SABUDANA HALVA ಸಾಬೂದಾನ ಹಲ್ವಾ
ಸುಲಭವಾಗಿ ಮಾಡಬಹುದಾದ ಸಿಹಿ! ಮಾಡುವ ವಿಧಾನ:- 1 ಲೋಟ ಸಾಬೂದಾನ (ಸಬ್ಬಕ್ಕಿ ) ಯನ್ನು ರಾತ್ರಿ ಪೂರ ನೆನೆಸಿಡಿ. ಬೆಳಿಗ್ಗೆ ನೀರಿನಿಂದ ತೆಗೆದು 3 ಲೋಟ ಗಟ್ಟಿಯಾದ ಹಾಲು ಹಾಕಿ ದಪ್ಪ ತಳದ ಪಾತ್ರೆಯಲ್ಲಿ ಬೇಯಲು ಇಡಿ. ಸಾಬೂದಾನ ಬೆಂದ ಮೇಲೆ ಉರಿ ಕಡಿಮೆ ಮಾಡಿ, 1/2 ಅಥವಾ 3/4 ಲೋಟ ಸಕ್ಕರೆ (ನಿಮ್ಮ ರುಚಿಗೆ ತಕ್ಕಷ್ಟು ಸಿಹಿ) ಹಾಕಿ, ಸಾಬೂದಾನ ಪೂರಾ ಬೆಂದು ಗಟ್ಟಿಯಾಗಿ ಆಗುವವರೆಗೆ ಬೇಯಿಸಿ. ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ ಕಲೆಸಿ. …









