Showing 133 Result(s)
Kannada ಉಪಹಾರ ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MAKHANA KHEER & TEMPLE CHITRANNA ಮಖಾನಾ ಖೀರ್ ಮತ್ತು ಟೆಂಪಲ್ ಚಿತ್ರಾನ್

ಮಖಾನಾ ಖೀರ್ ಮಾಡುವ ವಿಧಾನ:-ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಮಖಾನಾ ಹಾಕಿ ನಾಲ್ಕೈದು ನಿಮಿಷ ಮಧ್ಯಮ ಉರಿಯಲ್ಲಿ ಹುರಿದಿಡಿ. ತಣ್ಣಗಾದ ಮೇಲೆ ಕೈಯಿಂದ ಸ್ವಲ್ಪ ಮಖಾನಾ ಪುಡಿ ಮಾಡಿ ಮಿಕ್ಕದ್ದೆಲ್ಲ ಹಾಗೇ ಇಡಿ. ದಪ್ಪ ತಳದ ಬಾಣಲೆಯಲ್ಲಿ 1/2 ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಉಕ್ಕಲು ಬಿಡದಂತೆ ತಿರುಗಿಸುತ್ತಾ ಇರಿ.    ಹಾಲು ಅರ್ಧದಷ್ಟು ಆದಾಗ 3 ಅಥವಾ 4 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ, ಹುರಿದ ಮಖಾನಾ, ಚಿಟಿಕೆ ಏಲಕ್ಕಿ ಪುಡಿ, ತುಪ್ಪದಲ್ಲಿ …

Kannada Tindi Tinisu ಸಿಹಿ ತಿನಿಸುಗಳು

HALUBAI ಹಾಲುಬಾಯಿ

ಸಾಮಾನ್ಯವಾಗಿ ಎಲ್ಲರೂ ಮಾಡುವ ರೆಸಿಪಿ! ಮಾಡುವ ವಿಧಾನ:- 1 ಲೋಟ ಅಕ್ಕಿ 2 ಗಂಟೆ ನೆನೆಸಿಡಿ. 1 ಲೋಟ ಕಾಯಿ ತುರಿದಿಡಿ. 1 ಲೋಟ ಬೆಲ್ಲ ಪುಡಿ ಮಾಡಿಡಿ. ನೆಂದ ಅಕ್ಕಿ ಮತ್ತು ಕಾಯಿ ತುರಿಯನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ. ದಪ್ಪ ತಳದ ಬಾಣಲೆಯಲ್ಲಿ 1 ಲೋಟ ಬೆಲ್ಲದ ಪುಡಿ 1/2 ಲೋಟ ನೀರು ಹಾಕಿ ಬಿಸಿಯಾಗಲು ಇಡಿ. ಬೆಲ್ಲ ಕರಗಿದ ನಂತರ ರುಬ್ಬಿದ ಅಕ್ಕಿ ಮಿಶ್ರಣವನ್ನು ಬೆಲ್ಲದ ಪಾಕಕ್ಕೆ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

SHAHI THUKADA ಶಾಹಿ ತುಕಡಾ

ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಸಿಹಿ ತಿಂಡಿ! ಮಾಡುವ ವಿಧಾನ:- 8 ಬ್ರೆಡ್ ಸ್ಲೈಸ್ ಗಳ ಅಂಚನ್ನು ತೆಗೆದು ಮಧ್ಯದಲ್ಲಿ ತ್ರಿಕೋನಾಕಾರವಾಗಿ ಕತ್ತರಿಸಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಬ್ರೆಡ್ ಅನ್ನು ಕೆಂಪಗೆ ಕರಿದಿಡಿ. 1 ಲೋಟ ಸಕ್ಕರೆಗೆ 1/2 ಲೋಟ ನೀರು ಹಾಕಿ ಕುದಿಸಿ ಜಾಮೂನ್ ಪಾಕಕ್ಕಿಂತ ಸ್ವಲ್ಪ ಗಟ್ಟಿಯಾಗಿ ಪಾಕ ಮಾಡಿ ಬ್ರೆಡ್ ತುಂಡುಗಳನ್ನು ಅದರಲ್ಲಿ ಅದ್ದಿ 2 ಅಥವಾ 3 ನಿಮಿಷ ಸಕ್ಕರೆ ಪಾಕದಲ್ಲಿ ಬಿಟ್ಟು ತೆಗೆದಿಡಿ.   ರಬ್ರಿ ಮಾಡುವ ವಿಧಾನ:- 1/2 …

