Showing 560 Result(s)
Kannada ಸಾಂಬಾರು ಮತ್ತು ಪಲ್ಯಗಳು

DIDEER TOMATO RASAM ದಿಡೀರ್ ಟೊಮೇಟೊ ರಸಂ

ಮನೆಗೆ ಇದ್ದಕ್ಕಿದ್ದಂತೆ 4 ಜನ ಊಟದ ಸಮಯದಲ್ಲಿ ಬಂದಿದ್ದಾರೆ, ಅಯ್ಯೋ ದೇವರೇ ಏನಪ್ಪಾ ಮಾಡೋದು ಅಂತ ಯೋಚನೆ ಮಾಡಬೇಡಿ! ಫಟಾಫಟ್ ಅಂತ 10 ನಿಮಿಷದಲ್ಲಿ ರುಚಿಯಾಗಿ, ಸುಲಭವಾಗಿ ಮಾಡುವ ರೆಸಿಪಿ ನಿಮಗಾಗಿ! ಮಾಡುವ ವಿಧಾನ:!-     4 ಟೊಮೇಟೊ ತೊಳೆದು ಸಣ್ಣಗೆ ಹೆಚ್ಚಿಡಿ. 1 ಬೆಳ್ಳುಳ್ಳಿ ಸಿಪ್ಪೆಯನ್ನು ಬಿಡಿಸಿಡಿ. ಟೊಮೇಟೊ, ಬೆಳ್ಳುಳ್ಳಿ, 3 ಹಸಿ ಮೆಣಸಿನಕಾಯಿ, 1 ಚಮಚ ಜೀರಿಗೆ, 1 ಚಮಚ ಕರಿ ಮೆಣಸು ಹಾಕಿ ನೀರು ಹಾಕಿದೆ ನುಣ್ಣಗೆ ರುಬ್ಬಿಕೊಳ್ಳಿ.     …

Kannada ಸಾಂಬಾರು ಮತ್ತು ಪಲ್ಯಗಳು

BESAN BENDI FRY ಬೇಸನ್ ಬೆಂಡಿ ಫ್ರೈ

ಬೆಂಡೆಕಾಯಿ ತುಂಬಾ ಜನ ಇಷ್ಟ ಪಟ್ಟು ತಿನ್ನುವ ತರಕಾರಿ! ಆರೋಗ್ಯಕ್ಕೆ ಕೂಡಾ ಬಹಳ ಒಳ್ಳೆಯದು. ಬೆಂಡೆಕಾಯಿಯ ಒಂದು ರುಚಿ ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1/2 ಕೇಜಿ ಎಳೆಯ ಬೆಂಡೆಕಾಯಿ ತೊಳೆದು ಒರಸಿ ತೊಟ್ಟು ತೆಗೆದು ಉದ್ದಕ್ಕೆ ಸೀಳಿ 1 ಇಂಚು ಉದ್ದಕ್ಕೆ ಹೆಚ್ಚಿಡಿ.     ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಬೆಂಡೆಕಾಯಿ ಹಾಕಿ 3/4 ಭಾಗ ಬೇಯುವಷ್ಟು ಗರಿ ಗರಿಯಾಗಿ ಹುರಿದಿಡಿ.     ಬೇರೆ ಬಾಣಲೆಯಲ್ಲಿ 2 ಚಮಚ ಎಣ್ಣೆ …

