Showing 560 Result(s)
Kannada ಸಾಂಬಾರು ಮತ್ತು ಪಲ್ಯಗಳು

PANNEER BUTTER MASALA ಪನ್ನೀರ್ ಬಟರ್ ಮಸಾಲ

ರುಚಿಯಾದ, ಜನ ಪ್ರಿಯ Side dish! ಮಾಡುವುದು ತುಂಬಾ ಸುಲಭ! ಮಾಡುವ ವಿಧಾನ:-      100 ಗ್ರಾಂ ಪನ್ನೀರ್ ಅನ್ನು ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ. 1 ಈರುಳ್ಳಿ, 2 ಟೋಮೇಟೋ, 12 ಗೋಡಂಬಿಯನ್ನು 1 ಚಮಚ ಬೆಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಕೊಳ್ಳಿ.    ಬಾಣಲೆಯಲ್ಲಿ 1 ಚಮಚ ಬೆಣ್ಣೆ ಹಾಕಿ 1/2 ಇಂಚು ಚಕ್ಕೆ, 2 ಲವಂಗ, 2 ಏಲಕ್ಕಿ ಹಾಕಿ ಹುರಿದು, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಚ್ , ರುಬ್ಬಿದ …

Kannada ಉಪಹಾರ

GREEN MOONG KICHADI ಗ್ರೀನ್ ಮೂಂಗ್ ಕಿಚಡಿ

 ಹೆಸರು ಕಾಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ದೇಹಕ್ಕೆ ತಂಪು ಕೊಡುವ ಗುಣ ಈ ಹೆಸರು ಕಾಳಿಗಿದೆ! ಮೊಳಕೆ ಬಂದ ಹೆಸರು ಕಾಳು ಮತ್ತೂ ಆರೋಗ್ಯಕರ! ಇಂತಹ ಆರೋಗ್ಯಕರ ಮೆಾಳಕೆ ಹೆಸರು ಕಾಳಿನ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ, 1/2 ಲೋಟ ಮೊಳಕೆ ಬಂದ ಹೆಸರು ಕಾಳು ತೊಳೆದು ನೀರು ಸೋರಿ ಹಾಕಿಡಿ. 1 ಈರುಳ್ಳಿ, 2 ಟೋಮೇಟೋ ಸಣ್ಣಗೆ ಹೆಚ್ಚಿಡಿ.     ಕುಕ್ಕರಿನಲ್ಲಿ 2 ಚಮಚ ಎಣ್ಣೆ ಹಾಕಿ, ಜೀರಿಗೆ, …

Kannada Oota ಉಪಹಾರ

PALAK RICE ಪಾಲಕ್ ರೈಸ್

 ಪಾಲಕ್ ಸೊಪ್ಪು ಅತ್ಯಂತ ಆರೋಗ್ಯಕರ ಸೊಪ್ಪು! ಕಬ್ಬಿನದ ಅಂಶ ತುಂಬಿದೆ, ಬೆಳೆಯುವ ಮಕ್ಕಳಿಗೆ ತುಂಬಾ ಒಳ್ಳೆಯದು. ಪಾಲಕ್ ರೈಸ್ ಬಹಳ ಸುಲಭವಾಗಿ, ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು ಕುಕ್ಕರಿನಲ್ಲಿ 4 ಲೋಟ ನೀರು ಹಾಕಿ ಮುಚ್ಚಳ ಹಾಕದೆ ಬೇಯಿಸಿ ನೀರು ಸೋರಿ ಹಾಕಿಡಿ.     4 ಕಟ್ಟು ಪಾಲಕ್ ಸೊಪ್ಪು ಚೆನ್ನಾಗಿ ತೊಳೆದು ಬಾಣಲೆಯಲ್ಲಿ ನೀರು ಹಾಕಿ 2 ಹಸಿ ಮೆಣಸಿನ ಕಾಯಿ ಜೊತೆ ಬೇಯಿಸಿ …