Kannada Tindi Tinisu ಸಿಹಿ ತಿನಿಸುಗಳು

STUFFED BANANA ಸ್ಟಫ್ಡ್ ಬನಾನಾ

ಬಾಳೆ ಹಣ್ಣಿನ ರಸಾಯನ ಸಾಮಾನ್ಯವಾಗಿ ಎಲ್ಲರೂ ದೇವರ ನೈವೇದ್ಯಕ್ಕೆ ಮಾಡುತ್ತಾರೆ! ಅದನ್ನೇ ಸ್ವಲ್ಪ Different ಆಗಿ ಮಾಡಿದರೆ ದೇವರಿಗೂ ಇಷ್ಟ ಆಗಬಹುದೇನೋ? ಒಮ್ಮೆ ಹೀಗೆ ಮಾಡಿದರೆ ಹೇಗೆ?! ಸ್ಟಫ್ಡ್ ಬನಾನಾ ಮಾಡುವ ವಿಧಾನ:- 1/2 ಹೋಳು ತೆಂಗಿನ ಕಾಯಿ ತುರಿದಿಡಿ. 1/2 ಲೋಟ ಬೆಲ್ಲ ತುರಿದಿಡಿ. ಸ್ವಲ್ಪ ಗೋಡಂಬಿ ದ್ರಾಕ್ಷಿ ಬಾದಾಮಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ ಕಾಯಿ ತುರಿ, ಬೆಲ್ಲದ ಪುಡಿ, Dry fruits ಹಾಕಿ ಸ್ವಲ್ಪ ಹುರಿದಿಡಿ. ಚಿಟಿಕೆ ಏಲಕ್ಕಿ ಪುಡಿ ಬೇಕಾದರೆ ಸೇರಿಸಿ ಕಲೆಸಿಡಿ. …

Kannada ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

KAJJAYA ಕಜ್ಜಾಯ

ದೀಪಾವಳಿ ಎಂದೊಡನೆ ನೆನೆಪಿಗೆ ಬರುವುದು ಲಕ್ಷ್ಮೀ ಪೂಜೆ ಮತ್ತು ಕಜ್ಜಾಯ! ಕಜ್ಜಾಯ ಅತ್ಯಂತ ಹಳೆಯ ಸಾಂಪ್ರಾದಾಯಕ ಸಿಹಿ ತಿಂಡಿ. ಕೆಲವರು ಇದನ್ನು ಅತಿರಸ ಅಂತ ಕೂಡ ಕರೆಯುತ್ತಾರೆ. ಇದು ನಮ್ಮ ತಾಯಿ ಮಾಡುತ್ತಿದ್ದ ವಿಧಾನ! ಅವರು ದೈವಾಧೀನರಾದ ಮೇಲೆ ನಮ್ಮ ಅತ್ತಿಗೆ ಈ ಕಜ್ಜಾಯ ನನಗೆ ಮಾಡಿಕೊಡುತ್ತಿದ್ದರು! ಮೊದಲ ಬಾರಿಗೆ ನಾನು ಕಜ್ಜಾಯ ನಮ್ಮ ಅತ್ತಿಗೆಯಿಂದ ಕಲಿತು ಮಾಡಿದ್ದೇನೆ! ತುಂಬಾ ತುಂಬಾ ಚೆನ್ನಾಗಿ ಬಂದಿದೆ! ಗರಿ ಗರಿಯಾಗಿ ಬಂದಿದೆ! ಮಾಡುವ ವಿಧಾನ:- 1 ಲೋಟ ದೋಸೆ/ ಇಡ್ಲಿ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MINI BADUSHA ಮಿನಿ ಬಾದೂಷಾ