Kannada Tindi Tinisu ಖಾರ ತಿನಿಸುಗಳು

FLOWER SAMOSA ಫ್ಲವರ್ ಸಮೋಸ

ಸಮೋಸ ಸಾಮಾನ್ಯವಾಗಿ ಎಲ್ಲರೂ ಕೋನ್ ಆಕಾರದಲ್ಲಿ ಮಾಡುತ್ತಾರೆ. ಅದನ್ನು ಹೂವಿನ ಆಕಾರದಲ್ಲಿ ಮಾಡುವುದೇ ಈ ರೆಸಿಪಿ ವಿಶೇಷ! ಮಾಡುವ ವಿಧಾನ:-     4 ಆಲೂಗಡ್ಡೆ ಬೇಯಿಸಿ ಸಿಪ್ಪೆಯನ್ನು ತೆಗೆದು ತುರಿದಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, 1/2 ಇಂಚು ತುರಿದ ಶುಂಠಿ, 1/2 ಚಮಚ ಹಸಿ ಮೆಣಸಿನಕಾಯಿ ತುರಿ, 1/2 ಚಮಚ ಗರಂ ಮಸಾಲಾ, 1/2 ಚಮಚ ಆಮ್ ಚೂರ್ ಪುಡಿ, 1/4 ಚಮಚ ಧನಿಯಾ ಪುಡಿ, ಉಪ್ಪು, ಆಲೂಗಡ್ಡೆ ತುರಿ ಹಾಕಿ …

Kannada ಉಪಹಾರ

RAVA PONGAL ರವಾ ಪೊಂಗಲ್

ನಾವು ಸಾಧಾರಣವಾಗಿ ಉಡುಪಿ ಶೈಲಿಯ ಹೋಟೆಲ್ ಗಳಿಗೆ ಹೋದಾಗ, ಮಾಣಿ ಹೇಳುವ ತಿಂಡಿಗಳ, ಉದ್ದನೆ ಪಟ್ಟಿಯಲ್ಲಿ ರವಾ ಪೊಂಗಲ್ ಸಹ ಒಂದು, ರುಚಿಕರ, ಆರೋಗ್ಯಕರ, ಮಾಡುವುದು ಬಹಳ ಸುಲಭ, ಎಷ್ಟು ಹೆಸರು ಬೇಳೆ ತಿಂದರೂ ಒಳ್ಳೆಯದು, ಹಾಗಾದರೆ ನೀವು ಒಮ್ಮೆ ಮಾಡಿ ನೋಡಿ. ರವಾ ಪೊಂಗಲ್ ಮಾಡುವ ವಿಧಾನ:-     1 ಲೋಟ medium ರವೆಯನ್ನು ಹುರಿದಿಟ್ಟುಕೊಳ್ಳಿ, 1 ಲೋಟ ಹೆಸರು ಬೇಳೆಯನ್ನು ಸ್ವಲ್ಪ ಹುರಿದು 2 ಲೋಟ ನೀರು ಹಾಕಿ 2 ವಿಷಲ್ ಕೂಗಿಸಿ ಇಟ್ಟು …

Kannada Tindi Tinisu ಸಿಹಿ ತಿನಿಸುಗಳು

DRY FRUITS SHANKARA POLI ಡ್ರೈ ಫ್ರೂಟ್ಸ್ ಶಂಕರ ಪೋಳಿ

ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದರಲ್ಲೂ ಬೆಳೆಯುತ್ತಿರುವ ಮಕ್ಕಳಿಗೆ ಮತ್ತಷ್ಟು ಒಳ್ಳೆಯದು! ಮಕ್ಕಳು ಸಿಹಿ ತಿಂಡಿಗಳನ್ನು ಬಹಳ ಇಷ್ಟ ಪಟ್ಟಿ ತಿನ್ನುತ್ತಾರೆ. ಡ್ರೈ ಫ್ರೂಟ್ಸ್ ಹಾಕಿ ಸಿಹಿ ತಿಂಡಿ ಮಾಡಿಕೊಡಿ ಮತ್ತಷ್ಟು ಇಷ್ಟ ಪಟ್ಟು ತಿನ್ನುತ್ತಾರೆ! ಡ್ರೈ ಫ್ರೂಟ್ಸ್ ಶಂಕರ ಪೋಳಿ ಮಾಡುವ ವಿಧಾನ:     1 ಬಟ್ಟಲು ಮೈದಾ, 1/4 ಬಟ್ಟಲು ಚಿರೋಚಿ ರವೆ, 2 ಚಮಚ ಅಕ್ಕಿ ಹಿಟ್ಟು, 1/2 ಬಟ್ಟಲು ಸಕ್ಕರೆ ಪುಡಿ, ಚಿಟಿಕೆ ಏಲಕ್ಕಿ ಪುಡಿ, 1 ಚಮಚ ಬೆಣ್ಣೆ/1 …

