Showing 103 Result(s)
Kannada Oota ಸಾಂಬಾರು ಮತ್ತು ಪಲ್ಯಗಳು

ERULLI MAJJIGE HULI ಈರುಳ್ಳಿ ಮಜ್ಜಿಗೆ ಹುಳಿ

ಸಾಮಾನ್ಯವಾಗಿ ಎಲ್ಲರೂ ಬೂದುಗುಂಬಳದ ಮಜ್ಜಿಗೆ ಹುಳಿ ಮಾಡುತ್ತಾರೆ. ಈರುಳ್ಳಿ ಮಜ್ಜಿಗೆ ಹುಳಿ ಕೂಡ ತುಂಬಾ ಚೆನ್ನಾಗಿರುತ್ತದೆ! ಆಂಧ್ರ ಸ್ಟೈಲ್ ಹೋಟೆಲ್ ಗಳಲ್ಲಿ ಮಾಡುವ ವಿಧಾನ ಇಲ್ಲಿದೆ! ರುಚಿಯಾಗಿ, ವಿಭಿನ್ನವಾಗಿರುತ್ತದೆ! ಮಾಡುವ ವಿಧಾನ:- 2 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. 1 ಚಮಚ ಹುರಿಗಡಲೆ, 2 ಚಮಚ ಕಾಯಿ ತುರಿ, 4 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಚಟ್ನಿಯ ಹದಕ್ಕೆ ರುಬ್ಬಿಡಿ.    ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಹೆಚ್ಚಿದ ಈರುಳ್ಳಿ, ಕರಿಬೇವು, …

Kannada Oota ಉಪಹಾರ

INSTANT PULIOGARE GOJJU ಇನ್ಸ್ಟೆಂಟ್ ಪುಳಿಯೋಗರೆ ಗೊಜ್ಜು

ಪುಳಿಯೋಗರೆ ಎಲ್ಲರ ಮೆಚ್ಚಿನ ತಿಂಡಿ! ಅದರ ಗೊಜ್ಜು ಮಾಡಿಟ್ಟರೆ ಯಾವಾಗ ಬೇಕಾದರೂ ಅನ್ನ ಮಾಡಿ ಕಲೆಸಿ ಕೊಳ್ಳಬಹುದು! ಆದರೆ ಪುಳಿಯೋಗರೆ ಗೊಜ್ಜು ಮಾಡುವ ವಿಧಾನ ಸ್ವಲ್ಪ ಕಷ್ಟದ, ನಿಧಾನವಾದ ಕೆಲಸವೇ! ಹೀಗೆ ಮಾಡಿ ನೋಡಿ! ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- 1 ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಿನಲ್ಲಿ ನೆನೆಸಿ, ಕಿವುಚಿ ರಸ ತೆಗೆದಿಡಿ. ಕಡಲೇ ಬೇಳೆ – 1 ಟೇಬಲ್ ಚಮಚ ಧನಿಯಾ – 1 ಟೇಬಲ್ ಚಮಚ ಬಿಳಿ …

Kannada Oota ಉಪಹಾರ

JOLADA ROTTI ಜೋಳದ ರೊಟ್ಟಿ

ಉತ್ತರ ಕರ್ನಾಟಕದ ಜನಪ್ರಿಯ ಆಹಾರ! ಅಲ್ಲಿನ ಜನ ಆ ರೊಟ್ಟಿಯನ್ನು ಬಡಿಯುವುದು ನೋಡಲೇ ಬಲು ಚೆಂದ! ಆದರೆ ಹಾಗೆ ಬಡಿಯಲು ಸಾಕಷ್ಟು ಅಭ್ಯಾಸ ಬೇಕು! ಬಡಿಯಲು ಬರುವುದಿಲ್ಲವೆಂದು ಜೋಳದ ರೊಟ್ಟಿಯನ್ನು ತಿನ್ನದಿರಲು ಆಗುವುದೇ!? ಈ ರೊಟ್ಟಿಯನ್ನು ಬಡಿಯದೇ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಬಾಣಲೆಯಲ್ಲಿ 1 1/2 ಲೋಟ ನೀರು ಬಿಸಿಯಾಗಲು ಇಡಿ. ನೀರು ಕುದಿಯುವಾಗ 1 ಲೋಟ ಜೋಳದ ಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. …

