MASALA PEANUT ಮಸಾಲ ಪೀನಟ್
ಪೀನಟ್ ಅಂದರೆ ಕಡಲೇ ಬೀಜವನ್ನು ಬಡವರ ಬಾದಾಮಿ ಎಂದೇ ಹೇಳಬಹುದು! ಎಲ್ಲರೂ ಇಷ್ಟ ಪಟ್ಟು ತಿನ್ನುವರು. ಸಿಹಿ ಆಗಲಿ ಖಾರಾ ಆಗಲಿ ಎರಡಕ್ಕೂ ಸೈ! ರುಚಿಯಾದ ಮಸಾಲ ಪೀನಟ್ ಮಾಡುವ ರೆಸಿಪಿ ಇಲ್ಲಿದೆ! ಬಟ್ಟಲಿನಲ್ಲಿ ಕಡಲೇ ಬೀಜ ಹಾಕಿ, 4 ಚಮಚ ಕಡಲೇ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, 1 ಚಮಚ ಖಾರಾ ಪುಡಿ, ಸ್ವಲ್ಪ ಇಂಗು, 1/2 ಚಮಚ ಆಮ್ ಚೂರ್ ಪುಡಿ, 1/2 ಚಮಚ ಚಾಟ್ , ಉಪ್ಪು ಹಾಕಿ ಕಲೆಸಿ ಸ್ವಲ್ಪ …