Kannada ಸಾಂಬಾರು ಮತ್ತು ಪಲ್ಯಗಳು

IYENGARS RASAM ಅಯ್ಯಂಗಾರ್ಸ್ ರಸ

ರಸಂಗಳಲ್ಲಿ ಹಲವಾರು ಬಗೆ! ಒಬ್ಬೊಬ್ಬರದು ಒಂದೊಂದು ಶೈಲಿ ರಸಂ ಇರುತ್ತದೆ. ಇದು ನಮ್ಮ ಮನೆಯ ಶೈಲಿ. ರುಚಿ ಅದ್ಭುತವಾಗಿರುತ್ತದೆ! ಅಯ್ಯಂಗಾರ್ಸ್ ರಸಂ ಮಾಡುವ ವಿಧಾನ:- 1/2 ಲೋಟ ತೊಗರಿ ಬೇಳೆಯನ್ನು (50 gms)ತೊಳೆದು 1 ಚಮಚ ಎಣ್ಣೆ, ಚಿಟಿಕೆ ಅರಿಶಿಣ ಹಾಕಿ 4 ವಿಷಲ್ ಕೂಗಿಸಿ. ಬೆಂದ ಬೇಳೆಯನ್ನು mixie/blender ನಲ್ಲಿ ನುಣ್ಣಗೆ ರುಬ್ಬಿ ಸ್ವಲ್ಪ ನೀರು ಸೇರಿಸಿ ತಿಳಿ ಮಾಡಿಡಿ. 2 ಟೀ ಚಮಚ ಕಡಲೇ ಬೇಳೆ, 2 ಟೀ ಚಮಚ ಉದ್ದಿನ ಬೇಳೆ, 1 1/2 …

Kannada Tindi Tinisu ಖಾರ ತಿನಿಸುಗಳು

AVARE KALU HUSALI ಅವರೇ ಕಾಳು ಹುಸಲಿ

ಅವರೇ ಕಾಯಿ ಸೀಸನ್ ಪ್ರಾರಂಭವಾದರೆ ಎಲ್ಲೆಡೆ ಅವರೇ ರಾಶಿ! ರುಚಿ ರುಚಿಯಾದ ಎಷ್ಟೋ ಬಗೆಯ ಅಡುಗೆಗಳನ್ನು ಮಾಡಬಹುದು! ಅದರಲ್ಲಿ ಒಂದು ಅವರೇ ಕಾಳಿನ ಹುಸಲಿ! ಚಪಾತಿ, ಪೂರಿ, ದೋಸೆ, ಅಕ್ಕಿ ರೊಟ್ಟಿ ಜೊತೆ ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ: – 1 ಲೋಟ ಎಳೆಯದಾದ ಅವರೇ ಕಾಳನ್ನು 2 ವಿಷಲ್ ಕೂಗಿಸಿಡಿ.     2 ಟೇಬಲ್ ಚಮಚ ಬಿಳಿ ಎಳ್ಳು, 1/2 ಟೇಬಲ್ ಚಮಚ ಜೀರಿಗೆ ಹುರಿದು ಪುಡಿ ಮಾಡಿಡಿ. 4 ಚಮಚ ತೆಂಗಿನ ಕಾಯಿ …