ದೀಪಾವಳಿ ಹಬ್ಬ ಎಂದ ಮೇಲೆ ಪ್ರತಿ ದಿನ ಏನಾದರೂ ಸಿಹಿ ತಿಂಡಿ ಇರಲೇ ಬೇಕು! ಅದರಲ್ಲೂ ಸುಲಭವಾಗಿ ಮಾಡುವ ಸಿಹಿ ತಿಂಡಿ ಇದ್ದರೆ ಎಷ್ಟು ಚೆನ್ನ ಅಲ್ಲವೇ?! ಮಿನಿ ಬಾದುಷಾ ಮಾಡುವ ವಿಧಾನ :- 2 ಲೋಟ ಸಕ್ಕರೆಗೆ 1 ಲೋಟ ನೀರು ಹಾಕಿ ಒಂದೆಳೆ ಪಾಕ ಮಾಡಿ ಕೊಂಡು, ಚಿಟಿಕೆ ಏಲಕ್ಕಿ ಪುಡಿ, ಸ್ವಲ್ಪ ನಿಂಬೆ ರಸ ಹಾಕಿ ಕಲೆಸಿ, ಒಂದು ತಟ್ಟೆ ಮುಚ್ಚಿಡಿ. ಬಾದುಷಾ ಹಿಟ್ಟು ತಯಾರಿಸಲು 1 ಲೋಟ ಮೈದಾ ಹಿಟ್ಟಿಗೆ, 1/4 …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BADAM POORI ಬಾದಾಮ್ ಪೂರಿ

ದೀಪಾವಳಿ ಹಬ್ಬದ ವಿಶೇಷ ಸುಲಭವಾಗಿ ಮಾಡಬಹುದಾದ ಸಿಹಿ! ಮಾಡುವ ವಿಧಾನ:- 2 ಲೋಟ ಸಕ್ಕರೆಗೆ 1 ಲೋಟ ನೀರು ಹಾಕಿ ಬಿಸಿಯಾಗಲು ಇಡಿ. 1 ಎಳೆ ಪಾಕ ಬಂದೊಡನೆ ಒಲೆಯಿಂದ ಇಳಿಸಿ, ಸ್ವಲ್ಪ ಏಲಕ್ಕಿ ಪುಡಿ ಹಾಕಿ. 1 ಲೋಟ ಮೈದಾ ಹಿಟ್ಟಿಗೆ, 2 ಚಮಚ ತುಪ್ಪ ಬಿಸಿ ಮಾಡಿ ಹಾಕಿ. ಚಿಟಿಕೆ ಉಪ್ಪು, ಚಿಟಿಕೆ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ. ಬಾದಾಮ್ ಪೂರಿ ಅಂದ ಮೇಲೆ ಬಾದಾಮಿ ಹಾಕದಿದ್ದರೆ ಹೇಗೇ?! 1/4 ಲೋಟ ಬಾದಾಮಿ ನುಣ್ಣಗೆ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

