಟಿ ಹೆಚ್ಚಿಗೆ ತಿನ್ನಬಹುದು. ಜುಣಕಾ ಬೇರೆ ಬೇರೆ ರೀತಿ ಮಾಡುತ್ತಾರೆ. ನಮ್ಮ ಮನೆಯಲ್ಲಿ ಈ ರೀತಿ ಮಾಡುತ್ತೇನೆ, ಅದನ್ನೇ ನಾನಿಲ್ಲಿ ಹಂಚಿ ಕೊಳ್ಳುತ್ತಿದ್ದೇನೆ. ಮಾಡುವ ವಿಧಾನ:- 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 6 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.    2 ಚಮಚ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು ತರಿ ತರಿಯಾಗಿ ಪುಡಿ ಮಾಡಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, …

Kannada Tindi Tinisu ಖಾರ ತಿನಿಸುಗಳು

AVARE VEG BALL MANCHURIAN ಅವರೆ ವೆಜ್ ಬಾಲ್ ಮಂಚೂರಿಯನ್

ಮಂಚೂರಿಯನ್ ಎಲ್ಲರ ಫೇವರೈಟ್! ಈ ಮಂಚೂರಿ ಸ್ವಲ್ಪ ವಿಶೇಷ ರುಚಿ. ಅವರೆ ವೆಜ್ ಬಾಲ್ ಮಂಚೂರಿಯನ್ ಮಾಡುವ ವಿಧಾನ:- 1 ಕ್ಯಾರೆಟ್, 1 ಕ್ಯಾಪ್ಸಿಕಮ್, ಒಂದು ಹಿಡಿ ಕ್ಯಾಬೇಜ್, 10 ರಿಂದ 12 ಎಳೆಯದಾದ ಹುರುಳಿ ಕಾಯಿ ತೊಳೆದು ಆದಷ್ಟೂ ಸಣ್ಣಗೆ ಹೆಚ್ಚಿಡಿ. 2 ಹಿಡಿ ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿ, ತರಿ ತರಿಯಾಗಿ ರುಬ್ಬಿಡಿ. ಸುಮ್ಮನೆ ಒಂದು ಸುತ್ತು ಸುತ್ತಿದರೆ ಸಾಕು!    ತರಕಾರಿಗಳು, ರುಬ್ಬಿದ ಅವರೆ ಮಿಶ್ರಣ, 1 ಚಮಚ ಕಾರ್ನ್ ಫ್ಲೋರ್,1 …

Kannada Tindi Tinisu ಖಾರ ತಿನಿಸುಗಳು

PALAK KHARA HOLIGE ಪಾಲಾಕ್ ಖಾರಾ ಹೋಳಿಗೆ

ಹೋಳಿಗೆ ಸಾಮಾನ್ಯವಾಗಿ ಎಲ್ಲರೂ ಸಿಹಿ ಮಾಡುವುದು. ಹೀಗೊಮ್ಮೆ ಮಾಡಿ ನೋಡಿ! ಖಂಡಿತ ನಿಮಗೆ ಇಷ್ಟವಾಗುತ್ತದೆ! ಮಾಡುವ ವಿಧಾನ:-    2 ಕಟ್ಟು ಪಾಲಕ್ ಸೊಪ್ಪನ್ನು ಬಿಡಿಸಿ ತೊಳೆದು ಬಾಣಲೆಯಲ್ಲಿ ಬೇಯಿಸಿ ನೀರು ಸೋರಿ ಹಾಕಿಡಿ. 4 ಹಸಿ ಮೆಣಸಿನ ಕಾಯಿ, 4 ಚಮಚ ಕಾಯಿ ತುರಿಯೊಂದಿಗೆ ನೀರು ಹಾಕದೆ ರುಬ್ಬಿಕೊಳ್ಳಿ. ತೆಳು ಅವಲಕ್ಕಿ 1/2 ಬಟ್ಟಲು, ನೀರಲ್ಲಿ ತೊಳೆದು, ಸೋರಿ ಹಾಕಿ, ಕಿವುಚಿ, ರುಬ್ಬಿದ ಮಿಶ್ರಣದೊಂದಿಗೆ, ಉಪ್ಪು ಸೇರಿಸಿ ಹೂರಣ ತಯಾರಿಸಿ ಕೊಳ್ಳಿ. 1/2 ಬಟ್ಟಲು ಮೈದಾ, …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BELLADA JILEBI & RABDI ಬೆಲ್ಲದ ಜಿಲೇಬಿ & ರಬ್ಡಿ