Kannada ಉಪಹಾರ

CHANNA BATURA ಚನ್ನಾ ಬತೂರ

ಜನ ಪ್ರಿಯ ತಿಂಡಿ. ಹೋಟೆಲ್ ನಲ್ಲಿ ಹೋದಾಗ ತಪ್ಪದೆ ತಿನ್ನುವ ತಿಂಡಿ. ಮನೆಯಲ್ಲಿ ಸುಲಭವಾಗಿ, ರುಚಿಯಾಗಿ, ಶುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ. ಚನ್ನಾ (ಚೋಲೆ) ಮಾಡುವ ವಿಧಾನ:- 100 ಗ್ರಾಂ ಕಾಬೂಲ್ ಕಡಲೆ ಕಾಳು ತೊಳೆದು ರಾತ್ರಿ ನೆನೆಸಿಡಿ.     1 ಚಮಚ ಗಸಗಸೆ, 6 ಗೋಡಂಬಿ ಬಿಸಿನೀರಲ್ಲಿ 1 ಗಂಟೆ ನೆನೆಸಿ ನುಣ್ಣಗೆ ರುಬ್ಬಿ. 1 ಟೊಮೇಟೋ ಬಿಸಿ ನೀರಲ್ಲಿ ಹಾಕಿ ಸಿಪ್ಪೆ ತೆಗೆದು ಗೋಡಂಬಿ ಜೊತೆ ಮತ್ತೆ ರುಬ್ಬಿ. ( ಸಾಮಾನ್ಯವಾಗಿ ಚೋಲೆ ಮಾಡುವಾಗ …

Kannada ಉಪಹಾರ

KHARA BATH ಖಾರಾ ಬಾತ್

ನಾವು ಸಾಧಾರಣವಾಗಿ ಹೋಟೆಲ್ ಗೆ ಹೋದಾಗ ತಿನ್ನುವ ಜನಪ್ರಿಯವಾದ ತಿಂಡಿಗಳಲ್ಲಿ ಖಾರಾ ಬಾತ್ ಸಹ ಒಂದು, ರುಚಿಯಾದ ಈ ಖಾರಾ ಬಾತ್ ಮಾಡುವ ವಿಧಾನ ಇಲ್ಲಿದೆ. ಖಾರಾ ಬಾತ್ ಮಾಡುವ ವಿಧಾನ:- 1 ಇಂಚು ಚಕ್ಕೆ, 4 ಲವಂಗ, 4 ಏಲಕ್ಕಿ, 8 ಬ್ಯಾಡಗಿ ಮೆಣಸಿನ ಕಾಯಿ, 6 ಗುಂಟೂರು ಮೆಣಸಿನ ಕಾಯಿ, (ಮೆಣಸಿನ ಕಾಯಿ ಹುರಿದಿರಬೇಕು), 6 ಚಮಚ ಕಾಯಿ ತುರಿಯನ್ನು ನೀರು ಹಾಕದೆ ರುಬ್ಬಿಟ್ಟು ಕೊಳ್ಳಿ. (ನಾನು ಕೇವಲ ಬ್ಯಾಡಗಿ ಮೆಣಸಿನ ಕಾಯಿ ಮಾತ್ರ ಹಾಕಿದ್ದೇನೆ, …

Kannada ಹಬ್ಬದ ಅಡುಗೆಗಳು

GASAGASE PAYASA ಗಸಗಸೆ ಪಾಯಸ

ಗಸಗಸೆಯಲ್ಲಿ ದೇಹವನ್ನು ತಂಪು ಮಾಡುವ ಗುಣವಿದೆ. ಬಾಯಿ ಹುಣ್ಣು ಆದಾಗ ಮನೆಯಲ್ಲಿ ದೊಡ್ಡವರು ಹೇಳ್ತಾರೆ ಒಂದು ಚಮಚ ಗಸಗಸೆ ತಿನ್ನಿ ಎಲ್ಲಾ ಸರಿ ಹೋಗುತ್ತೆ ಅಂತ! ಗಸಗಸೆ ಪಾಯಸ ಬಹಳ ರುಚಿಯಾದ, ಆರೋಗ್ಯಕರ ಪಾಯಸ. ಮಾಡುವುದು ತುಂಬಾ ಸುಲಭ! ಮಾಡುವ ವಿಧಾನ:- 4 ಚಮಚ ಟೇಬಲ್ ಚಮಚ ಗಸಗಸೆ (50 ಗ್ರಾಂ), 1 ಟೀ ಚಮಚ ಅಕ್ಕಿ ಬಿಸಿ ನೀರಲ್ಲಿ 1 ಗಂಟೆ ನೆನೆಸಿಡಿ. ನಂತರ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಸಾಧ್ಯವಾದಷ್ಟು ನುಣ್ಣಗೆ ರುಬ್ಬಿ. …