ಖಾರ ತಿನಿಸುಗಳು

BURGER ಬರ್ಗರ್

BURGER ಬರ್ಗರ್

ಎಲ್ಲರ ಫೇವರಿಟ್. ಮನೆಯಲ್ಲಿ ಮಾಡುವ ಸುಲಭವಾದ ವಿಧಾನ ಇಲ್ಲಿದೆ.

ಮಾಡುವ ವಿಧಾನ:-

ಪ್ಯಾಟೀಸ್ ಮಾಡಲು :-

ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿ. ಒಂದು ಕ್ಯಾರೆಟ್, ಒಂದು ಕ್ಯಾಪ್ಸಿಕಂ, ಸ್ವಲ್ಪ ಕ್ಯಾಬೇಜ್ ಸಣ್ಣಗೆ ತುರಿದಿಡಿ. ಸ್ವಲ್ಪ ಬಣಾಣಿ ಬೇಯಿಸಿ ಪುಡಿ ಮಾಡಿಡಿ.

ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳಿಗೆ ಅರ್ಧ ಚಮಚ ಚಾಟ್ ಮಸಾಲಾ, ಅರ್ಧ ಚಮಚ ಆಮ್ ಚೂರ್ ಪುಡಿ, ಅರ್ಧ ಚಮಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಹಸಿ ಮೆಣಸಿನಕಾಯಿ ಪೇಸ್ಟ್, ಸ್ವಲ್ಪ ಬ್ರೆಡ್ ಕ್ರಂಬ್ಸ್ ಹಾಕಿ ಚೆನ್ನಾಗಿ ಕಲೆಸಿ, ನಿಮಗೆ ಬೇಕಾದ ಅಳತೆಯ ತೆಳ್ಳನೆಯ ಕಟ್ಲೆಟ್ ಮಾಡಿ , ಮೈದಾ ಮಿಶ್ರಣದಲ್ಲಿ ಅದ್ದಿನ್ಗ್, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಕಾವಲಿಯ ಮೇಲೆ ಹಾಕಿ ಕಡಿಮೆ ಉರಿಯಲ್ಲಿ ಎಣ್ಣೆಹಾಕಿ ಎರಡೂ ಕಡೆ ಗರಿ ಗರಿಯಾಗುವಂತೆ ಪ್ಯಾಟೀಸ್ ಮಾಡಿ ತೆಗೆದಿಡಿ.

ಸಣ್ಣ ಈರುಳ್ಳಿ ತೆಳ್ಳಗೆ ಹೆಚ್ಚಿ ನೀರಿನಲ್ಲಿ ಹಾಕಿಡಿ.

ಒಂದು ಚಮಚ ಮೈದಾ ಒಂದು ಚಮಚ ಕಾರ್ನ್ ಫ್ಲೋರ್ ಸ್ವಲ್ಪ ಉಪ್ಪು ಸೇರಿಸಿ ತೆಳ್ಳನೆಯ ಹಿಟ್ಟು ಕಲೆಸಿಡಿ.

ದೊಡ್ಡ ದೊಡ್ಡ ಬನ್ ಅನ್ನು ಮಧ್ಯದಲ್ಲಿ ಕತ್ತರಿಸಿ ಸ್ವಲ್ಪ ಬೆಣ್ಣೆ ಹಾಕಿ ಮಧ್ಯದ ಭಾಗ ಸ್ವಲ್ಪ ಬೇಯಿಸಿ ತೆಗೆದಿಡಿ. ಒಂದು ಭಾಗಕ್ಕೆ ಮಯ್ಯೋನೀಸ್ ಸಾಸ್ ಹಚ್ಚಿ, ಇನ್ನೊಂದು ಕಡೆ ನಿಮಗೆ ಇಷ್ಟವಾದ ಸಾಸ್ ಸವರಿ ಒಂದು ಕ್ಯಾಬೇಜ್ ಎಲೆ ಇಟ್ಟು( ನಿಮಗೆ ಬ್ರೊಕೋಲಿ ಸಿಕ್ಕರೆ ಅದನ್ನು ಉಪಯೋಗಿಸಿ) ಅದರ ಮೇಲೆ ಪ್ಯಾಟೀಸ್, ಈರುಳ್ಳಿ ರಿಂಗ್, ಹೆಚ್ಚಿದ ಟೋಮೆಟೋ ಇಟ್ಟು ಸ್ವಲ್ಪ ಆರಿಗ್ಯಾನೋ ಅಥವಾ ಚೆಲ್ಲಿ ಫ್ಲೇಕ್ಸ್ ಉದುರಿಸಿ ಸವಿಯಿರಿ.

ನಾನು ಸಾಧಾರಣ ಬನ್. ಬೇಕರಿಯಲ್ಲಿ ಬರ್ಗರ್ ಬನ್ ಸಿಗುತ್ತದೆ. ಅದನ್ನು ಉಪಯೋಗಿಸಿದರೆ ಇನ್ನೂ ಚೆನ್ನಾಗಿರುತ್ತದೆ.

ಧನ್ಯವಾದಗಳು 🙏🙏🙏

Leave a Reply

Your email address will not be published.