Kannada ಉಪಹಾರ ಸಾಂಬಾರು ಮತ್ತು ಪಲ್ಯಗಳು

ALU KURMA ಆಲೂ ಕುರ್ಮಾ

ಆಲೂಗೆಡ್ಡೆ ಎಲ್ಲರಿಗೂ ಇಷ್ಟವಾಗುವ ತರಕಾರಿ! ಇದರ ರುಚಿಯಾದ ಕುರ್ಮಾ ಮಾಡುವ ವಿಧಾನ ಇಲ್ಲಿದೆ!

ಮಾಡುವ ವಿಧಾನ:-

4 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ.

2 ಟೋಮೋಟೋ, 1 ಈರುಳ್ಳಿ, 3 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

2 ಟೀ ಚಮಚ ಗಸಗಸೆ, 6 ಗೋಡಂಬಿ ಬಿಸಿ ನೀರಿನಲ್ಲಿ 1 ಗಂಟೆ ನೆನೆಸಿ, 1/2 ಇಂಚು ಶುಂಠಿ, 4 ಚಮಚ ಕಾಯಿ ತುರಿಯೊಂದಿಗೆ ನುಣ್ಣಗೆ ರುಬ್ಬಿಡಿ. ಮೊದಲು ಗಸಗಸೆ ರುಬ್ಬಿ ನಂತರ ಕಾಯಿ ತುರಿ ಸೇರಿಸಿ ರುಬ್ಬಿ.

  

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, 1 ಇಂಚು ಚಕ್ಕೆ, 4 ಲವಂಗ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ನಂತರ ಹೆಚ್ಚಿದ ಟೋಮೇಟೋ, ಹಸಿ ಮೆಣಸಿನಕಾಯಿ, ಚಿಟಿಕೆ ಅರಿಷಿಣ ಹಾಕಿ ಹುರಿದು, ರುಬ್ಬಿದ ಮಿಶ್ರಣ, 1 ಟೀ ಚಮಚ ಖಾರದ ಪುಡಿ, 1 ಚಮಚ ಧನಿಯಾ ಪುಡಿ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಕುದಿಯಲು ಇಡಿ.

  

ನಂತರ ಆಲೂಗೆಡ್ಡೆಯ ತುಂಡುಗಳು ಹಾಕಿ ಕಡಿಮೆ ಉರಿಯಲ್ಲಿ ಕುದಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಆಲೂ ಕುರ್ಮಾ ರೆಡಿ!

ಪೂರಿ, ಚಪಾತಿ, ದೋಸೆಯೊಂದಿಗೆ ಸೂಪರ್ ಕಾಂಬಿನೇಶನ್!

ಧನ್ಯವಾದಗಳು

Leave a Reply

Your email address will not be published.