ಜಿಲೇಬಿ ಎಲ್ಲರ ಮೆಚ್ಚಿನ ಸಿಹಿ ತಿಂಡಿ! ಇದರ ರುಚಿಗೆ ಮನ ಸೋಲದವರಿಲ್ಲ! ಈ ಸಿಹಿಯನ್ನು ಸಕ್ಕರೆಯಲ್ಲಿ ಮಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ! ಸಕ್ಕರೆ ಬದಲು ಬೆಲ್ಲದಲ್ಲಿ ಮಾಡುವುದು ಈ ರೆಸಿಪಿ ವಿಶೇಷತೆ! ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಕೂಡ! ಅಂದ ಹಾಗೆ ನಿಮ್ಮ ಅನ್ನಪೂರ್ಣೆ ಪೇಜ್ ನ 300 ನೇ ರೆಸಿಪಿ! ಹಾಗಾಗಿ ವಿಶೇಷ ಸಿಹಿ! ಮಾಡುವ ವಿಧಾನ:- 1 ಅಳತೆ ಬೆಲ್ಲ ಪುಡಿ ಮಾಡಿ 1/4 ಲೋಟ ನೀರು ಹಾಕಿ ಅರ್ಧ ಎಳೆ ಪಾಕ ಬಂದೊಡನೆ 1/2 …

Kannada Tindi Tinisu ಖಾರ ತಿನಿಸುಗಳು

CHIVDA ಚಿವ್ಡಾ

ಸಂಜೆ ವೇಳೆಗೆ ಕಾಫಿ, ಟೀ ಜೊತೆಗೆ ಖಾರಾ ಖಾರಾ ಏನಾದರೂ ತಿನ್ನಬೇಕು ಅನ್ನಿಸುತ್ತದೆ! ಹೀಗೆ ಮಾಡಿಡಿ ವಾರವಾದರೂ ಗರಿ ಗರಿಯಾಗಿರುತ್ತದೆ! ಮಾಡುವ ವಿಧಾನ:- 1/4 ಕೇಜಿ ಪೇಪರ್ ಅವಲಕ್ಕಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಡಿ. ಅಥವಾ Oven ನಲ್ಲಿ ಒಂದು ನಿಮಿಷ ಬಿಸಿ ಮಾಡಿ ಪೂರ್ತಿಯಾಗಿ ತಣ್ಣಗಾಗಲು ಬಿಡಿ. ಪೂರ್ತಿಯಾಗಿ ತಣ್ಣಗಾದ ಮೇಲೆ ಗರಿಗರಿಯಾಗಿರುತ್ತದೆ. ನಾನು Oven ನಲ್ಲಿಯೇ ಮಾಡಿರುವುದು. ಈಗ ಛಳಿಗಾಲ ಆಗಿರುವುದರಿಂದ ಅಂಗಡಿಯಿಂದ ತಂದ ಅವಲಕ್ಕಿ ಮೆತ್ತಗಿರುತ್ತದೆ. ನಾನು ಕಡಲೇ ಪುರಿ ( ಮಂಡಕ್ಕಿ ) …

Kannada Tindi Tinisu ಖಾರ ತಿನಿಸುಗಳು

MIRCHI CUT BAJJI ಮಿರ್ಚಿ ಕಟ್ ಬಜ್ಜಿ

ಬಹಳ ಜನರ ಇಷ್ಟವಾದ ತಿಂಡಿ ಮೆಣಸಿನಕಾಯಿ ಬಜ್ಜಿ! ಸಂಜೆ ಬಿಸಿ ಬಿಸಿಯಾದ ಕಾಫಿಯೊಂದಿಗೆ ಸವಿಯಲು ಎಷ್ಟು ಚೆನ್ನ ಅಲ್ಲವೇ?! ಸಾಧಾರಣವಾಗಿ ಮೆಣಸಿನಕಾಯಿ ಬಜ್ಜಿ ಎಲ್ಲರೂ ಮಾಡುತ್ತಾರೆ! ಹೀಗೊಮ್ಮೆ ಮಾಡಿ ನೋಡಿ! ನಿಮಗೆಲ್ಲಾ ಖಂಡಿತಾ ಇಷ್ಟ ಆಗುತ್ತೆ! ಮಾಡುವ ವಿಧಾನ:- ಬಜ್ಜಿಯ ಒಳಗೆ ತುಂಬಲು:-     2 ಚಮಚ ಬಿಳಿ ಎಳ್ಳು, 1 ಚಮಚ ಜೀರಿಗೆ, 1/4 ಚಮಚ ಓಂ ಕಾಳು ( ಅಜವಾನ ), ಹುರಿದು 1 ಚಮಚ ಹುರಿಗಡಲೆ ಸೇರಿಸಿ ನುಣ್ಣಗೆ ಪುಡಿ ಮಾಡಿಡಿ. ಜೊತೆಗೆ …