Kannada Oota ಉಪಹಾರ

TRIRANGI POORI / CHAPATHI ತ್ರಿರಂಗಿ ಪೂರಿ / ಚಪಾತಿ

ಎಲ್ಲರಿಗೂ ಗಣ ರಾಜ್ಯೋತ್ಸವದ ಶುಭಾಷಯಗಳು! ಜನವರಿ 26 ನಮ್ಮ ಭಾರತ ಗಣ ರಾಜ್ಯೋತ್ಸವದ ದಿನ! ನಮ್ಮ ಭಾರತದ ಹೆಮ್ಮೆಯ ತ್ರಿರಂಗದ ಧ್ವಜದ, ಮೂರು ಬಣ್ಣಗಳನ್ನು ಒಂದೇ ತಿಂಡಿಯಲ್ಲಿ ತರುವ ಸಣ್ಣ ಪ್ರಯತ್ನ ನಾನಿಲ್ಲಿ ಮಾಡಿದ್ದೇನೆ. ಈ ಪ್ರಯತ್ನ ನಾನು ನಮ್ಮ ದೇಶದ ಮೇಲಿಟ್ಟಿರುವ ದೇಶಾಭಿಮಾನದಿಂದ! ಬೇರೆ ಯಾವುದೇ ದುರುದ್ದೇಶ ಇಲ್ಲ! ತ್ರಿರಂಗಿ ಪೂರಿ ಮಾಡುವ ವಿಧಾನ:- ಕೇಸರಿ ಬಣ್ಣದ ಹಿಟ್ಟಿಗಾಗಿ:- 2 ಕ್ಯಾರೆಟ್ ಸಿಪ್ಪೆ ತೆಗೆದು ತುರಿದು ನುಣ್ಣಗೆ ರುಬ್ಬಿ. ಸ್ವಲ್ಪ ಗೋಧಿ ಹಿಟ್ಟು, ಸ್ವಲ್ಪ ಚಿರೋಟಿ ರವೆ, …

Kannada Oota ಉಪಹಾರ ಸಾಂಬಾರು ಮತ್ತು ಪಲ್ಯಗಳು

PALAK PANNER ಪಾಲಾಕ್ ಪನ್ನೀರ್

ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ! ಪಾಲಾಕ್ ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು! ಮಾಡುವ ವಿಧಾನ:- 2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು ಬಾಣಲೆಯಲ್ಲಿ ಹಾಕಿ ತಟ್ಟೆ ಮುಚ್ಚದೆ 3 ನಿಮಿಷ ಬೇಯಿಸಿ. ಜೊತೆಗೆ 3 ಅಥವಾ 4 ಹಸಿ ಮೆಣಸಿನಕಾಯಿ ಕೂಡ ಹಾಕಿ. ಚಿಟಿಕೆ ಸಕ್ಕರೆ ಹಾಕಿದರೆ ಸೊಪ್ಪಿನ ಬಣ್ಣ ಹಾಗೆ ಉಳಿಯುತ್ತದೆ!    ಬೆಂದ ಪಾಲಾಕನ್ನು ಬಿಸಿ ನೀರಿನಿಂದ ತೆಗೆದು ತಣ್ಣನೆ ನೀರಿನಲ್ಲಿ ಅದ್ದಿ ನೀರು ಸೋರಿ ಹಾಕಿಡಿ. ನಂತರ Mixie ಯಲ್ಲಿ …

Kannada Oota ಸಾಂಬಾರು ಮತ್ತು ಪಲ್ಯಗಳು

MALAI KOFTHA ( NO GARLIC, NO ONION ) ಮಲೈ ಕೊಫ್ತಾ (ಬೆಳ್ಳುಳ್ಳಿ, ಈರುಳ್ಳಿ ಇಲ್ಲದೆ)

ಹೆಸರೇ ಹೇಳುವಂತೆ ಮಲೈ ಅಂದರೆ ತಾಜಾ ಕೆನೆ ಹಾಕಿ ಮಾಡುವ ಗ್ರೇವಿ! ರುಚಿಕರ, ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಸಾಧಾರಣವಾಗಿ ಗ್ರೇವಿಗಳಿಗೆ ಬೆಳ್ಳುಳ್ಳಿ, ಈರುಳ್ಳಿ ಹಾಕಿಯೇ ಮಾಡುವುದು! ಆದರೆ ಅದನ್ನು ಹಾಕದೆ ರುಚಿಯಾದ ಗ್ರೇವಿ ಮಾಡುವ ವಿಧಾನ ನೋಡೋಣವೇ!? ಮಾಡುವ ವಿಧಾನ :- ಕೊಫ್ತಾ ಮಾಡಲು:- ತಲಾ 50 ಗ್ರಾಂ ಬೀನ್ಸ್, ಕ್ಯಾರೆಟ್, ಬಟಾಣಿ, ಆಲೂಗೆಡ್ಡೆ ಸಣ್ಣಗೆ ಹೆಚ್ಚಿ ಹಬೆಯಲ್ಲಿ Half boil ಮಾಡಿಡಿ. ಬೆಂದ ತರಕಾರಿಗಳನ್ನು ಸ್ವಲ್ಪ ಹಿಸುಕಿ, 4 ಚಮಚ ಕಾರ್ನ್ ಫ್ಲೋರ್, ಉಪ್ಪು, …

Kannada Oota ಉಪಹಾರ

MUSUKINA JOLADA ROTTI ( Maize flour ) ಮುಸುಕಿನ ಜೋಳದ ರೊಟ್ಟಿ ( ಮೆಕ್ಕೆ ಜೋಳ )