Kannada ಹಬ್ಬದ ಅಡುಗೆಗಳು

KALLANGADI BEEJADA PAYASA ಕಲ್ಲಂಗಡಿ ಬೀಜದ ಪಾಯಸ

ಕಲ್ಲಂಗಡಿ ಹಣ್ಣಿನ ಎಲ್ಲಾ ಭಾಗಗಳೂ ಆರೋಗ್ಯಕ್ಕೆ ಬಹಳ ಒಳ್ಳೆಯದು! ಹಣ್ಣು ಹಾಗೇ ತಿನ್ನಲು ಚೆನ್ನಾಗಿರುತ್ತದೆ! ಬಿಳಿ ಭಾಗದಿಂದ ರುಚಿಯಾದ, ಆರೋಗ್ಯಕರ ಪಲ್ಯ ಮಾಡಬಹುದು! ( ರೆಸಿಪಿ ಹಿಂದೆ ಹಾಕಿದ್ದೇನೆ ನೋಡಿ) ಅದರ ಬೀಜ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು! ಅದರ ಒಳ್ಳೆಯ ಗುಣಗಳ ಬಗ್ಗೆ ಎಷ್ಟು ಹೇಳಿದರು ಸಾಲದು! ಮಧು ಮೇಹ ಹತೋಟಿಯಲ್ಲಿ ಇಡುತ್ತದೆ, ರಕ್ತದೊತ್ತಡ ಕಡಿಮೆ ಮಾಡುತ್ತದೆ. ಚರ್ಮ ಸುಕ್ಕು ಬರದಂತೆ ತಡೆಯುತ್ತದೆ! ಇಷ್ಚೆಲ್ಲ ಒಳ್ಳೆಯ ಗುಣಗಳಿರುವ ಕಲ್ಲಂಗಡಿ ಬೀಜ ಕಸದ ಬುಟ್ಟಿಗೆ ಎಸೆಯದೆ ರುಚಿಯಾದ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

SIHI KUMBALA HALVA ಸಿಹಿ ಕುಂಬಳ ಹಲ್ವಾ

ಸಿಹಿ ಕುಂಬಳವನ್ನು ಸಾಮಾನ್ಯವಾಗಿ ಪಲ್ಯ, ಸಾಂಬಾರ್ ಮಾಡಲು ಬಳಸುತ್ತಾರೆ. ಸಿಹಿ ಕುಂಬಳವನ್ನು ನಿಯಮಿತವಾಗಿ ಉಪಯೋಗಿಸಿದರೆ ಅದರಿಂದ ಆಗುವ ಲಾಭಗಳು ಹಲವಾರು! ಕಣ್ಣಿನ ದೃಷ್ಟಿ ಉತ್ತಮಗೊಳಿಸುತ್ತದೆ, ನೆನಪಿನ ಶಕ್ತಿ ಹೆಚ್ಚು ಮಾಡುತ್ತದೆ, ಹೃದಯದ ಆರೋಗ್ಯ ಉತ್ತಮಗೊಳಿಸುತ್ತದೆ. ಇಂತಹ ಆರೋಗ್ಯಕರ ತರಕಾರಿಯಿಂದ ಒಂದು ಸಿಹಿ ರೆಸಿಪಿ ನಿಮಗಾಗಿ! ಸಿಹಿ ಕುಂಬಳಕಾಯಿ ಹಲ್ವಾ ಮಾಡುವ ವಿಧಾನ:- ಸಿಹಿ ಕುಂಬಳ ತೊಳೆದು, ಸಿಪ್ಪೆ ತೆಗೆದು ತುರಿದಿಡಿ. 2 ಅಳತೆ ತುರಿದ ಕುಂಬಳ ಕಾಯಿಗೆ, 1 ಲೋಟ ಸಕ್ಕರೆ ಅಥವಾ ಬೆಲ್ಲ ಬೇಕಾಗುತ್ತದೆ. ನಾನು ಜೋನಿ …