GARIGE ಗಾರಿಗೆ

ಮಹಾರಾಷ್ಟ್ರದ ಸಾಂಪ್ರಾದಾಯಕ ಸಿಹಿ ತಿನಿಸು! ಅನಂತ ಚತುರ್ದಶಿ, ಗಣೇಶನ ಹಬ್ಬದಲ್ಲಿ ತಪ್ಪದೆ ಮಾಡುವ ಸಿಹಿ! ನೋಡಲು, ರುಚಿ ಸ್ವಲ್ಪ ನಮ್ಮ ಕಜ್ಜಾಯದ ಹಾಗೇನೆ! ಆದಲೆ ಖುಷಿ ವಿಷಯ ಅಂದರೆ ಕಜ್ಜಾಯದ ಹಾಗೆ ಹೆಚ್ಚು ಎಣ್ಣೆ ಹೀರುವುದಿಲ್ಲ! ಮಾಡುವ ವಿಧಾನ:- ಕೆಂಪಗಿರುವ, ಬಲಿತ ಸಿಹಿ ಕುಂಬಳ ತೊಳೆದು, ಸಿಪ್ಪೆ ತೆಗೆದು 2 ಲೋಟದಷ್ಟು ತುರಿದಿಡಿ. 1 ಅಥವಾ 1 1/2 ಲೋಟದಷ್ಟು ಬೆಲ್ಲ ತುರಿದಿಡಿ.      ದಪ್ಪ ತಳದ ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ಕುಂಬಳ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MOTHICHUR LADDU ಮೋತಿ ಚೂರ್ ಲಡ್ಡು

ದೀಪಾವಳಿ ಹಬ್ಬ ಅಂದ ಮೇಲೆ ಎಷ್ಟು ಸಿಹಿ ಇದ್ದರೂ ಸಾಲದು. ಮೂರು ದಿನದ ಹಬ್ಬ! ಈ ದಿನ ದೀಪಾವಳಿ ಅಮಾವಾಸ್ಯೆ! ಲಕ್ಷ್ಮಿ ಪೂಜೆ! ಆ ತಾಯಿಯ ನೈವೇದ್ಯಕ್ಕೆ ಈ ಲಡ್ಡು ಇದ್ದರೆ ಚೆನ್ನಾಗಿರುತ್ತದೆ ಅಲ್ಲವೇ?! ಮಾಡುವ ವಿಧಾನ:- 1 ಅಳತೆ ಸಕ್ಕರೆಗೆ 1/4 ಅಳತೆ ನೀರು ಹಾಕಿ ಕುದಿಯಲು ಇಡಿ. ಚಿಟಿಕೆ ಏಲಕ್ಕಿ ಪುಡಿ ಹಾಕಿ. ಪಾಕ ಒಂದೆಳೆಗಿಂತ ಸ್ವಲ್ಪ ಗಟ್ಟಿ ಆದೊಡನೆ ಒಲೆಯಿಂದ ಇಳಿಸಿ. 2 ಅಳತೆ ಕಡಲೇ ಹಿಟ್ಟನ್ನು ಜರಡಿ ಹಿಡಿದಿಡಿ. ಚಿಟಿಕೆ ಕೇಸರಿ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MILK HALVA ಮಿಲ್ಕ್ ಹಲ್ವಾ

ಹಾಲಿನಿಂದ ಮಾಡುವ ರುಚಿಯಾದ, ಪೌಷ್ಟಿಕವಾದ ಸಿಹಿ ತಿಂಡಿ! ಮಾಡುವ ವಿಧಾನ:- ದಪ್ಪ ತಳದ ಬಾಣಲೆಯಲ್ಲಿ/ ಪಾತ್ರೆಯಲ್ಲಿ 1/2 ಲೀಟರ್ ಗಟ್ಟಿಯಾದ ಹಾಲು ಹಾಕಿ ಕುದಿಯಲು ಇಡಿ. ಹಾಲು ಚೆನ್ನಾಗಿ ಬಿಸಿಯಾದ ಮೇಲೆ 2 ಚಮಚ ಗಟ್ಟಿಯಾದ ಹುಳಿ ಮೊಸರು ಹಾಕಿ ಚೆನ್ನಾಗಿ ಕಲೆಸಿ ಹಾಲು ಒಡೆಯುವಂತೆ ಮಾಡಿ. ಒಡೆದ ಹಾಲು ಕುದಿದು 1/2 ಭಾಗದಷ್ಟು ಆದಾಗ, 100 ಗ್ರಾಂ ಸಪ್ಪೆ ಖೋವಾ ಪುಡಿ ಮಾಡಿ ಹಾಕಿ. 1/2 ಕಪ್ ಸಕ್ಕರೆ ( ಸುಮಾರು 75 ರಿಂದ 100 …