ಮುಸುಕಿದ ಜೋಳದಲ್ಲಿ ಆರೋಗ್ಯಕರವಾದ ಅಂಶಗಳು ತುಂಬಾ ಇವೆ. ನಾರಿನಂಶ ಹೇರಳವಾಗಿದ್ದು, ಸಕ್ಕರೆಯ ಅಂಶ ತುಂಬಾ ಕಡಿಮೆ ಇರುವುದರಿಂದ ಮಧುಮೇಹಿಗಳು ಕೂಡ ತಿನ್ನಬಹುದು! ಇಂತಹ ಮುಸುಕಿದ ಜೋಳದ ಹಿಟ್ಟಿಅಂಇಂದ ರುಚಿಯಾದ ರೊಟ್ಟಿ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- 1 ಚಿಕ್ಕ ಸೌತೇ ಕಾಯಿ, 1 ಕ್ಯಾರೆಟ್, 1 ಕ್ಯಾಪ್ಸಿಕಮ್, 1 ಈರುಳ್ಳಿ ತುರಿದಿಡಿ. 2 ಚಮಚ ಕಾಯಿ ತುರಿದಿಡಿ. 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. 1 ಕಟ್ಟು ಮೆಂತ್ಯ ಸೊಪ್ಪು, 1/2 ಕಟ್ಟು ಕೊತ್ತಂಬರಿ ಸೊಪ್ಪು, …

Kannada Oota ಉಪಹಾರ

HEEREKAYI THOVVE ಹೀರೇ ಕಾಯಿ ತೊವ್ವೆ

ಹೀರೇ ಕಾಯಿ ದೇಹಕ್ಕೆ ತಂಪು ನೀಡುತ್ತದೆ! ಅದರಿಂದ ಮಾಡುವ ರುಚಿಯಾದ ತೊವ್ವೆಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಹೀರೇ ಕಾಯಿ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 50 ಗ್ರಾಂ ಹೆಸರು ಬೇಳೆ ತೊಳೆದು, ಹೆಚ್ಚಿದ ಹೀರೇ ಕಾಯಿ ಹಾಕಿ 1 ವಿಷಲ್ ಕೂಗಿಸಿಡಿ.    4 ಚಮಚ ಕಾಯಿ ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 4 ಬಾಳಕದ ಮೆಣಸಿನಕಾಯಿ ಕರಿದಿಡಿ. ಅಥವಾ ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಬೆಂದ ಹೀರೇ ಕಾಯಿಗೆ, …

Kannada Oota ಹಬ್ಬದ ಅಡುಗೆಗಳು

MAHA BHOJANA ಮಹಾ ಭೋಜನ

ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಷಯಗಳು! ???????????? ಸಂಕ್ರಾಂತಿಯ ಹಬ್ಬದ ಪ್ರಯುಕ್ತ ನಮ್ಮ ಮನೆಯಲ್ಲಿ ಮಾಡಿದ ಮಹಾ ಭೋಜನ! ಕೋಸಂಬರಿ ಬೀನ್ಸ್ ಪಲ್ಯ ಬಟಾಣಿ, ಆಲೂಗೆಡ್ಡೆ ಬಾತ್ ಸಿಹಿ ಪೊಂಗಲ್ ಖಾರಾ ಪೊಂಗಲ್ ಬಜ್ಜಿ ಅನ್ನ ರಸಂ ಪರ್ಪು ಚಾಕೊಲೇಟ್ ಹೋಳಿಗೆ ಬಾದಾಮಿ ಹಲ್ವಾ   ಬಾದಾಮಿ ಹಲ್ವಾ ಮಾಡುವ ವಿಧಾನ:- 1 ಬಟ್ಟಲು ಬಾದಾಮಿಯನ್ನು 2ಗಂಟೆ ನೆನೆಸಿ, ಸಿಪ್ಪೆ ತೆಗೆದು 1/2 ಬಟ್ಟಲು ಹಾಲಿನ ಜೊತೆಗೆ ನುಣ್ಣಗೆ ರುಬ್ಬಿ. ಬಿಸಿ ನೀರಿನಲ್ಲಿ ನೆನೆಸಿದರೆ ಬೇಗ ಸಿಪ್ಪೆ ತೆಗೆಯಬಹುದು! …

Kannada Oota ಉಪಹಾರ

PEPPER & GARLIC RICE ಪೆಪ್ಪರ್ & ಗಾರ್ಲಿಕ್ ರೈಸ್

ಈ ಛಳಿಗಾಲಕ್ಕೆ ಸರಿಯಾದ ರೆಸಿಪಿ! ಆರೋಗ್ಯಕರವಾದ, ರುಚಿಕರವಾದ ಆಹಾರ! ಮಾಡುವ ವಿಧಾನ:- 1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ ಸಣ್ಣಗೆ ಹೆಚ್ಚಿಡಿ. 1 ಚಮಚ ಮೆಣಸು, 1 ಚಮಚ ಜೀ ಹುರಿದು ಪುಡಿ ಮಾಡಿಡಿ. 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1 ಲೋಟ ಅಕ್ಕಿ ತೊಳೆದು ಉದುರುದುರಾಗಿ ಅನ್ನ ಮಾಡಿಡಿ.    ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ, ಸಾಸಿವೆ, ಮೆಣಸು ಜೀರಿಗೆ ಪುಡಿ, ಕರಿಬೇವು, ಹೆಚ್ಚಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು, ನಂತರ …