Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

HAYAGREEVA ಹಯಗ್ರೀವ

ತುಂಬಾ ಸುಲಭವಾಗಿ ಮಾಡಬಹುದಾದ, ರುಚಿಯಾದ ರೆಸಿಪಿ. ಈಗ ದಸರಾ ಸಮಯ. ಪ್ರತಿ ದಿನ ದೇವಿಯ ನೈವೇದ್ಯಕ್ಕೆ ಸಿಹಿ ಅಡುಗೆ ಬೇಕು!ಮಾಡುವ ವಿಧಾನ:-

1 ಲೋಟ ಕಡಲೇ ಬೇಳೆ ತೊಳೆದು ಕುಕ್ಕರಿನಲ್ಲಿ 3 ಅಥವಾ 4 ವಿಷಲ್ ಕೂಗಿಸಿಡಿ. ( ನಾನು ಬೇಳೆ 2 ಗಂಟೆ ನೆನೆಸಿ ಮಾಡಿದ್ದೇನೆ. 1 ವಿಷಲ್ ಕೂಗಿಸಿದ್ದೇನೆ) ನಂತರ ಕಡಲೇ ಬೇಳೆ ಸೋರಿ ಹಾಕಿಡಿ.

   

1 ಅಥವಾ 3/4 ಲೋಟ ಬೆಲ್ಲ ತುರಿದಿಡಿ.

4 ಚಮಚ ಒಣ ಕೊಬ್ಬರಿ / ಕಾಯಿ ತುರಿ ತುರಿದಿಡಿ.

ಸ್ವಲ್ಪ ಗೋಡಂಬಿ, ಬಾದಾಮಿ, ದ್ರಾಕ್ಷಿ , 4 ಮುರಿದ ಲವಂಗ ತುಪ್ಪದಲ್ಲಿ ಹುರಿದಿಡಿ.

   

2 ಏಲಕ್ಕಿ ಪುಡಿ ಮಾಡಿಡಿ.

ಬಾಣಲೆಯಲ್ಲಿ ಬೆಲ್ಲದ ಪುಡಿ ಹಾಕಿ ಸ್ವಲ್ಪ ನೀರು ಹಾಕಿ ಕರಗಿದ ಮೇಲೆ, ಬೆಂದ ಕಡಲೇ ಬೇಳೆ ಹಾಕಿ ಸ್ವಲ್ಪ ಗಟ್ಟಿಯಾದ ಮೇಲೆ, ಕಾಯಿ ತುರಿ, ಹುರಿದ Dry fruits, ಏಲಕ್ಕಿ ಪುಡಿ ಹಾಕಿ ಕಲೆಸಿದರೆ ರುಚಿಯಾದ ಹಯಗ್ರೀವ ಸಿದ್ಧ!

ಧನ್ಯವಾದಗಳು.

Leave a Reply

Your email address will not be published.