Kannada ಸಾಂಬಾರು ಮತ್ತು ಪಲ್ಯಗಳು

MIRCHI KA SALAN & PULKA ಮಿರ್ಚಿ ಕಾ ಸಲನ್

ಹೈದರಾಬಾದಿನ ಜನಪ್ರಿಯ Side dish! ಆಂಧ್ರ ಪ್ರದೇಶದ ಜನ ಹೆಚ್ಚು ಖಾರಾ ಪ್ರಿಯರು! ಮದುವೆಗಳಲ್ಲಿ, ವಿಶೇಷ ದಿನಗಳಲ್ಲಿ ಇದನ್ನು ಮಾಡೇ ಮಾಡುತ್ತಾರೆ! ಮೆಣಸಿನ ಕಾಯಿಯನ್ನು ರುಚಿಕರವಾದ ಗೊಜ್ಜಿನಲ್ಲಿ ಬೇಯಿಸುವುದೇ ಈ ರೆಸಿಪಿ ವಿಶೇಷತೆ! ಚಪಾತಿ, ಬಿಸಿ ಅನ್ನ, ಪಲಾವ್, ಬಿರಿಯಾನಿ, ಘೀ ರೈಸ್, ಜೀರಾ ರೈಸ್ ಜೊತೆ ಒಳ್ಳೆಯ Combination! ಮಾಡುವ ವಿಧಾನ :- 10 ರಿಂದ 12 ಬಜ್ಜಿ ಮೆಣಸಿನ ಕಾಯಿ ತೊಳೆದು ಉದ್ದಕ್ಕೆ ಸೀಳಿ ಬೀಜ ತೆಗೆದಿಡಿ. ತುಂಬಾ ಉದ್ದ ಇದ್ದರೆ ಬೇಕಾದರೆ ಎರಡು …

Kannada ಸಾಂಬಾರು ಮತ್ತು ಪಲ್ಯಗಳು

NIMBE RASAM ನಿಂಬೆ ರಸಂ

ಪ್ರತಿ ದಿನ ಟೊಮೇಟೊ ರಸಂ ತಿಂದು ಬೇಸರವಾಗಿದ್ದರೆ ಬದಲಾವಣೆಗಾಗಿ ಈ ರಸಂ ಮಾಡಿ ನೋಡಿ! ಸುಲಭ! ರುಚಿಕರ! ಅಲ್ಲದೆ ಟೊಮೇಟೊ ಬೆಲೆ ಕೂಡ ಹೆಚ್ಚಾಗಿದೆ! ಹಾಗಾದರೆ ನಿಂಬೆ ರಸ ಮಾಡಿ! ಮಾಡುವ ವಿಧಾನ:- ೧/೨ ಕಪ್ ಬೇಳೆಗೆ ೧ ಚಮಚ ಎಣ್ಣೆ, ಚಿಟಿಕೆ ಅರಿಶಿನ ಹಾಕಿ ೪ ವಿಷಲ್ ಕೂಗಿಸಿಡಿ. ಅದನ್ನು ಚೆನ್ನಾಗಿ ಹಿಸುಕಿ ( blender) 2 ಲೋಟಾ ನೀರು ಹಾಕಿ 2 ಉದ್ದಕ್ಕೆ ಹೆಚ್ಚಿದ ಹಸಿ ಮೆಣಸಿನ kayi 1 ಚಮಚ ಹುರಿದು ತರಿ …

Kannada ಸಾಂಬಾರು ಮತ್ತು ಪಲ್ಯಗಳು

KADAMBA SAMBAR ಕದಂಬ ಸಾಂಬಾರ್

ತಮಿಳು ನಾಡಿನ ಜನಪ್ರಿಯ ಸಾಂಬಾರ್. ಹಬ್ಬದ ದಿನಗಳಲ್ಲಿ, ವಿಶೇಷ ದಿನಗಳಲ್ಲಿ ಮಾಡುತ್ತಾರೆ. ಕದಂಬ ಎಂದರೇನೆ ಎಲ್ಲಾ ಸೇರಿಸಿದ್ದು ಎಂದು ಅರ್ಥ! ಮಾಡುವ ವಿಧಾನ:- ನಿಮಗೆ ಇಷ್ಟವಾದ ತರಕಾರಿಗಳನ್ನು ದೊಡ್ಡ ದೊಡ್ಡದಾಗಿ ಹೆಚ್ಚಿಡಿ. ಈರುಳ್ಳಿ, ಬೆಳ್ಳುಳ್ಳಿ ಬಿಟ್ಟು ಬೇರೆ ಯಾವ ತರಕಾರಿ ಬೇಕಾದರೂ ಹಾಕಬಹುದು.     1 ನಿಂಬೆ ಹಣ್ಣಿನ ಗಾತ್ರದ ಹುಣಿಸೆ ರಸ ತೆಗೆದು ಚೂರು ಬೆಲ್ಲ ಸೇರಿಸಿಡಿ. 1 ಬಟ್ಟಲು ತೊಗರಿ ಬೇಳೆಗೆ ಚಿಟಿಕೆ ಅರಿಶಿಣ, 1 ಚಮಚ ಎಣ್ಣೆ ಹಾಕಿ 4 ವಿಷಲ್ …