Kannada Tindi Tinisu ಖಾರ ತಿನಿಸುಗಳು ಸಾಂಬಾರು ಮತ್ತು ಪಲ್ಯಗಳು

BABY CORN PEPPER MASALA ಬೇಬಿ ಕಾರ್ನ್ ಪೆಪ್ಪರ್ ಮಸಾಲ

ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ :- 10 ರಿಂದ 12 ಬೇಬಿ ಕಾರ್ನ್ ತೊಳೆದು ಸಣ್ಣಗೆ ಹೆಚ್ಚಿ ಎಣ್ಣೆಯಲ್ಲಿ ಕರಿದಿಡಿ/ Half boil ಮಾಡಿಡಿ. 1 ದೊಡ್ಡ ಕ್ಯಾಪ್ಸಿಕಮ್ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. 1 ಚಿಕ್ಕ ಈರುಳ್ಳಿ, 2 ಟೋಮೋಟೋ, 5 ಬೆಳ್ಳುಳ್ಳಿ ಎಸಳು, 1/2 ಇಂಚು ಶುಂಠಿ, 1 ಹಸಿ ಮೆಣಸಿನಕಾಯಿ, 10 ಗೋಡಂಬಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಡಿ. ಬಾಣಲೆಯಲ್ಲಿ 2 ಚಮಚ ಬೆಣ್ಣೆ/ ಎಣ್ಣೆ …

Kannada Tindi Tinisu ಖಾರ ತಿನಿಸುಗಳು

AVALAKKI BENNE MURUKKU/ CHAKKULI ಅವಲಕ್ಕಿ ಬೆಣ್ಣೆ ಮುರುಕು/ಚಕ್ಕುಲಿ

ಸಾಧಾರಣವಾಗಿ ಗೋಕುಲಾಷ್ಟಮಿಯಲ್ಲಿ ನಮ್ಮ ಮನೆಯಲ್ಲಿ ಮಾಡುವ ತಿಂಡಿ! ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಬಾಯಲ್ಲಿಟ್ಟರೆ ಕರಗುವಷ್ಟು ಗರಿ ಗರಿಯಾಗಿರುತ್ತದೆ! ಮಾಡುವ ವಿಧಾನ:- 1 ಅಳತೆ ಗಟ್ಟಿ ಅವಲಕ್ಕಿಯನ್ನು ನುಣ್ಣಗೆ ಪುಡಿ ಮಾಡಿಡಿ. 1/2 ಅಳತೆ ಹುರಿಗಡಲೆ ನುಣ್ಣಗೆ ಪುಡಿ ಮಾಡಿಡಿ. ಪುಡಿ ಮಾಡಿದ ಅವಲಕ್ಕಿ ಮತ್ತು ಹುರಿಗಡಲೆಯನ್ನು ಜರಡಿ ಹಿಡಿದಿಡಿ    2 ಅಳತೆ ಅಕ್ಕಿ ಹಿಟ್ಟನ್ನು ಒಂದು ಬಟ್ಟಲಿನಲ್ಲಿ ಹಾಕಿ, ಪುಡಿ ಮಾಡಿದ ಅವಲಕ್ಕಿ, ಹುರಿಗಡಲೆ, 2 ಚಮಚ ಜೀರಿಗೆ, 2 ಚಮಚ ಬಿಳಿ ಎಳ್ಳು, …

Kannada Tindi Tinisu ಖಾರ ತಿನಿಸುಗಳು

ONION PAKODA ಆನಿಯನ್ ಪಕೋಡ

ಎಲ್ಲರಿಗೂ ಇಷ್ಟವಾಗುವ ಕುರುಕಲು ತಿಂಡಿ! ಸಂಜೆ ಬಿಸಿ ಬಿಸಿಯಾದ ಕಾಫಿಯೊಂದಿಗೆ ಸವಿಯಲು ಎಷ್ಟು ಚೆನ್ನ ಅಲ್ಲವೇ?! ಮಾಡುವ ವಿಧಾನ:- ಈರುಳ್ಳಿ ಸಿಪ್ಪೆ ತೆಗೆದು ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ, ಕರಿಬೇವು ಹೆಚ್ಚಿಡಿ.    ಬಟ್ಟಲಿನಲ್ಲಿ 1 ಅಳತೆ ಕಡಲೇ ಹಿಟ್ಟು, 1/2 ಅಳತೆ ಅಕ್ಕಿ ಹಿಟ್ಟು ಜರಡಿ ಹಿಡಿದಿಡಿ. 1 ಚಿಕ್ಕ ಬಟ್ಟಲಿನಲ್ಲಿ 1 ಚಮಚ ತುಪ್ಪ, ಚಿಟಿಕೆ ಸೋಡಾ ಹಾಕಿ ಚೆನ್ನಾಗಿ ಕಲೆಸಿ, ಕಡಲೇ ಹಿಟ್ಟಿಗೆ ಸೇರಿಸಿ. ಹೆಚ್ಚಿದ ಈರುಳ್ಳಿ, ಕೊತ್ತಂಬರಿ, ಕರಿಬೇವು, 2 …