Kannada Tindi Tinisu ಖಾರ ತಿನಿಸುಗಳು

TIRUPATHI VADE ತಿರುಪತಿ ವಡೆ

ತಿರುಪತಿ ಹಿಂದೂಗಳ ಪ್ರಸಿದ್ಧ ಪುಣ್ಯ ಕ್ಷೇತ್ರ, ಅದು ಕಲಿ ಯುಗ ದೈವ ಶ್ರೀನಿವಾಸ ನೆಲೆ ನಿಂತ ಕ್ಷೇತ್ರ, ಶ್ರೀನಿವಾಸನಿಗೆ ಬಹಳ ಪ್ರಿಯವಾದದ್ದು ತಿರುಪತಿ ಲಡ್ಡು ಮತ್ತು ತಿರುಪತಿ ವಡೆ. ತಿರುಪತಿ ವಡೆ ಮಾಡುವ ವಿಧಾನ: –     1ಬಟ್ಟಲು ಉದ್ದಿನ ಕಾಳನ್ನು (ಸಿಪ್ಪೆ ಸಹಿತ) ತೊಳೆದು 4 ಘಂಟೆ ನೆನೆಸಿ, ಆದಷ್ಟು ನೀರು ಸೇರಿಸದೆ ಗಟ್ಟಿಯಾಗಿ (ಕಡಲೇ ಬೇಳೆ ವಡೆಯಂತೆ), ರುಬ್ಬಿ ಇಟ್ಟು ಕೊಳ್ಳಿ, 2 ಚಮಚ ಜೀರಿಗೆ, 2 ಚಮಚ ಮೆಣಸು ಹಸಿಯಾಗಿಯೇ ತರಿ ತರಿಯಾಗಿ …

Kannada ಉಪಹಾರ

KAANCHEEPURAM THATTE IDLI & KADALE BELE CHUTNEY ಕಾಂಚೀಪುರಂ ಮಸಾಲ ತಟ್ಟೆ ಇಡ್ಲಿ ಮತ್ತು ಕಡಲೇ ಬೇಳೆ ಚಟ್ನಿ

ಹಲೋ ಫ್ರೆಂಡ್ಸ್, ಬಹಳ ಮನೆಗಳಲ್ಲಿ ಬೆಳಗಿನ ತಿಂಡಿಗೆ ಇಡ್ಲಿ ಸಾಂಬಾರ್ ಖಾಯಂ, ಕೆಲವರು ಇಷ್ಟ ಪಟ್ಟು ತಿಂದರೆ, ಇನ್ನು ಕೆಲವರು ಕಷ್ಟ ಪಟ್ಟು ತಿನ್ನುತ್ತಾರೆ, ಹೀಗಿರುವಾಗ ಉಳಿದ, ಹುಳಿ ಬಂದ ಇಡ್ಲಿ ಹಿಟ್ಟಿನಿಂದ ರುಚಿಯಾದ, ವಿಭಿನ್ನವಾದ ಇಡ್ಲಿ ಮಾಡಬಹುದು. ಕಾಂಚೀಪುರಂ ಮಸಾಲ ತಟ್ಟೆ ಇಡ್ಲಿ ಮತ್ತು ಕಡಲೇ ಬೇಳೆ ಚಟ್ನಿ ಮಾಡುವ ವಿಧಾನ:-     ಚಟ್ನಿಗೆ ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, 4 ಚಮಚ ಕಡಲೇ ಬೇಳೆ, 1 ಹೆಚ್ಚಿದ ಈರುಳ್ಳಿ ಹಾಕಿ ಕೆಂಪಗೆ …